ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಲಿಂಗದ ಮೇಲಿನ ಚೇಳು ಮೋದಿ; ತರೂರ್ ಹೇಳಿಕೆಗೆ ಭಾರೀ ವಿರೋಧ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 28: "ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಯಂತ್ರಿಸುವುದಕ್ಕೆ ಆಗದ ಬೇಸರದಿಂದ ಆರೆಸ್ಸೆಸ್ ನ ವ್ಯಕ್ತಿಯೊಬ್ಬರು ಒಂದು ಹೋಲಿಕೆ ಮಾಡಿ ಹೇಳಿದ್ದರು. ಶಿವಲಿಂಗದ ಮೇಲೆ ಕುಳಿತಿರುವ ಚೇಳಿನಂತೆ ನರೇಂದ್ರ ಮೋದಿ. ನೀವು ಬರೀ ಕೈನಿಂದ ಅದನ್ನು ಸರಿಸುವುದಕ್ಕೆ ಆಗಲ್ಲ ಮತ್ತು ಚಪ್ಪಲಿಯಿಂದ ಹೊಡೆಯಲು ಕೂಡ ಸಾಧ್ಯವಿಲ್ಲ" ಎಂದು ಸಂಸದ ಶಶಿ ತರೂರ್ ಇಲ್ಲಿ ಭಾನುವಾರ ಹೇಳಿದ್ದಾರೆ.

ಪ್ರಧಾನಿ ಮೋದಿ ಬಗ್ಗೆ ತಾವು ಬರೆದ ಪುಸ್ತಕದ ಬಗೆಗಿನ ಕಾರ್ಯಕ್ರಮದಲ್ಲಿ ಮಾತನಾಡಿದ ಶಶಿ ತರೂರ್, ಭಾರೀ ವಿವಾದಕ್ಕೆ ಕಾರಣರಾಗಿದ್ದಾರೆ. ಆರೆಸ್ಸೆಸ್ ನ ಹಲವರಿಗೆ ಮೋದಿ ನಡೆ ಇಷ್ಟವಿಲ್ಲ. ಆದರೆ ಅವರನ್ನು ನಿಯಂತ್ರಿಸುವುದು ಬಹಳ ಕಷ್ಟವಾಗಿದೆ. ಈ ಬಗ್ಗೆ ಆ ಸಂಘಟನೆಯವರೇ ಹೇಳಿಕೊಂಡಿದ್ದಾರೆ ಎಂದಿದ್ದಾರೆ.

RSS source said PM Narendra Modi Scorpion on Shivlinga: Shashi Tharoor

ಮೋದಿ ಬಗ್ಗೆ ಶಶಿ ತರೂರ್ ಪುಸ್ತಕ, ಇಂಗ್ಲೀಷ್ ಕಠಿಣ ಪದ ಟ್ವೀಟ್ಮೋದಿ ಬಗ್ಗೆ ಶಶಿ ತರೂರ್ ಪುಸ್ತಕ, ಇಂಗ್ಲೀಷ್ ಕಠಿಣ ಪದ ಟ್ವೀಟ್

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕ್ಷಮೆ ಕೇಳಬೇಕು ಎಂದು ಈ ಹೇಳಿಕೆ ಬಂದ ಕೆಲ ಗಂಟೆಗಳಲ್ಲಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಒತ್ತಾಯಿಸಿದ್ದಾರೆ. "ರಾಹುಲ್ ಗಾಂಧಿಯವರೇ ನಿಮ್ಮನ್ನು ಶಿವಭಕ್ತ ಅಂತ ಕರೆದುಕೊಳ್ತೀರಿ. ಮಹಾದೇವನಿಗೆ ಮಾಡಿದ ಈ ಅವಮಾನಕ್ಕೆ ನಿಮ್ಮ ಪ್ರತಿಕ್ರಿಯೆ ನೀಡಿ" ಎಂದಿದ್ದಾರೆ.

ನರೇಂದ್ರ ಮೋದಿಗೆ ಮುಸ್ಲಿಮರನ್ನು ಕಂಡರಾಗದು: ಶಶಿ ತರೂರ್ನರೇಂದ್ರ ಮೋದಿಗೆ ಮುಸ್ಲಿಮರನ್ನು ಕಂಡರಾಗದು: ಶಶಿ ತರೂರ್

ಕಳೆದ ತಿಂಗಳು ಶಶಿ ತರೂರ್ ನೀಡಿದ್ದ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಮುಂದಿನ ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಭಾರತದ ಸಂವಿಧಾನವನ್ನು ಹರಿದುಹಾಕಿ, ಹೊಸದು ಬರೆದು ಬಿಡುತ್ತಾರೆ ಎಂದು ಆರೋಪಿಸಿದ್ದರು.

English summary
Congress lawmaker Shashi Tharoor has stirred up a controversy with a new analogy on PM Narendra Modi -- one that he attributed to an "RSS source" of a journalist. Speaking at an event in Bengaluru, Mr Tharoor, whose book on PM Modi was recently released, said the "personality cult" of the Prime Minister did not sit well with many in the RSS establishment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X