ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನನಗೆ ತೊಂದರೆ ನೀಡುತ್ತಿರುವುದೇಕೆ? ನಾನು ಮಾಡಿರುವ ಅನ್ಯಾಯವಾದರೂ ಏನು?

|
Google Oneindia Kannada News

ಬೆಂಗಳೂರು, ಅ. 29: ನಾನು ಈ ಉಪಚುನಾವಣೆಗೆ ಸ್ಪರ್ಧಿಸಿದ ದಿನದಿಂದಲೂ ಅಡಿಗಡಿಗೂ ನನ್ನ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಕಡೆಯವರು ತೊಂದರೆ ನೀಡುತ್ತಿದ್ದಾರೆ ಎಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಅಭ್ಯರ್ಥಿ ಕುಸುಮಾ ಹೆಚ್ ಬೇಸರ ವ್ಯಕ್ತಪಡಿಸಿದ್ದಾರೆ. ಆರ್ ಆರ್ ನಗರದಲ್ಲಿ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಜಾತಿ ಕಾರ್ಡ್ ಆಯ್ತು. ಈಗ ತಾಯಿ ಕಾರ್ಡ್ ಬಳಸುತ್ತಿದ್ದಾರೆ ಎಂದರು.

ನಾನು ಚುನಾವಣೆಗೆ ಸ್ಪರ್ಧಿಸಿದ ಮೊದಲ ದಿನದಿಂದ ನನ್ನನ್ನು ಗುರಿಯಾಗಿಸಿ ಮಾನಸಿಕವಾಗಿ ದಾಳಿ ಮಾಡುತ್ತಿದ್ದಾರೆ. ನಾಮಪತ್ರ ಸಲ್ಲಿಸುವ ಮುನ್ನ ನನ್ನ ಪತಿ ಡಿ.ಕೆ ರವಿ ಅವರ ಹೆಸರು ಬಳಸುವಂತಿಲ್ಲ, ಅವರ ಹೆಸರು ಬಳಸುವ ಯೋಗ್ಯತೆ ಇಲ್ಲ ಎಂದು ನನ್ನ ವೈಯಕ್ತಿಕ ಜೀವನ, ನನ್ನ ಹಕ್ಕು ಮತ್ತು ಭಾವನೆಗಳ ಮೇಲೆ ದಾಳಿ ಮಾಡಿದರು. ನಾಮಪತ್ರ ಸಲ್ಲಿಸಿದ ನಂತರ ಸುಳ್ಳು ಪ್ರಕರಣ ದಾಖಲಿಸಿದರು. ನನ್ನ ವೈಧವ್ಯದ ಬಗ್ಗೆ ಕೀಳಾಗಿ ಮಾತನಾಡಿ ನನ್ನ ಮನಸನ್ನು ಚುಚ್ಚಿದರು. ನಾವು ಪ್ರಚಾರ ಮಾಡದಂತೆ ತಡೆದರು ಎಂದು ವಿವರಿಸಿದರು.

'ವಿಶ್ವ ಮಾನವ' ಸಂದೇಶದಲ್ಲಿ ನಂಬಿಕೆ ಇದೆ

'ವಿಶ್ವ ಮಾನವ' ಸಂದೇಶದಲ್ಲಿ ನಂಬಿಕೆ ಇದೆ

ನಾನು ರಾಷ್ಟ್ರ ಕವಿ ಕುವೆಂಪು ಅವರ ವಿಶ್ವ ಮಾನವ ಸಂದೇಶದಲ್ಲಿ ನಂಬಿಕೆ ಇಟ್ಟು ಬೆಳೆದವಳು. ಎಲ್ಲ ಧರ್ಮ, ಜಾತಿ, ವರ್ಗದವರನ್ನು ಸಮಾನವಾಗಿ ಕಾಣುತ್ತಿದ್ದೇನೆ. ಯಾರೂ ಇಂಥದ್ದೇ ಜಾತಿ, ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟಿರುವುದಿಲ್ಲ. ನಾನು ಒಕ್ಕಲಿಗ ಹೆಣ್ಣು ಮಗಳು ಎಂಬುದರ ಬಗ್ಗೆ ಹೆಮ್ಮೆ, ಗೌರವವಿದೆ. ಆದರೆ ಒಕ್ಕಲಿಗರು ಮಾತ್ರ ನನ್ನ ಪರವಾಗಿ ಮತ ಚಲಾಯಿಸಬೇಕು. ಉಳಿದವರದು ಬೇಡ ಎಂದು ಎಲ್ಲಿಯೂ ಹೇಳಿಲ್ಲ. ನನಗೆ ಎಲ್ಲ ಸಮುದಾಯ, ಧರ್ಮ, ವರ್ಗದವರ ಆಶೀರ್ವಾದ ಬೇಕು.

ಬಿಜೆಪಿ ಅಭ್ಯರ್ಥಿ ಮುನಿರತ್ನ ಕಣ್ಣೀರಿನ ಕಥೆ ಹೇಳಿದ ಡಿಕೆಶಿ!ಬಿಜೆಪಿ ಅಭ್ಯರ್ಥಿ ಮುನಿರತ್ನ ಕಣ್ಣೀರಿನ ಕಥೆ ಹೇಳಿದ ಡಿಕೆಶಿ!

ನಾನು ಹೆಣ್ಣಾಗಿ ಹುಟ್ಟಿದ್ದೇ ತಪ್ಪಾ?

ನಾನು ಹೆಣ್ಣಾಗಿ ಹುಟ್ಟಿದ್ದೇ ತಪ್ಪಾ?

ಆದರೆ ನನ್ನ ವಿರುದ್ಧ ಜಾತಿ ಕಾರ್ಡ್ ಬಳಸಿ, ಟಾರ್ಗೆಟ್‌ ಮಾಡುತ್ತಿರುವುದು ನೋವು ತಂದಿದೆ. ನಾನು ನನ್ನ ಪ್ರತಿಸ್ಪರ್ಧಿ ಪಕ್ಷದ ಅಣ್ಣಂದಿರಿಗೆ ಯಾವ ಅನ್ಯಾಯ ಮಾಡಿದ್ದೇನೆ ಎಂದು ನನಗೆ ಈ ರೀತಿ ತೊಂದರೆ ಕೊಡುತ್ತಿದ್ದಾರೋ ಗೊತ್ತಿಲ್ಲ? ನಾನು ಹೆಣ್ಣಾಗಿ ಹುಟ್ಟಿದ್ದೇ ತಪ್ಪಾ. ಚುನಾವಣೆಗೆ ಸ್ಪರ್ಧಿಸಿದ್ದೇ ತಪ್ಪಾ? ಈ ವಯಸ್ಸಿಗೆ ಪಡಬಾರದ ನೋವನ್ನು ಅನುಭವಿಸಿದ್ದರೂ, ಇವರು ಮತ್ತಷ್ಟು ನೋವು ಕೊಡುತ್ತಿರುವುದು ಸರಿಯೇ? ಎಂದು ಪ್ರಶ್ನಿಸಿದರು.

ಅಣ್ಣ ಮುನಿರತ್ನ ಹೇಳುತ್ತಿರುವುದು ಮತ್ತೊಂದು

ಅಣ್ಣ ಮುನಿರತ್ನ ಹೇಳುತ್ತಿರುವುದು ಮತ್ತೊಂದು

ನಮ್ಮ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದೆ ಒಂದು, ಅಣ್ಣ ಮುನಿರತ್ನ ಅವರು ಹೇಳುತ್ತಿರುವುದು ಮತ್ತೊಂದು. ನನ್ನ ಜತೆ ಪ್ರಚಾರ ಮಾಡುವ ಸಂದರ್ಭದಲ್ಲಿ ಮುನಿರತ್ನ ಅಣ್ಣನವರು ಹಿಂದೆ ಕಾಂಗ್ರೆಸ್‌ನಲ್ಲಿದ್ದಾಗ, ಕಾಂಗ್ರೆಸ್ ಪಕ್ಷವೇ ತಮ್ಮ ತಾಯಿ, ಉಸಿರು, ತಮ್ಮ ರಕ್ತ ಎಂದಿದ್ದರಂತೆ. ಆದರೆ ಇವತ್ತು ಅದೇ ವ್ಯಕ್ತಿ ತಾಯಿ ಸಮಾನ ಎಂದ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಎಂದರು.

ಯಾರ್ರಿ ಅವನು ಮುನಿರತ್ನ? ನಮಗೆ ಗಾಡ್‌ಫಾದರ್‌ ಆಗೋದಕ್ಕೆ!ಯಾರ್ರಿ ಅವನು ಮುನಿರತ್ನ? ನಮಗೆ ಗಾಡ್‌ಫಾದರ್‌ ಆಗೋದಕ್ಕೆ!

ಆದರೆ ಇದನ್ನು ಯಾಕೆ ತಪ್ಪಾಗಿ ಬಿಂಬಿಸುತ್ತಿದ್ದಾರೋ ಗೊತ್ತಿಲ್ಲ. ಅವರ ತಾಯಿ ಬೇರೆಯಲ್ಲ, ನಮ್ಮ ತಾಯಿ ಬೇರೆಯಲ್ಲ. ಎಲ್ಲರ ತಾಯಿಯೂ ಒಂದೇ. ನಾವು ಅವರನ್ನು ಗೌರವಿಸುತ್ತೇವೆ. ಆದರೂ ಈ ವಿಷಯ ತಿರುಚುತ್ತಿರುವುದು ಆಶ್ಚರ್ಯ ತಂದಿದೆ ಎಂದು ಮುನಿರತ್ನ ತಾಯಿ ಕಣ್ಣೀರಿಗೆ ಕುಸುಮಾ ಅವರು ಪ್ರತಿಕ್ರಿಯೆ ನೀಡಿದರು.

ಎಂದೂ ದ್ರೋಹ ಬಗೆಯುವುದಿಲ್ಲ

ಎಂದೂ ದ್ರೋಹ ಬಗೆಯುವುದಿಲ್ಲ

ನಾನು ನನ್ನ ಮತದಾರರನ್ನು ನಂಬಿ ಬಂದಿದ್ದೇನೆ. ಅವರೇ ನನ್ನ ಶಕ್ತಿ, ಸ್ಫೂರ್ತಿ ಎಲ್ಲವೂ. ನಾನು ಅವರ ಸೇವೆಗಾಗಿ ಬಂದಿದ್ದು, ಅವರ ಕಷ್ಟ ಸುಖದಲ್ಲಿ ಭಾಗಿಯಾಗುತ್ತೇನೆ. ಅವರ ನೋವಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅವರ ನಂಬಿಕೆಗೆ ಎಂದೂ ದ್ರೋಹ ಬಗೆಯುವುದಿಲ್ಲ. ನನಗೆ ಒಂದೇ ಒಂದು ಅವಕಾಶ ನೀಡಿ ಅವರಲ್ಲಿ ಎಂದು ಕೇಳಿಕೊಳ್ಳುತ್ತಿದ್ದೇನೆ.

ಈಗ ಚುನಾವಣೆ ಯಾಕೆ ಬಂತು, ಇಷ್ಟು ದಿನ ಯಾಕೆ ತಡವಾಯಿತು, ಅದಕ್ಕೆ ಕಾರಣ ಏನು, ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ಚುನಾವಣೆ ನಡೆಯುತ್ತಿರುವುದು ಮೂರು ವರ್ಷಕ್ಕೆ ಮಾತ್ರ. ನಾನು ಸರಿಯಾಗಿ ಕೆಲಸ ಮಾಡದಿದ್ದರೆ, ನಿಮ್ಮ ನಂಬಿಕೆ ಉಳಿಸಿಕೊಳ್ಳದಿದ್ದರೆ ಶಿಕ್ಷಿಸುವ ಅಧಿಕಾರ, ಹಕ್ಕು ನಿಮ್ಮ ಕೈಯಲ್ಲೇ ಇದೆ ಎಂದು ವಿವರಿಸಿದರು.

English summary
Rajarajeshwari Nagar constituency candidate Kusuma H has expressed sadness that my rival BJP candidate has been disturbed ever since I contested the by-election. She has responded to the media in RR Nagar. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X