ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊವಿಡ್ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ

|
Google Oneindia Kannada News

ಬೆಂಗಳೂರು, ಜೂನ್ 30: ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ಕಾರ್ಮಿಕ ವರ್ಗ ಸಂಕಷ್ಟಕ್ಕೆ ಸಿಲುಕಿತ್ತು. ಸುಮಾರು ಎರಡೂವರೆ ತಿಂಗಳು ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿದ್ದರಿಂದ ಶ್ರಮಿಕ ವರ್ಗ ಆದಾಯವಿಲ್ಲದೇ ಕಷ್ಟ ಅನುಭವಿಸಿದರು.

Recommended Video

Modi's to address the nation today at 4 P.M | Oneindia Kannada

ಈ ಹಿನ್ನೆಲೆ ರಾಜ್ಯ ಸರ್ಕಾರದಿಂದ ಆರ್ಥಿಕ ಪ್ಯಾಕೇಜ್ ಘೋಷಣೆಯಾಗಿತ್ತು. ಆಟೋ, ಟ್ಯಾಕ್ಸಿ ಚಾಲಕರು, ರೈತರು, ದಿನಗೂಲಿ ಕಾರ್ಮಿಕರು, ಅಗಸರು, ಕ್ಷೌರಿಕರು ಸೇರಿದಂತೆ ಹಲವು ಕ್ಷೇತ್ರದ ಕಾರ್ಮಿಕರಿಗೆ ಕರ್ನಾಟಕ ಸರ್ಕಾರ ಸಹಾಯಧನ ಘೋಷಿಸಿತ್ತು.

ಕೋವಿಡ್-19 ಚಿಕಿತ್ಸೆ: ಬೆಂಗಳೂರಿಗರಿಗೆ ಶುಭ ಸುದ್ದಿ ಕೊಟ್ಟ ಸರ್ಕಾರ!ಕೋವಿಡ್-19 ಚಿಕಿತ್ಸೆ: ಬೆಂಗಳೂರಿಗರಿಗೆ ಶುಭ ಸುದ್ದಿ ಕೊಟ್ಟ ಸರ್ಕಾರ!

ಕೊರೊನಾ ಲಾಕ್‌ಡೌನ್‌ ಹಿನ್ನೆಲೆ ಅಗಸರಿಗೆ ಮತ್ತು ಕ್ಷೌರಿಕರಿಗೆ ಪರಿಹಾರವಾಗಿ 5 ಸಾವಿರ ರೂಪಾಯಿ ಸರ್ಕಾರ ಘೋಷಿಸಿತ್ತು. ಈ ಸಹಾಯಧನ ಪಡೆಯಲು ಜೂನ್ 30ರೊಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕಿತ್ತು.

Rs 5,000 To Barbers, Washermen: Application Submit Date Extended To July 10

ಇದೀಗ, ಕೊವಿಡ್ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ ಮಾಡಲಾಗಿದೆ. ಜೂನ್ 30 ರಿಂದ ಜುಲೈ 10 ದಿನಾಂಕ ಮುಂದೂಡಲಾಗಿದೆ. ಹೀಗಾಗಿ, ಅಗಸರಿಗೆ ಮತ್ತು ಕ್ಷೌರಿಕರ ಘಟಕಕ್ಕೆ ಇದು ನೆರವಾಗಲಿದೆ.

English summary
Coronavirus Update in Karanaraka: Rs 5,000 to Barbers, Washermen: Application Submit Date Extended to July 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X