ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತನ್ನ ಕ್ಷೇತ್ರ ಬಳ್ಳಾರಿಯಂತಾಗುತ್ತದೆ ಎಂದು ಎಚ್ಚರಿಸಿದ ಬಿಜೆಪಿ ಅಭ್ಯರ್ಥಿ!

|
Google Oneindia Kannada News

ಬೆಂಗಳೂರು, ಅ. 22: ಪ್ರಚಾರದ ಭರಾಟೆಯಲ್ಲಿ ಆರ್‌ ಆರ್ ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಎಡವಟ್ಟು ಮಾಡಿಕೊಂಡಿದ್ದಾರೆ. ಗಲಾಟೆಗೆ ಉದಾಹರಣೆಯಾಗಿ ತಮ್ಮದೇ ಪಕ್ಷದ ಪ್ರಭಾವಿ ನಾಯಕರೊಬ್ಬರ ಕ್ಷೇತ್ರದ ಹೆಸರನ್ನು ಉಲ್ಲೇಖಿಸಿದ್ದಾರೆ. ಆ ಮೂಲಕ ತಮ್ಮ ಪಕ್ಷದಲ್ಲಿಯೇ ಚರ್ಚೆ ಹುಟ್ಟುಹಾಕಿದ್ದಾರೆ.

ರಾಜರಾಜೇಶ್ವರಿ ನಗರದಲ್ಲಿ ನಿನ್ನೆ (ಅ. 21) ಗಲಾಟೆ ನಡೆದಿತ್ತು. ಗಲಾಟೆಗೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಇಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಆರ್ ಆರ್ ನಗರದಲ್ಲಿ ಹೊರಗಿನಿಂದ ಸುಮಾರು 4 ಸಾವಿರ ಜನರು ಬಂದಿದ್ದಾರೆ. ಸ್ಥಳೀಯರನ್ನು ಬೆದರಿಸುವ ಕೆಲಸವಾಗುತ್ತಿದೆ. ಈ ಸಲ ಚುನಾವಣೆಯಲ್ಲಿ ರಾಜಕೀಯ ದ್ವೇಷ ಕಂಡು ಬರುತ್ತಿಲ್ಲ, ಬದಲಿಗೆ ವೈಯಕ್ತಿಕ ದ್ವೇಷ ಹೆಚ್ಚಾಗಿದೆ.

50 ಕೋಟಿ ರೂಪಾಯಿಗಳಿಗೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಮಾರಾಟ?50 ಕೋಟಿ ರೂಪಾಯಿಗಳಿಗೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಮಾರಾಟ?

ವೈಯಕ್ತಿಕ ದ್ವೇಷ ನಮ್ಮ ಕಣ್ಮುಂದೆಯೇ ಕಾಣುತ್ತಿದೆ. ಹೊರಗಿಂದ ಬಂದವರವರಿಂದ ಕ್ಷೇತ್ರದಲ್ಲಿ ಕೊಲೆ ಸಂಭವಿಸುವ ಸಾಧ್ಯತೆಗಳಿವೆ. ಅವರು ಕೊಲೆಗಳನ್ನು ಮಾಡೋವರೆಗೂ ಹೋಗಬೇಡಿ. ಈ ರೀತಿ ಹಿಂದೆ ಯಾವತ್ತೂ ಆಗಿಲ್ಲ. ಇಂಥ ಸಂಸ್ಕೃತಿಯನ್ನು ನಮ್ಮ ಕ್ಷೇತ್ರದಲ್ಲಿ ಬೆಳೆಸುವುದು ಬೇಡ. ನಾನು ತುಂಬ ನೊಂದು ಈ ಮಾತುಗಳನ್ನು ಆಡುತ್ತಿದ್ದೇನೆ ಎಂದಿದ್ದಾರೆ. ಈ ಸಂದರ್ಭದಲ್ಲಿ ತಮ್ಮದೇ ನಾಯಕರ ಕ್ಷೇತ್ರವನ್ನೂ ಉದಾಹರಣೆಯಾಗಿ ಬಳಿಸಿರುವುದು ಕುತೂಹಲ ಮೂಡಿಸಿದೆ.

ಹೊರಗಿನಿಂದ ಬಂದವರಿಂದ ಸಮಸ್ಯೆ!

ಹೊರಗಿನಿಂದ ಬಂದವರಿಂದ ಸಮಸ್ಯೆ!

ಕ್ಷೇತ್ರದ ಹೊರಗಿನಿಂದ ಬಂದವರಿಂದ ಸಮಸ್ಯೆಗಳಾಗುತ್ತಿವೆ. ಅವರು ಮನೆಮನೆಗೆ ತೆರಳಿ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಹೊರಗಿಂದ ಕರೆಸಿರುವ ನಾಲ್ಕು ಸಾವಿರ ಜನರ ವಿರುದ್ಧ ದೂರು ಕೊಡುತ್ತೇವೆ. ಇದನ್ನು ಹೀಗೆ ಬಿಟ್ಟರೆ ಸ್ಥಳೀಯ ಜನರಿಗೆ ಇದರಿಂದ ಮುಂದೆ ಸಮಸ್ಯೆಗಳಾಗುತ್ತವೆ. ಕೇಂದ್ರ ಸರ್ಕಾರಕ್ಕೆ ಈ ಸಂಬಂಧ ಪತ್ರ ಬರೆದು ದೂರು ಕೊಡುತ್ತೇನೆ ಎಂದು ಮುನಿರತ್ನ ಅವರು ಹೇಳಿಕೆ ಕೊಟ್ಟಿದ್ದಾರೆ.

ಆರ್ ಆರ್ ನಗರ ಬಳ್ಳಾರಿಯಂತಾಗುತ್ತದೆ

ಆರ್ ಆರ್ ನಗರ ಬಳ್ಳಾರಿಯಂತಾಗುತ್ತದೆ

ಆರ್ ಆರ್ ನಗರದಲ್ಲಿ ಸುಲಲಿತವಾಗಿ ಚುನಾವಣೆ ನಡೆಸಲು ಮಿಲಿಟರಿಯೇ ಬೇಕು. ಆರ್ ಆರ್ ನಗರದಲ್ಲಿ ಮಿಲಿಟರಿ ತಂದ್ರೇನೇ ಇದನ್ನು ತಡೆಗಟ್ಟಲು ಸಾಧ್ಯ. ಮಿಲಿಟರಿ ಇಲ್ಲದಿದ್ರೆ ಆರ್ ಆರ್ ನಗರವು ಬಳ್ಳಾರಿ ಥರ ಆಗಿಬಿಡುತ್ತದೆ ಎಂದಿದ್ದಾರೆ.


ತಮ್ಮದೇ ಪಕ್ಷದ ನಾಯಕರ ವಿರುದ್ಧ ಮಾತನಾಡುವಾಗ ಕಾಂಗ್ರೆಸ್ ನಾಯಕರು ಉದಾಹರಣೆಯಾಗಿ ಬಳ್ಳಾರಿ ರಿಪಬ್ಲಿಕ್ ಎಂದು ಆರೋಪಿಸುತ್ತಿದ್ದರು. ಇದೀಗ ಬಿಜೆಪಿ ಅಭ್ಯರ್ಥಿ ಆಗಿರುವ ಮುನಿರತ್ನ ಅವರೇ ಆರ್ ಆರ್ ನಗರ ಬಳ್ಳಾರಿಯಂತೆ ಆಗಿಬಿಡುತ್ತದೆ ಎಂದು ಹೇಳಿರುವುದು ಕುತೂಹಲ ಮೂಡಿಸಿದೆ.

ಆಮಿಷ ತಡೆದಿದ್ದರಿಂದ ಗಲಾಟೆ

ಆಮಿಷ ತಡೆದಿದ್ದರಿಂದ ಗಲಾಟೆ

ನಿನ್ನೆ (ಅ. 21) ಆರ್ ಆರ್ ನಗರದಲ್ಲಿ ನಡೆದ ಗಲಾಟೆಯ ಬಗ್ಗೆ ‌ಮುನಿರತ್ನ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಮಾಜಿ ಸಂಸದ ಧ್ರುವನಾರಾಯಣ್ ಅವರು ಕ್ಷೇತ್ರದ ಮತದಾರರಿಗೆ ಆಮಿಷ ಒಡ್ಡುತ್ತಿದ್ದರು. ಅದನ್ನು ನಮ್ಮ ಪಕ್ಷದ ಕಾರ್ಯಕರ್ತರು ತಡೆಯುವ ಪ್ರಯತ್ನ ಮಾಡಿದ್ದಾರೆ.

ಮುನಿರತ್ನಗೆ ಕೆಟ್ಟ ಹೆಸರು ತರಲು ಏನೆಲ್ಲ ಮಾಡಬೇಕೊ ಅದೆಲ್ಲ ಮಾಡುತ್ತೇವೆ ಅಂತಾ ಅವರು ನೇರವಾಗಿ ಹೇಳಿದ್ದಾರೆ. ಹೋಗಿ ಮತ ಕೇಳುವುದು ತಪ್ಪಲ್ಲ, ಆದರೆ ಮತದಾರರಲ್ಲಿ ಅವರ ವೈಯಕ್ತಿಕ ದಾಖಲೆಗಳನ್ನು ಕೇಳುತ್ತಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ನಮ್ಮವರ ಮೇಲೆ ದೂರು ನೀಡಿದ್ದಾರೆ ಎಂದು ಮುನಿರತ್ನ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.

Recommended Video

ಮುಂದೆ ಜೆಡಿಎಸ್ ಕಥೆ ಏನು? | Ramachandrappa | Oneindia Kannada
ಮತದಾರರಿಗೆ ಮುನಿರತ್ನ ಮನವಿ

ಮತದಾರರಿಗೆ ಮುನಿರತ್ನ ಮನವಿ

ನಿಮ್ಮ ವೋಟರ್ ಐಡಿ, ದಾಖಲೆ, ಫೋನ್ ನಂಬರ್ ಕೇಳಿ ಪಡೆದುಕೊಳ್ಳುತ್ತಿದ್ದಾರೆ. ಇಲ್ಲದ ಆಶ್ವಾಸನೆಗಳನ್ನು ನಿಮಗೆ ಕೊಡುತ್ತಿದ್ದಾರೆ. ಬೇರೆಯವರ ಆಶ್ವಾಸನೆ, ಆಮಿಷಗಳಿಗೆ ಬಲಿಯಾಗಬೇಡಿ. ಇದು ಮುಂದೆ ಅನಾಹುತ ಸೃಷ್ಟಿಸಲಿದೆ. ನಮ್ಮ ಕ್ಷೇತ್ರದಲ್ಲಿ ಪ್ರಜ್ಞಾವಂತ‌ ಮತದಾರರಿದ್ದೀರಿ. ಇಲ್ಲಿ ಅಕ್ರಮಗಳಿಗೆ ಅವಕಾಶ ಇಲ್ಲ ಎಂದು ಮತದಾರರಲ್ಲಿ ಮುನಿರತ್ನ ಮನವಿ ಮಾಡಿಕೊಂಡಿದ್ದಾರೆ.

English summary
RR Nagar BJP candidate Munirathna has dragged on controversy in election campaign. Taking example of Bellary he created a debate within their own party. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X