ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

RTO:ಆನ್ ಲೈನ್ ಸೇವೆ ರಾಜ್ಯಾದ್ಯಂತ ವಿಸ್ತರಣೆ

|
Google Oneindia Kannada News

ಬೆಂಗಳೂರು, ಜನವರಿ 31: ಸಾರ್ವಜನಿಕರಿಗೆ ಆನ್ ಲೈನ್ ಮೂಲಕ ಆರ್ ಟಿಓ ಸೇವೆ ಕಲ್ಪಿಸುವ ಉದ್ದೇಶದಿಂದ ಸಾರಿಗೆ ಇಲಾಖೆ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿದ್ದ ವಾಹನ-೪ ಸೇವೆ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ವಿವಿಧ ಹಂತಗಳಲ್ಲಿ ರಾಜ್ಯದ ಎಲ್ಲಾ ಆರ್ ಟಿಓ ಕಚೇರಿಗಳಿಗೆ ಸೇವೆ ವಿಸ್ತರಿಸಲು ನಿರ್ಧರಿಸಲಾಗಿದೆ.

ಪ್ರಾಯೋಗಿಕವಾಗಿ ರಾಮನಗರ ಆರ್ ಟಿಓ ಕಚೇರಿಯಲ್ಲಿ ಅನುಷ್ಠಾನಗೊಳಿಸಿದ್ದು ಯಶಸ್ವಿಯಾಗಿದೆ. ಹಾಗಾಗಿ ರಾಜ್ಯದ ಎಲ್ಲಾ ಆರ್ ಟಿ ಓ ಕಚೇರಿಗಳಿಗೂ ವಿಸ್ತರಿಸಲಾಗುವುದು. ಮೊದಲ ಹಂತದಲ್ಲಿ ನಗರದ ಚಂದಾಪುರ, ಎಲೆಕ್ಟ್ರಾನಿಕ್ ಸಿಟಿ, ಯಲಹಂಕ ಹಾಗೂ ಕಸ್ತೂರಿನಗರ ಆರ್ ಟಿ ಓ ಕಚೇರಿಯಲ್ಲಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗವುದು ಎಂದು ಸಾರಿಗೆ ಇಲಾಖೆ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ನಾಲ್ಕು ದಿನ ಆರ್ ಟಿಓ ಸೇವೆ ವ್ಯತ್ಯಯ:ಆರ್ ಟಿ ಓ ಕಚೇರಿಗಳಲ್ಲಿ ವಾಹನ-4 ಸಾಫ್ಟ್ ವೇರ್ ಅಳವಡಿಕೆ ಪ್ರಕ್ರಿಯೆ ಪೂರ್ಣಗೊಳಿಸಲು ಕನಿಷ್ಠ ನಾಲ್ಕು ದಿನ ಕಾಲಾವಕಾಶ ಬೇಕಾಗುತ್ತದೆ. ಹಾಗಾಗಿ ಈ ದಿನಗಳಲ್ಲಿ ಸಾರ್ವಜನಿಕರಿಗೆ ನೋಂದಣಿ ಸೇವೆ ಲಭ್ಯವಾಗುವುದಿಲ್ಲ.

RTO service in Online extend to all over the state

ಚಂದಾಪುರ ಆರ್ ಟಿಓ ಕಚೇರಿಯಲ್ಲಿ ಫೆ.2ರಿಂದ ಫೆ.6, ಎಲೆಕ್ಟ್ರಾನಿಕ್ ಸಿಟಿ ಫೆ.೩ರಿಂದ ಫೆ.೯, ಯಲಹಂಕ ಫೆ.16 ರಿಂದ ಫೆ.20 ಹಾಗೂ ಕಸ್ತೂರಿ ನಗರ ಫೆ.19 ರಿಂದ ಫೆ.24 ರವರೆಗೆ ಈ ಮೇಲಿನ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ದಯಾನಂದ್ ತಿಳಿಸಿದ್ದಾರೆ.

English summary
Inspiring by the pilot project in Ramnagar district decided to extend Vahana-4 programm to all the district in the state which provides all RTO services through online soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X