ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣ ತೆರವು ಕಾರ್ಯ ಆರಂಭ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 26: ನಾಗಸಂದ್ರ-ಯಲಚೇನಹಳ್ಳಿ ಮಾರ್ಗದ ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣದ ಒಂದು ಭಾಗದ ತೆರವು ಕಾರ್ಯ ಆರಂಭಗೊಂಡಿದೆ.

ಆಗಸ್ಟ್‌ 1ರಿಂದಲೇ ಈ ಪ್ರವೇಶ ದ್ವಾರವನ್ನು ಬಂದ್ ಮಾಡಲಾಗಿತ್ತು.ಆರ್‌ವಿ ರಸ್ತೆ-ಬೊಮ್ಮಸಂದ್ರ(ಹಳದಿ ಮಾರ್ಗ) ನಿರ್ಮಾಣ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಮೆಟ್ರೋ ನಿಲ್ದಾಣವನ್ನು ಬಂದ್ ಮಾಡಲಾಗಿದೆ.

ಆರ್‌ವಿ ರಸ್ತೆಯ ಮೆಟ್ರೋ ನಿಲ್ದಾಣದ ಒಂದು ಪ್ರವೇಶದ್ವಾರ ಕೆಡವಲು ಸಿದ್ಧತೆಆರ್‌ವಿ ರಸ್ತೆಯ ಮೆಟ್ರೋ ನಿಲ್ದಾಣದ ಒಂದು ಪ್ರವೇಶದ್ವಾರ ಕೆಡವಲು ಸಿದ್ಧತೆ

ಈಗಾಗಲೇ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರ ಮಾರ್ಗದ ಕಾಮಗಾರಿ ಆರಂಭವಾಗಿದೆ. ಇನ್ನುಮುಂದೆ ಕೇವಲ ಆರ್‌ ರಸ್ತೆಯಿಂದ ನಾಗಸಂದ್ರ ಹೋಗುವ ಮಾತ್ರ ತೆರೆದಿರುತ್ತದೆ.

ಮೆಟ್ರೋ ನಿಲ್ದಾಣದಲ್ಲಿ ಮಾರ್ಗ ಲಿಫ್ಟ್ ಸೌಲಭ್ಯ

ಮೆಟ್ರೋ ನಿಲ್ದಾಣದಲ್ಲಿ ಮಾರ್ಗ ಲಿಫ್ಟ್ ಸೌಲಭ್ಯ

ಆರ್‌ವಿ ರಸ್ತೆಯಿಂದ ನಾಗವಾರಕ್ಕೆ ತೆರಳುವವರಿಗೆ ಲಿಫ್ಟ್‌ ಸೌಲಭ್ಯವೂ ಲಭ್ಯವಿರಲಿದೆ. ಲಕ್ಷ್ಮಣರಾವ್ ಪಾರ್ಕ್‌ನಲ್ಲಿರುವ ಮರಗಳನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯ ಕೈಗೊಂಡಿರುವ ಕಾರಣ ಅನಿವಾರ್ಯವಾಗಿ ಆರ್‌ವಿ ರಸ್ತೆಯ ನಮ್ಮ ಮೆಟ್ರೋ ನಿಲ್ದಾಣದ ಒಂದು ಭಾಗವನ್ನು ತೆರವುಗೊಳಿಸಲಾಗುತ್ತಿದೆ.

ಹಳದಿ ಮಾರ್ಗ 2021ಕ್ಕೆ ಮುಕ್ತಾಯ

ಹಳದಿ ಮಾರ್ಗ 2021ಕ್ಕೆ ಮುಕ್ತಾಯ

ಬಿಎಂಆರ್‌ಸಿಎಲ್ ಮರಗಳನ್ನು ಉಳಿಸುವ ನಿಟ್ಟಿನಲ್ಲಿ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರ ತೆರಳುವ ನಿಲ್ದಾಣದಲ್ಲಿ ಈಗಿರುವ ನಿಲ್ದಾಣವನ್ನೇ ವಿಸ್ತರಿಸಲು ಮುಂದಾಗಿದೆ. ಅದರೊಂದಿಗೆ ವೆಚ್ಚ ಕೂಡ ಕಡಿಮೆಯಾಗಲಿದೆ. ಕಾಮಗಾರಿಯೂ ಬೇಗ ಮುಗಿಯಲಿದೆ.ಆರ್‌ವಿ ರಸ್ತೆಯಿಂದ ಸಿಲ್ಕ್‌ ಬೋರ್ಡ್‌ ಹಳದಿ ಮಾರ್ಗ 2021ಕ್ಕೆ ಮುಕ್ತಾಯಗೊಳ್ಳಲಿದೆ.

ಪ್ರಯಾಣಿಕರ ಪರದಾಟ

ಪ್ರಯಾಣಿಕರ ಪರದಾಟ

ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣ ಬಂದ್ ಆಗುವುದರಿಂದ ಪ್ರಯಾಣಿಕರು ಜಯನಗರ ಅಥವಾ ಬನಶಂಕರಿ ಮೆಟ್ರೋ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಮೆಟ್ರೋ ಹತ್ತಬೇಕಿದೆ. ಆರ್‌ವಿ ರಸ್ತೆ ನಿಲ್ದಾಣದಲ್ಲಿ ಇಂಟರ್‌ಚೇಂಜ್ ನಿಲ್ದಾಣದ ಕಾಮಗಾರಿ ನಡೆಯುವ ಕಾರಣ ಈಗಿರುವ ಮೆಟ್ರೋ ನಿಲ್ದಾಣವನ್ನು ಅರ್ಧ ಕೆಡವಿ ಹೊಸದಾಗಿ ನಿಲ್ದಾಣ ನಿರ್ಮಿಸಬೇಕಿದೆ.

ಮೆಟ್ರೋ ಸ್ಮಾರ್ಟ್ ಕಾರ್ಡ್ ರೀಚಾರ್ಜ್

ಮೆಟ್ರೋ ಸ್ಮಾರ್ಟ್ ಕಾರ್ಡ್ ರೀಚಾರ್ಜ್

ಮೆಟ್ರೋ ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಹೀಗೂ ಮಾಡಬಹುದು, ಹಲವಾರು ತಿಂಗಳಿನಿಂದ ಮೆಟ್ರೋ ಪ್ರಯಾಣಿಕರ ಬೇಡಿಕೆ ಈಗ ಈಡೇರುವ ಕಾಲ ಬಂದಿದೆ. ಇನ್ನುಮುಂದೆ ನಮ್ಮ ಮೆಟ್ರೋ ಪ್ರಯಾಣಿಕರು ತಮ್ಮ ಮೊಬೈಲ್ ಮೂಲಕವೇ ತಮ್ಮ ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಇಷ್ಟು ದಿನ ಮೆಟ್ರೋದಲ್ಲಿ ಪ್ರಯಾಣಿಸಬೇಕಿದ್ದರೆ ಒಂದು ಟೋಕನ್ ತೆಗೆದುಕೊಳ್ಳಬೇಕಿತ್ತು ಇಲ್ಲವೇ ತಮ್ಮ ಸ್ಮಾರ್ಟ್ ಕಾರ್ಡ್‌ ಬಳಕೆ ಮಾಡಿ ತೆರಳಬೇಕಿತ್ತು. ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಸಹಾಯದಿಂದ ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಮಾಡಿಕೊಳ್ಳಬಹುದಿತ್ತು.

ಆದರೆ ಅದಕ್ಕೆ ಹೆಚ್ಚು ಸಮಯ ತಗುಲುತ್ತಿತ್ತು, ಕೆಲವೊಮ್ಮೆ ಯಂತ್ರ ಸರಿ ಇರುತ್ತಿರಲಿಲ್ಲ, ಇನ್ನೂ ಹಲವು ಬಾರಿ ನೂರಾರು ಮಂದಿ ಸರಿತಿಯಲ್ಲಿ ನಿಲ್ಲುತ್ತಿದ್ದರು, ಎಲ್ಲರಿಗೆ ಸೇರಿ ಒಂದೇ ಯಂತ್ರವಿರುತ್ತಿತ್ತು. ಇದೀಗ ಅದೆಲ್ಲಕ್ಕೂ ಪರಿಹಾರ ದೊರೆಯಲಿದೆ.

English summary
RV Road Metro Station Demolition Work Begins, Demolition of structures along the South West entry of the Rashtriya Vidyalaya Road Metro station, which figures on the Nagasandra-Yelachenahalli Metro Line, began.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X