ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾ. 15ರಿಂದ ಬೆಂಗಳೂರಿನಲ್ಲಿ RSSನ 3 ದಿನಗಳ ರಾಷ್ಟ್ರೀಯ ಅಧಿವೇಶನ

|
Google Oneindia Kannada News

ಬೆಂಗಳೂರು, ಫೆಬ್ರವರಿ 28: ಇದೇ ಮಾರ್ಚ್ 15ನೇ ತಾರೀಕಿನಿಂದ 17ನೇ ತಾರೀಕಿನ ತನಕ ಬೆಂಗಳೂರಿನಲ್ಲಿ ಆರೆಸ್ಸೆಸ್ (ರಾಷ್ಟ್ರೀಯ ಸ್ವಯಂಸೇವಕ ಸಂಘ) ರಾಷ್ಟ್ರೀಯ ಅಧಿವೇಶನ ಅಖಿಲ ಭಾರತೀಯ ಪ್ರತಿನಿಧಿ ಸಭೆ ನಡೆಯಲಿದೆ. ಈ ಅಧಿವೇಶನವು ಮಾಗಡಿ‌ ರಸ್ತೆಯಲ್ಲಿರುವ ಜನಸೇವಾ ವಿದ್ಯಾಕೇಂದ್ರದಲ್ಲಿ ನಡೆಯಲಿದೆ.

ಈ ರೀತಿಯ ವಾರ್ಷಿಕ ಸಭೆಯು ಕರ್ನಾಟಕದಲ್ಲಿ 7ನೇ ಹಾಗೂ ಬೆಂಗಳೂರಿನಲ್ಲಿ 5ನೆಯದ್ದಾಗಿದೆ ಎಂದು ಆರೆಸ್ಸೆಸ್ ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರತಿನಿಧಿ ಸಭಾ ಅಧಿವೇಶನವು ಆರೆಸ್ಸೆಸ್ ನ ವಾರ್ಷಿಕ ಕಾರ್ಯಕ್ರಮವಾಗಿದ್ದು, ಆರೆಸ್ಸೆಸ್ ನ ಅತ್ಯುನ್ನತ ಸಭೆ ಇದಾಗಿದೆ.

ಈ ಸಭೆಯಲ್ಲಿ ಆರೆಸ್ಸೆಸ್ ನ ವಿವಿಧ ಸಂಘಟನೆಗಳ ರಾಷ್ಟ್ರೀಯ ಪ್ರಮುಖರು ಭಾಗವಹಿಸಲಿದ್ದಾರೆ. ವಿಶ್ವ ಹಿಂದೂ ಪರಿಷತ್, ವನವಾಸಿ ಕಲ್ಯಾಣ ಆಶ್ರಮ, ವಿದ್ಯಾರ್ಥಿ ಪರಿಷತ್, ಕಿಸಾನ್ ಸಂಘ, ರಾಷ್ಟ್ರ ಸೇವಿಕಾ ಸಮಿತಿ ಮೊದಲಾದ 35ಕ್ಕೂ ಹೆಚ್ಚು ಸಂಘಟನೆಗಳ 1400 ಪ್ರತಿನಿಧಿಗಳು ಭಾಗವಹಿಸುತ್ತಾರೆ.

 RSS 3 Days National Convention In Bengaluru From March 15

ಆರೆಸ್ಸೆಸ್ ನ ಸರಸಂಘಚಾಲಕ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ಸುರೇಶ್ (ಭಯ್ಯಾ) ಜೋಷಿ ಸಭೆಯ ಕಲಾಪಗಳನ್ನು ನಡೆಸುತ್ತಾರೆ.

ಆರೆಸ್ಸೆಸ್ ಹಾಗೂ ವಿವಿಧ ಸಂಘಟನೆಗಳ ವಾರ್ಷಿಕ ವರದಿ, ಸಂಘಟನೆಯ ವಿಸ್ತಾರ, ಹೊಸ ಆಯಾಮಗಳು, ಕಾರ್ಯಕ್ರಮಗಳು, ಮುಂಬರುವ ವರ್ಷದ ಯೋಜನೆ ಇತ್ಯಾದಿಗಳು ಚರ್ಚೆಯಾಗಲಿದೆ. ಜೊತೆಗೆ ಈ ಸಭೆಯು ರಾಷ್ಟ್ರದ ಮಹತ್ವದ ವಿಷಯಗಳ ಕುರಿತಾಗಿ ಕೆಲ ನಿರ್ಣಯಗಳನ್ನು ತೆಗೆದುಕೊಳ್ಳುತ್ತದೆ.

English summary
RSS national level 3 days convention in Bengaluru from March 15th. Here is the complete details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X