• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಳಸಿದ ಕೇಕ್‌ ಕೊಟ್ಟ ರಿಲಾಯನ್ಸ್‌ ಫ್ರೆಶ್‌ಗೆ ಕೋರ್ಟ್‌ ಹೇಳಿದ್ದೇನು?

By Nayana
|

ಬೆಂಗಳೂರು, ಆಗಸ್ಟ್ 2: ಮಾಲ್‌ಗಳಲ್ಲಿ ಆಹಾರಗಳನ್ನು ಕೊಳ್ಳುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು, ಕೆಲವೊಮ್ಮೆ ರಿಯಾಯಿತಿ ದರದಲ್ಲಿ ಕೆಲವು ವಸ್ತುಗಳನ್ನು ಮಾರಾಟಕ್ಕಿಟ್ಟಿರುತ್ತಾರೆ ಆಗ ಕೂಡ ಎಕ್ಸ್‌ಪೈರಿ ದಿನಾಂಕ ನೋಡಿಯೇ ಖರೀದಿಸುವುದನ್ನು ಮರೆಯಬೇಡಿ.

ದಿನ ಸಾವಿರಾಋಉ ಮಂದಿ ರಿಲಾಯನ್ಸ್‌ ಫ್ರೆಶ್‌ ಅಂತಹ ಮಳಿಗೆಗಳಿಗೆ ಭೇಟಿ ನೀಡುತ್ತಾರೆ, ಕಾರಣ ಅಲ್ಲಿ ತಾಜಾ ತರಕಾರಿ, ತಾಜಾ ಪದಾರ್ಥಗಳನ್ನು ಪಡೆಯಬಹುದು ಎಂದು ಆದರೆ ಇಂತಹ ಮಳಿಗೆಗಲೇ ಮೋಸ ಮಾಡಿದರೆ ಜನರಿಗೆ ನಂಬಿಕೆಯಾದರೂ ಹೇಗೆ ಬಂದೀತು ನೀವೇ ಯೋಚಿಸಿ.

ಬೆಂಗಳೂರು: ಶುಭ ಸಮಾರಂಭಗಳ ಸಾಲು ಏರಿದ ತರಕಾರಿ, ಸೊಪ್ಪು ದರ

ಎಕ್ಸ್‌ಪೈರಿ ಅವಧಿ ಮುಗಿದರೂ ಕೂಡ ಕೇಕ್‌ ಖರೀದಿಸಿ ತೊಂದರೆಗೆ ಸಿಲುಕಿದ ಗ್ರಾಹಕನಿಗೆ 10,090 ರೂ. ಪರಿಹಾರ ನೀಡುವಂತೆ ರಿಲಾಯನ್ಸ್‌ ಫ್ರೆಶ್ ಮಳಿಗೆಗೆ ಗ್ರಾಹಕರ ನ್ಯಾಯಾಲಯ ಆದೇಶ ನೀಡಿದೆ. ಹಲಸೂರಿನ ಆರ್‌. ಜಯಚಂದ್ರನ್‌ 2016ರ ಏಪ್ರಿಲ್‌ 18ರಂದು ಇಂದಿರಾನಗರದ ಎರಡನೇ ಹಂತದಲ್ಲಿರುವ ರಿಲಾಯನ್ಸ್‌ ಫ್ರೆಶ್‌ ಮಳಿಗೆಯಲ್ಲಿ 90 ರೂ. ನೀಡಿ ಕೇಕ್‌ ಖರೀದಿ ಮಾಡಿದ್ದರು.

ಅವರು ಅದನ್ನು ತಮ್ಮ ಪುತ್ರನಿಗೆ ನೀಡಿದ್ದರು. ಅದರಿಂದ ಆತನಿಗೆ ಫುಡ್‌ ಪಾಯ್ಸನಿಂಗ್‌ ಆಗಿತ್ತು, ಆತನ ಚಿಕಿತ್ಸೆಗೆ ಕೊಡಿಸಲು ಸಾವಿರಾರು ರೂ. ಖರ್ಚು ಮಾಡಿದ್ದರು. ಅವರು ಮತ್ತೆ ಮಳಿಗೆಗೆ ಹೋಗಿ ಕೇಕ್‌ ಪ್ಯಾಕೇಟ್‌ ಮೇಲೆ 2016 ರ ಮಾರ್ಚ್ 10ಕ್ಕೆ ಎಕ್ಸ್‌ಪೈರಿ ಡೇಟ್‌ ಆಗಿದೆ ಎಂದಿತ್ತು. ಅಂತಹ ಪದಾರ್ಥಗಳನ್ನು ಹೇಗೆ ಮಾರಾಟಕ್ಕೆ ಇಟ್ಟಿದ್ದೀರಿ ಎಂದು ವಿಚಾರಿಸಿದಾಗ ಮ್ಯಾನೇಜರ್‌ ಹಾರಿಕೆ ಉತ್ತರ ನೀಡಿದ್ದರು. ಹಾಗಾಗಿ ಪರಿಹಾರ ಕೊಡಸಬೇಕು ಎಂದು ಅವರು ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Consumer court has imposed Rs.10,000 penalty of selling cake even after expiry date was over at Reliance fresh in Indira Nagar. The court has also insisted that the penalty amount should be payable to costumer who was sufferer in the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more