ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಷ್ಯಾದ ಸ್ಪುಟ್ನಿಕ್ 5 ವಿಶ್ವದ ಮೊದಲ ಲಸಿಕೆಯಲ್ಲ: ಕಿರಣ್ ಮಜುಂದಾರ್ ಶಾ

|
Google Oneindia Kannada News

ಬೆಂಗಳೂರು, ಆಗಸ್ಟ್ 14: ವಿಶ್ವದ ಮೊದಲ ಕೊರೊನಾ ಲಸಿಕೆ ಅಭಿವೃದ್ಧಿಪಡಿಸುತ್ತಿರುವಾಗಿ ರಷ್ಯಾ ಮಾಡಿದ್ದ ಘೋಷಣೆಯನ್ನು ಬೆಂಗಳೂರಿನ ಬಯೋಕಾನ್ ಕಂಪನಿ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಪ್ರಶ್ನಿಸಿದ್ದಾರೆ.

ರಷ್ಯಾ ಅಭಿವೃದ್ಧಿಪಡಿಸುತ್ತಿರುವ ಕೊರೊನಾ ಲಸಿಕೆಯ ಮೊದಲ ಅಥವಾ ಎರಡನೇ ಹಂತದ ಕ್ಲಿನಿಕಲ್ ಟ್ರಯಲ್ ಮಾಹಿತಿ ವಿಶ್ವಕ್ಕೆ ದೊರೆತಿಲ್ಲ.

ಲಕ್ಷಣ ಕಾಣಿಸಿಕೊಂಡ ಬಳಿಕ ದೇಹದೊಳಗೆ ಕೊರೊನಾ ಸೋಂಕು ಎಷ್ಟು ದಿನ ಇರುತ್ತೆ?ಲಕ್ಷಣ ಕಾಣಿಸಿಕೊಂಡ ಬಳಿಕ ದೇಹದೊಳಗೆ ಕೊರೊನಾ ಸೋಂಕು ಎಷ್ಟು ದಿನ ಇರುತ್ತೆ?

ಮೂರನೇ ಹಂತದ ಪ್ರಯೋಗ ನಡೆಸದೇ ಲಸಿಕೆ ಬಿಡುಗಡೆ ಮಾಡುವುದು ರಷ್ಯಾಕ್ಕೆ ಸ್ವೀಕಾರಾರ್ಹವಾಗಿರಬಹುದು. ಹಾಗೆಂದ ಮಾತ್ರಕ್ಕೆ ಅದು ವಿಶ್ವದ ಮೊದಲ ಕೊರೊನಾ ಲಸಿಕೆ ಆಗುವುದಿಲ್ಲ ಏಕೆಂದರೆ , ಹಲವು ಲಸಿಕೆ ಕಾರ್ಯಕ್ರಮಗಳು ರಷ್ಯಾಕ್ಕಿಂತ ಮುಂದಿವೆ ಎಂದು ಜೈವಿಕ ತಂತ್ರಜ್ಞಾನ ಉದ್ಯಮಿ ಆಗಿರುವ ಕಿರಣ್ ಹೇಳಿದ್ದಾರೆ.

ಒಂದು ಮತ್ತು ಎರಡನೇ ಹಂತದ ಬಗ್ಗೆ ಮಾಹಿತಿ ಇಲ್ಲ

ಒಂದು ಮತ್ತು ಎರಡನೇ ಹಂತದ ಬಗ್ಗೆ ಮಾಹಿತಿ ಇಲ್ಲ

ರಷ್ಯಾದಲ್ಲಿ ಸ್ಪುಟ್ನಿಕ್ ವಿ ಲಸಿಕೆಯನ್ನು ಮಾಸ್ಕೋ ಮೂಲದ ಗಮಲೇಯ ನ್ಯಾಷನಲ್ ಸೆಂಟರ್ ಅಭಿವೃದ್ಧಿಪಡಿಸುತ್ತದೆ. ಇಡೀ ವಿಶ್ವವೇ ಲಸಿಕೆಯ ಒಂದು ಮತ್ತು ಎರಡನೇ ಹಂತದ ಡಾಟಾವನ್ನು ನೋಡಿಲ್ಲ ಹಾಗೆಂದಾಗ ಲಸಿಕೆಯನ್ನು ನಂಬಲು ಹೇಗೆ ಸಾಧ್ಯ ಎಂದು ಹೇಳಿದ್ದಾರೆ.

ಮೂರನೇ ಹಂತದ ಪ್ರಯೋಗ ನಡೆಸಲಿ

ಮೂರನೇ ಹಂತದ ಪ್ರಯೋಗ ನಡೆಸಲಿ

ರಷ್ಯಾವು ಸ್ಪುಟ್ನಿಕ್ ವಿ ಲಸಿಕೆಯ ಮೂರನೇ ಹಂತದ ಪ್ರಯೋಗವನ್ನು ನಡೆಸಲಿ, ಅದರಲ್ಲಿ ಉತ್ತಮ ಫಲಿತಾಂಶ ಬಂದರೆ ಎಲ್ಲಾ ದೇಶಗಳು ಲಸಿಕೆಯನ್ನು ಒಪ್ಪಿಕೊಳ್ಳುತ್ತವೆ ಎಂದರು. ರಷ್ಯಾದ ಈ ಲಸಿಕೆಗಿಂತ ಅನೇಕ ಲಸಿಕೆಗಳು ಮುಂಚೂಣಿಯಲ್ಲಿವೆ.

ವಿಶ್ವದ ಮೊದಲ ಕೊರೊನಾ ಲಸಿಕೆ ನಾಳೆ ಬಿಡುಗಡೆ: ನೀವು ತಿಳಿಯಬೇಕಾಗಿದ್ದಿಷ್ಟುವಿಶ್ವದ ಮೊದಲ ಕೊರೊನಾ ಲಸಿಕೆ ನಾಳೆ ಬಿಡುಗಡೆ: ನೀವು ತಿಳಿಯಬೇಕಾಗಿದ್ದಿಷ್ಟು

ಮೊದಲು ಯಾರ ಮೇಲೆ ಲಸಿಕೆ ಪ್ರಯೋಗ

ಮೊದಲು ಯಾರ ಮೇಲೆ ಲಸಿಕೆ ಪ್ರಯೋಗ

ಮೊದಲು ವ್ಲಾಡಿಮಿರ್ ಪುಟಿನ್ ಅವರ ಮಗಳ ಮೇಲೆಯೇ ಲಸಿಕೆಯ ಮೊದಲ ಪ್ರಯೋಗ ನಡೆಸಲಾಗುತ್ತದೆ ಎಂದು ಖುದ್ದಾಗಿ ಪುಟಿನ್ ತಿಳಿಸಿದ್ದಾರೆ.

ರಷ್ಯಾದಿಂದ ಎರಡು ಲಸಿಕೆ

ರಷ್ಯಾದಿಂದ ಎರಡು ಲಸಿಕೆ

ರಷ್ಯಾದಲ್ಲಿ ಸಧ್ಯ ಎರಡು ಕೊವಿಡ್ 19 ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಗಮೇಲಿಯಾ ವ್ಯಾಕ್ಸಿನ್‌ನ್ನು ಇಂದು ಅಧಿಕೃತವಾಗಿ ನೋಂದಣಿ ಆಗಿದೆ.ಮತ್ತೊಂದು ವೆಕ್ಟರ್ ಸ್ಟೇಟ್ ರಿಸರ್ಚ್ ಸೆಂಟರ್ ಆಫ್ ವೈರಾಲಜಿ ಅಂಡ್ ರಿಜಿಸ್ಟರ್ ಆಗುವ ಗಮೇಲಿಯಾ ವ್ಯಾಕ್ಸಿನ್ ಅನ್ನು ಸೆಪ್ಟೆಂಬರ್‌ನಲ್ಲಿ ಸಾರ್ವಜನಿಕವಾಗಿ ಲಸಿಕೆ ಹಾಕಲು ಆರಂಭಿಸಲಾಗುತ್ತದೆ.

English summary
Biocon Executive Chairperson Kiran Mazumdar-Shaw has questioned claims of Russia developing the world's first vaccine against COVID-19, citing absence of clinical trials data on and "more advanced" programmes elsewhere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X