ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇದು ಬೆಂಗಳೂರಲ್ಲಿ ನಡೆಯುತ್ತಿರುವ ಕೊನೆಯ ಏರ್‌ ಶೋ?

|
Google Oneindia Kannada News

ಬೆಂಗಳೂರು, ಫೆಬ್ರವರಿ 21: ಬೆಂಗಳೂರಲ್ಲಿ ನಡೆಯುತ್ತಿರುವ ಕೊನೆಯ ಏರ್‌ ಶೋ ಇದಾಗಲಿದೆ ಎನ್ನುವ ವದಂತಿಗಳು ಕೇಳಿಬರುತ್ತಿವೆ.

ದಕ್ಷಿಣ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನವೆನಿಸಿಕೊಂಡಿರುವ ಏರೋ ಇಂಡಿಯಾದ 12 ಆವೃತ್ತಿಯೇ ಬೆಂಗಳೂರು ಪಾಲಿಗೆ ಕಡೆಯ ಆವೃತ್ತಿಯಾಗಲಿದೆಯೇ ಎನ್ನುವ ಅನುಮಾನ ಕಾಡಿದೆ.

ಏರೋ ಇಂಡಿಯಾ ಆಗಸದಲ್ಲಿ ಹಾರಾಡಿ ಮನಗೆದ್ದ ರಫೇಲ್ ಯುದ್ಧ ವಿಮಾನಏರೋ ಇಂಡಿಯಾ ಆಗಸದಲ್ಲಿ ಹಾರಾಡಿ ಮನಗೆದ್ದ ರಫೇಲ್ ಯುದ್ಧ ವಿಮಾನ

ಏರೋ ಇಂಡಿಯಾ ಬೆಂಗಳೂರಲ್ಲಿ ಆರಂಭಗೊಂಡಿದ್ದು, ಲೋಹದ ಹಕ್ಕಿಗಳ ಚಮತ್ಕಾರವನ್ನು ಕಣ್ತುಂಬಿಕೊಳ್ಳಲು ಇದು ಕಟ್ಟಕಡೆಯ ಅವಕಾಶ ಎಂಬ ಭಾವನೆ ಎಲ್ಲರಲ್ಲಿ ಮೂಡಿದೆ.

Rumours around last aero india show at Bengaluru

ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಬೆಂಗಳೂರಿನಿಂದ ಕಸಿದುಕೊಳ್ಳಲು ದೇಶದ ಹಲವು ನಗರಗಳು ಪ್ರಯತ್ನ ಮಾಡುತ್ತಿವೆ. ಕೇಂದ್ರ ಸರ್ಕಾರದ ಪ್ರಮುಖರು ಈ ನಿಟ್ಟಿನಲ್ಲಿ ಲಾಬಿ ನಡೆಸಿದ್ದಾರೆ. ಈ ಬಾರಿಯೂ ಏರೋ ಇಂಡಿಯಾ ಬೆಂಗಳೂರು ಇನ್ನೇನು ಕೈತಪ್ಪಿ ಹೋಗುತ್ತಿದೆ ಎನ್ನುವಾಗ ಅಂತಿಮವಾಗಿ ಬೆಂಗಳೂರನ್ನೇ ಆಯ್ಕೆಮಾಡಿಕೊಳ್ಳಲಾಗಿತ್ತು.

ಏರ್‍ಬಸ್‍ನಿಂದ ವಾಣಿಜ್ಯ ಪೈಲಟ್ ಮತ್ತು ನಿರ್ವಹಣೆ ತರಬೇತಿ ಕೇಂದ್ರ ಆರಂಭಏರ್‍ಬಸ್‍ನಿಂದ ವಾಣಿಜ್ಯ ಪೈಲಟ್ ಮತ್ತು ನಿರ್ವಹಣೆ ತರಬೇತಿ ಕೇಂದ್ರ ಆರಂಭ

ಆದರೆ, 2020ರ ಏರ್‌ ಶೋ ಬೇರೆ ನಗರಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆಯೇ ಹೆಚ್ಚಿದೆ. ಈ ವೈಮಾನಿಕ ಪ್ರದರ್ಶನವನ್ನು ಕೇವಲ ಬೆಂಗಳೂರಿಗೆ ಸೀಮಿತವಾಗಬಾರದು ಇತರೆ ನಗರಗಳಿಗೂ ಅವಕಾಶ ಲಭ್ಯವಾಗಬೇಕು ಎಂಬ ಕೇಂದ್ರ ಸರ್ಕಾರದ ನೀತಿಯ ಪರಿಣಾಮವಾಗಿ ಈ ಪ್ರದರ್ಶನ ಸ್ಥಳಾಂತರವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

English summary
Some rumours are spreading that this is the last aero show at Bengaluru. Even this year Uttarpradesh government try its best to shift the show.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X