ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ಲಾಸ್ಟಿಕ್ ತಯಾರಿಕಾ ಘಟಕಕ್ಕೆ 5 ಲಕ್ಷ ರೂ. ದಂಡ ಹಾಕಿದ ಬಿಬಿಎಂಪಿ

|
Google Oneindia Kannada News

ಬೆಂಗಳೂರು, ಜನವರಿ 28 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ಲಾಸ್ಟಿಕ್ ತಯಾರಿಕಾ ಘಟಕದ ಮೇಲೆ ದಾಳಿ ಮಾಡಿದ್ದು, ಭಾರಿ ಮೊತ್ತದ ದಂಡ ವಿಧಿಸಿದೆ. ನಿಷೇಧಿತ ಪ್ಲಾಸ್ಟಿಕ್‌ಗಳನ್ನು ಬಿಬಿಎಂಪಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು ನಗರದ ಪದ್ಮನಾಭ ನಗರ ವಾರ್ಡ್ 182ರಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ನಂದಿ ಶ್ರೀ ಪ್ಲಾಸ್ಟಿಕ್ ಉತ್ಪಾದನಾ ಘಟಕದ ಮೇಲೆ ದಾಳಿ ಮಾಡಲಾಗಿದೆ. ಬಿಬಿಎಂಪಿ ಅಧಿಕಾರಿಗಳು & ಮಾರ್ಷಲ್ಸ್ ದಾಳಿ ನಡೆಸಿದ್ದು, 5 ಲಕ್ಷ ದಂಡ ವಿಧಿಸಿದರು.

ಕೇರಳ ರಾಜ್ಯದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಜಾರಿಗೆ ಕೇರಳ ರಾಜ್ಯದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಜಾರಿಗೆ

ದಾಳಿ ನಡೆಸಿದಾಗ ಉತ್ಪಾದನಾ ಘಟಕದಲ್ಲಿ ದಾಸ್ತಾನು ಮಾಡಲಾಗಿದ್ದ 20 ಟನ್ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳದಲ್ಲಿಯೇ ಘಟಕಕ್ಕೆ ದಂಡವನ್ನು ವಿಧಿಸಲಾಗಿದೆ.

ಬೆಂಗಳೂರಿನ ಪ್ರತ್ಯೇಕ ಬಸ್‌ ಪಥಕ್ಕೆ ಪ್ಲಾಸ್ಟಿಕ್ ಡಿವೈಡರ್ ಬೆಂಗಳೂರಿನ ಪ್ರತ್ಯೇಕ ಬಸ್‌ ಪಥಕ್ಕೆ ಪ್ಲಾಸ್ಟಿಕ್ ಡಿವೈಡರ್

Rs 5 Lakh Fine For Plastic Manufacturing Unit

ಮತ್ತೊಂದು ಕಡೆ ಆವಲಹಳ್ಳಿ ಮುಖ್ಯ ರಸ್ತೆಯ ದೀಪಾಂಜಲಿ ನಗರ ವಾರ್ಡ್ 158ರ ಮನೆಯೊಂದರಲ್ಲಿ ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದೆ.

 ಶಿವಮೊಗ್ಗ: 1 ಕೆ.ಜಿ ಪ್ಲಾಸ್ಟಿಕ್ ನೀಡಿ, 1 ಕೆ.ಜಿ ಅಕ್ಕಿ ಪಡೆಯಿರಿ! ಶಿವಮೊಗ್ಗ: 1 ಕೆ.ಜಿ ಪ್ಲಾಸ್ಟಿಕ್ ನೀಡಿ, 1 ಕೆ.ಜಿ ಅಕ್ಕಿ ಪಡೆಯಿರಿ!

ಬಿಬಿಎಂಪಿ ಅಧಿಕಾರಿಗಳು ಮನೆಯಲ್ಲಿ ಪರಿಶೀಲನೆ ನಡೆಸಿದಾಗ 200 ಕೆ. ಜಿ. ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ. ಮನೆಯ ಮಾಲೀಕರಿಗೆ 10 ಸಾವಿರ ರೂ. ದಂಡವನ್ನು ಹಾಕಲಾಗಿದೆ.

2019ರ ಸೆಪ್ಟೆಂಬರ್‌ನಿಂದಲೇ ಬೆಂಗಳೂರು ನಗರದಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗಿದೆ. 50 ಮೈಕ್ರಾನ್‌ ಗಾತ್ರಕ್ಕಿಂತ ಕಡಿಮೆ ಇರುವ ಪ್ಲಾಸ್ಟಿಕ್ ಬಳಕೆ, ಮಾರಾಟ, ಉತ್ಪಾದನೆ ನಿಷೇಧಿಸಲಾಗಿದ್ದು. ನಿಷೇಧಿತ ಪ್ಲಾಸ್ಟಿಕ್ ಬಳಸಿದರೆ ದಂಡ ಹಾಕಲಾಗುತ್ತಿದೆ.

ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಿದರೆ ಮೊದಲ ಬಾರಿಗೆ 500 ರೂ. ದಂಡವನ್ನು ಸ್ಥಳದಲ್ಲಿಯೇ ವಿಧಿಸಲಾಗುತ್ತದೆ. 2ನೇ ಬಾರಿ ನಿಯಮ ಉಲ್ಲಂಘಿಸಿದರೆ 5 ಸಾವಿರ ರೂ. ತನಕ ದಂಡವನ್ನು ವಿಧಿಸಲಾಗುತ್ತದೆ. ಪ್ಲಾಸ್ಟಿಕ್ ಉತ್ಪಾದಕರಿಗೂ ಈ ನಿಯಮ ಅನ್ವಯವಾಗುತ್ತದೆ.

English summary
Bruhat Bengaluru Mahanagara Palike (BBMP) officials conducted the raid on plastic manufacturing unit at Padmanabhanagar. Around 20 tonnes of plastic was seized and Rs 5 lakh fine imposed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X