ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಧಿಕಾರಿಗಳಿಂದಲೇ ಬಿಬಿಎಂಪಿಗೆ 49 ಕೋಟಿ ನಾಮ!

|
Google Oneindia Kannada News

ಬೆಂಗಳೂರು, ಫೆ.5 : ಬಿಬಿಎಂಪಿಯ ಹಗರಣವೊಂದು ಬಯಲಾಗಿದೆ. 39 ಲಕ್ಷ ರೂ. ಹಣ ಬಿಡುಗಡೆಗೆಯ ಟಿಪ್ಪಣಿಯನ್ನು ದುರ್ಬಳಕೆ ಮಾಡಿಕೊಂಡು 49 ಕೋಟಿ ರೂ. ಬಿಡುಗಡೆ ಮಾಡಿದ್ದ ಪಾಲಿಕೆ ಲೆಕ್ಕಪತ್ರ ವಿಭಾಗದ ಅಧಿಕಾರಿಯನ್ನು ಬಿಎಂಟಿಎಫ್ ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ.

ಪಾಲಿಕೆ ಲೆಕ್ಕಪತ್ರ ವಿಭಾಗದ ಕಚೇರಿ ಸಹಾಯಕ ಸಂಜೀವಮೂರ್ತಿ, ಮುಖ್ಯ ಹಣಕಾಸು ಅಧಿಕಾರಿ ವೀರಗೌಡ ಪಾಟೀಲ್ ಹಾಗೂ ಲೆಕ್ಕಪತ್ರ ಅಧಿಕಾರಿ ರಾಜಶೇಖರ್ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಸಂಜೀವಮೂರ್ತಿಯನ್ನು ಬಿಎಂಟಿಎಫ್ ಪೊಲೀಸರು ಬಂಧಿಸಿದ್ದಾರೆ. [ಮುನಿರತ್ನ ಕಟ್ಟಡದಲ್ಲಿ ಬಿಬಿಎಂಪಿ ಕಡತ]

bbmp

147 ಕಾಮಗಾರಿಗಳಿಗೆ 49 ಕೋಟಿ ಹಣ ಬಿಡುಗಡೆಯಾಗಿದೆ. ಇದರಲ್ಲಿ ಅವ್ಯವಹಾರವಾಗಿದೆ ಎಂದು ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್‌) ಗೆ ಮೇಯರ್ ಹಾಗೂ ಆಡಳಿತ ಪಕ್ಷದ ನಾಯಕ ಎನ್.ಆರ್.ರಮೇಶ್ ದೂರು ನೀಡಿದ್ದರು. ಈ ಕುರಿತು ತನಿಖೆ ನಡೆಸಿದ ನಂತರ ಟಿಪ್ಪಣಿಯನ್ನು ದುರ್ಬಳಕೆ ಮಾಡಿಕೊಂಡು 49 ಕೋಟಿ ರೂ. ಪಡೆದಿರುವ ಅಂಶ ಬಯಲಾಗಿತ್ತು. [ಜಾಹೀರಾತು ಫಲಕಗಳ ವಿರುದ್ಧ ಬಿಬಿಎಂಪಿ ಸಮರ]

ಏನಿದು ಹಗರಣ : ಬಿಬಿಎಂಪಿ ಆಯುಕ್ತರು 110 ಹಳ್ಳಿಗಳಲ್ಲಿ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ 39 ಲಕ್ಷ ರೂ. ಬಿಲ್ ಪಾವತಿಸುವಂತೆ ಆದೇಶ ನೀಡಿದ್ದರು. ಈ ಟಿಪ್ಪಣಿ ಹಾಳೆಯನ್ನು ತೆಗೆದು 147 ಕಾಮಗಾರಿಗಳ ಕಡತಕ್ಕೆ ಸೇರಿಸಿ 49 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಎಲ್ಲಾ ಕಾಮಗಾರಿ ಕಡತವನ್ನು ಪರಿಶೀಲನೆ ನಡೆಸಿದಾಗ ಕಾರ್ಯಪಾಲಕ ಇಂಜಿನಿಯರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳ ಟಿಪ್ಪಣಿ, ಶಿಫಾರಸುಗಳಿಲ್ಲದೇ ಹಣ ಬಿಡುಗಡೆ ಮಾಡಿರುವ ಅಂಶ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೆಎಂಸಿ ಕಾಯ್ದೆ ಉಲ್ಲಂಘನೆ ಆರೋಪದಡಿ ಒಬ್ಬರನ್ನು ಬಂಧಿಸಲಾಗಿದೆ.

ಮಂಗಳವಾರ ಸಂಜೀವಮೂರ್ತಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ವೀರಗೌಡ ಪಾಟೀಲ್ ಹಾಗೂ ರಾಜಶೇಖರ್ ತಲೆಮರೆಸಿಕೊಂಡಿದ್ದು ಅವರಿಗಾಗಿ ಹುಡುಕಾಟ ನಡೆದಿದೆ ಎಂದು ಬಿಎಂಟಿಎಫ್ ಪೊಲೀಸರು ಹೇಳಿದ್ದಾರೆ. ಗುತ್ತಿಗೆದಾರರ ಕೈವಾಡವೂ ಅಕ್ರಮದಲ್ಲಿ ಇರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಬಿಎಂಟಿಎಫ್ ಪೊಲೀಸರ ತನಿಖೆ ಬಳಿಕ ಪಾಲಿಕೆ ವತಿಯಿಂದ ಇಲಾಖೆ ವಿಚಾರಣೆ ನಡೆಸಲಾಗುತ್ತದೆ. ತನಿಖೆ ಮುಗಿಯುವವರೆಗೆ ಅಧಿಕಾರಿಗಳನ್ನು ಅಮಾನತ್ತಿನಲ್ಲಿ ಇಡಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀನಾರಾಯಣ ಹೇಳಿದ್ದಾರೆ.

English summary
The Bangalore Metropolitan Task Force (BMTF) arrested a BBMP officer for allegedly withdrew Rs 49 core from the Palike's account by forging documents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X