ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಷ್ಟ್ರೀಯ ಏಕತಾ ದಿನ ಪ್ರಯುಕ್ತ ಬೆಂಗಳೂರಲ್ಲಿ ಏಕತೆಗಾಗಿ ಓಟ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 29: ರಾಷ್ಟ್ರೀಯ ಏಕತಾ ದಿನಾಚರಣೆ ಪ್ರಯುಕ್ತ ಬೆಂಗಳೂರು ಉತ್ತರ ಬಿಜೆಪಿಯು ಏಕತೆಗಾಗಿ ಮ್ಯಾರಥಾನ್ ಓಟ 'ರನ್ ಫಾರ್ ಯುನಿಟಿ'ಯನ್ನು ಅಕ್ಟೋಬರ್ 31ರಂದು ಆಯೋಜಿಸಿದೆ.

ಮಾನ್ಯತಾ ಟೆಕ್‌ಪಾರ್ಕ್‌ನಿಂದ ಓಟ ಆರಂಭವಾಗುತ್ತದೆ. ಸರ್ದಾರ್ ವಲ್ಲಭಬಾಯ್ ಪಟೇಲ್ ಅವರನ್ನು ಸ್ಮರಿಸುವ ದಿನ ಇದಾಗಿದೆ. ಅಕ್ಟೋಬರ್ 31ರಂದು ಬೆಳಗ್ಗೆ 7.30ಕ್ಕೆ ಓಟ ಆರಂಭವಾಗಲಿದೆ. ಹೆಸರು ನೋಂದಾಯಿಸಿಕೊಳ್ಳಬಯಸುವವರು ರನ್ ಫಾರ್ ಯುನಿಟಿ ಮ್ಯಾರಥಾನ್ ಫೇಸ್‌ಬುಕ್ ಪೇಜ್‌ನಲ್ಲಿ ಹೆಸರು, ದೂರವಾಣಿ ಸಂಖ್ಯೆ, ಇ ಮೇಲ್ ವಿಳಾಸವನ್ನು ನೋಂದಾಯಿಸಿಕೊಳ್ಳಬೇಕು.

'ಉಕ್ಕಿನ ಮನುಷ್ಯ' ಸರ್ದಾರ್ ಪಟೇಲ್ ಪ್ರತಿಮೆ ನಿರ್ಮಿಸಿದ ಶಿಲ್ಪಿ ಯಾರು? 'ಉಕ್ಕಿನ ಮನುಷ್ಯ' ಸರ್ದಾರ್ ಪಟೇಲ್ ಪ್ರತಿಮೆ ನಿರ್ಮಿಸಿದ ಶಿಲ್ಪಿ ಯಾರು?

ಸರ್ದಾರ್ ವಲ್ಲಭ್ ಭಾಯ್ ಪಟೇಲ್ ಅವರು ಒಂದು ಪಕ್ಷಕ್ಕೆ ಸೀಮಿತವಾದ ನಾಯಕ ಅಲ್ಲ. ಬದಲಾಗಿ ಇಡೀ ದೇಶದ ನಾಯಕ. ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮದಿನವಾದ ಅಕ್ಟೋಬರ್ 31 ದಿನವನ್ನು "ಏಕತಾ ದಿನ"ವನ್ನಾಗಿ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದು, ದೇಶದಲ್ಲೆಡೆ ರಾಷ್ಟ್ರೀಯ ಏಕತಾ ದಿವಸ್ ಎಂದು ಆಚರಿಸಲಾಗುತ್ತದೆ.

Run for unity marathon in Bengaluru on national unity day

ಉಕ್ಕಿನ ಮಹಿಳೆ vs ಉಕ್ಕಿನ ಮನುಷ್ಯ ಏನಿದರ ಮರ್ಮ? ಉಕ್ಕಿನ ಮಹಿಳೆ vs ಉಕ್ಕಿನ ಮನುಷ್ಯ ಏನಿದರ ಮರ್ಮ?

ಉಕ್ಕಿನ ಮನುಷ್ಯರೆಂದೇ ಖ್ಯಾತರಾದ ಸರ್ದಾರ್ ವಲ್ಲಭಬಾಯ್ ಪಟೇಲರ ಬೃಹತ್ ಪ್ರತಿಮೆ 182 ಮೀಟರ್ ಸುಮಾರು 597 ಅಡಿ ಎತ್ತರವಿದೆ. ದಕ್ಷಿಣ ಗುಜರಾತ್‌ನ ನರ್ಮದಾ ನದಿಗೆ ಕಟ್ಟಲಾಗಿರುವ ಸರ್ದಾರ್ ಸರೋವರ ಅಣೆಕಟ್ಟು ಎದುರಲ್ಲಿ ನಿರ್ಮಿಸಲಾಗಿದೆ. ಇದು ಅಕ್ಟೋಬರ್ 31ರಂದು ಉದ್ಘಾಟನೆಗೊಳ್ಳಲಿದೆ.

English summary
Bengaluru north wing of Bjp has organized Run for unity marathon on October 31 at 7.30 am on the occasion of National Unity Day at Manyata tech park.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X