ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್.ಆರ್.ನಗರ ಕಡಿಮೆ ವೋಟಿಂಗ್, ಯಾರಿಗೆ ಲಾಭ: ಫೋಟೋ ಫಿನಿಷ್ ಫಲಿತಾಂಶ?

|
Google Oneindia Kannada News

ರಾಜರಾಜೇಶ್ವರಿ ನಗರ ಕ್ಷೇತ್ರದ ಅಸೆಂಬ್ಲಿ ಉಪಚುನಾವಣೆ ಮಂಗಳವಾರ (ನ 3) ಮುಕ್ತಾಯಗೊಂಡಿದ್ದು, ಮತದಾರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೂರು ಪಕ್ಷಗಳು ಏನು ಅಬ್ಬರದಿಂದ ಪ್ರಚಾರ ಮಾಡಿದ್ದವೋ, ಅದಕ್ಕೆ ತಕ್ಕಂತೆ ನಿರೀಕ್ಷಿತ ಪ್ರತಿಕ್ರಿಯೆ ಜನರಿಂದ ವ್ಯಕ್ತವಾಗಿಲ್ಲ.

ಸತತ ಪ್ರಚಾರದಿಂದ ಬಸವಳಿದಿರುವ ಮೂರೂ ಪಕ್ಷದ ಮುಖಂಡರು, ಈಗ ಸೋಲು, ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಪ್ರತೀ ಬೂತ್ ನಲ್ಲಾದ ವೋಟಿಂಗ್ ಪ್ರಮಾಣವನ್ನು ಕ್ರೋಢೀಕರಿಸಿಕೊಂಡು, ಯಾರಿಗೆ ವಿಜಯಲಕ್ಷ್ಮಿ ಒಲಿಯಲಿದ್ದಾರೆ ಎನ್ನುವುದನ್ನು ಲೆಕ್ಕಹಾಕುತ್ತಿವೆ.

ಶಿರಾ, ಆರ್.ಆರ್.ನಗರ ಉಪಚುನಾವಣೆ ಸಮೀಕ್ಷೆ: ಆಂತರಿಕ ವರದಿಶಿರಾ, ಆರ್.ಆರ್.ನಗರ ಉಪಚುನಾವಣೆ ಸಮೀಕ್ಷೆ: ಆಂತರಿಕ ವರದಿ

ಆರಂಭದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನರಂತಹ ಪ್ರಬಲ ಪ್ರತಿಸ್ಪರ್ಧಿಗೆ ಕಾಂಗ್ರೆಸ್ಸಿನ ಕುಸುಮಾ ಏನು ಪೈಪೋಟಿ ನೀಡಬಲ್ಲರು ಎನ್ನುವ ಲೆಕ್ಕಾಚಾರವಿತ್ತೋ, ಅದೆಲ್ಲಾ ಚುನಾವಣೆಯ ವೇಳೆ ಬದಲಾಗಿದೆ. ಅಷ್ಟರಮಟ್ಟಿಗೆ ಡಿಕೆಶಿ ಸಹೋದರರು ಕ್ಷೇತ್ರದ ಚಿತ್ರಣವನ್ನು ಬದಲಾಯಿಸಿದ್ದಾರೆ.

 ಉಪಚುನಾವಣೆ ಫಲಿತಾಂಶ ಯಡಿಯೂರಪ್ಪನವರ ರಾಜಕೀಯ ಭವಿಷ್ಯದ ದಿಕ್ಸೂಚಿ ಉಪಚುನಾವಣೆ ಫಲಿತಾಂಶ ಯಡಿಯೂರಪ್ಪನವರ ರಾಜಕೀಯ ಭವಿಷ್ಯದ ದಿಕ್ಸೂಚಿ

ಇನ್ನು, ಜೆಡಿಎಸ್ ಕೂಡಾ ಕೊನೆಯ ಹಂತದ ಪ್ರಚಾರವನ್ನು ಶ್ರಮವಹಿಸಿ ಮಾಡಿರುವುದರಿಂದ, ಭಾರೀ ಕುತೂಹಲಕ್ಕೆ ಎಡೆಮಾಡಿ ಕೊಟ್ಟಿರುವ ಆರ್.ಆರ್.ನಗರದ ಫಲಿತಾಂಶದ ಮೇಲೆ ಎಲ್ಲರ ಕಣ್ಣಿದೆ. ಕಡಿಮೆ ವೋಟಿಂಗ್ ನಿಂದ ಯಾರಿಗೆ ಲಾಭವಾಗಲಿದೆ ಎನ್ನುವ ಲೆಕ್ಕಾಚಾರದಲ್ಲಿ ಮೂರೂ ಪಕ್ಷಗಳಿವೆ.

ಬಿಜೆಪಿ ಅಭ್ಯರ್ಥಿ ಮುನಿರತ್ನ ಚುನಾವಣೆಯ ದಿನ, ಗೆಲುವಿನ ವಿಶ್ವಾಸ

ಬಿಜೆಪಿ ಅಭ್ಯರ್ಥಿ ಮುನಿರತ್ನ ಚುನಾವಣೆಯ ದಿನ, ಗೆಲುವಿನ ವಿಶ್ವಾಸ

ಬಿಜೆಪಿ ಅಭ್ಯರ್ಥಿ ಮುನಿರತ್ನ ಚುನಾವಣೆಯ ದಿನ, ಗೆಲುವಿನ ವಿಶ್ವಾಸದ ಮಾತನ್ನಾಡಿದ್ದರು. "ಹಲವು ಚುನಾವಣೆಯನ್ನು ನಾನು ಇಲ್ಲಿಂದ ನಾನು ಎದುರಿಸಿದ್ದೇನೆ, ನನಗೆ ಯಾವುದೇ ಟೆನ್ಸನ್ ಇಲ್ಲ. ಸಾಮಾನ್ಯವಾಗಿ ಸಂಜೆ ನಾಲ್ಕರಿಂದ, ಆರರವರೆಗೆ ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿ ಮತದಾನ ನಡೆಯುತ್ತದೆ" ಎಂದು ಹೇಳಿದ್ದರು. ಆದರೆ, ಈ ಉಪಚುನಾವಣೆಯಲ್ಲಿ ಅದು ನಡೆದಿಲ್ಲ.

ಕಾಂಗ್ರೆಸ್ಸಿನ ಅಭ್ಯರ್ಥಿ ಎಚ್.ಕುಸುಮಾ ಅವರಿಗೆ ಇದು ಲಾಭ ತಂದು ಕೊಡಲಿದೆಯೇ ?

ಕಾಂಗ್ರೆಸ್ಸಿನ ಅಭ್ಯರ್ಥಿ ಎಚ್.ಕುಸುಮಾ ಅವರಿಗೆ ಇದು ಲಾಭ ತಂದು ಕೊಡಲಿದೆಯೇ ?

ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 4,62,201, ಇದರಲ್ಲಿ ಒಟ್ಟು ಚಲಾವಣೆಯಾದ ಮತ 2,09,083. ಇದರಲ್ಲಿ ಪುರುಷರು ವೋಟಿಂಗ್ ಮಾಡಿದ್ದು 1,08,806, ಮಹಿಳೆಯರು 1,00,261. ಶೇಕಡಾವಾರು ಮತದಾನವಾಗಿದ್ದು 45.33. ಒಂದು ಲಕ್ಷ ಮಹಿಳಾ ವೋಟರ್ಸ್ ಮತದಾನದಲ್ಲಿ ಭಾಗಿಯಾಗಿದ್ದರಿಂದ, ಕಾಂಗ್ರೆಸ್ಸಿನ ಅಭ್ಯರ್ಥಿ ಎಚ್.ಕುಸುಮಾ ಅವರಿಗೆ ಇದು ಲಾಭ ತಂದು ಕೊಡಲಿದೆಯೇ ಎನ್ನುವುದು ಒಂದು ಲೆಕ್ಕಾಚಾರ.

ಬಿಜೆಪಿಗೆ ಇದರ ಲಾಭವಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ ಕಮಲದ ನಾಯಕರು

ಬಿಜೆಪಿಗೆ ಇದರ ಲಾಭವಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ ಕಮಲದ ನಾಯಕರು

ಇನ್ನು, ಯಶವಂತಪುರ, ಜಾಲಹಳ್ಳಿ, ಆರ್.ಆರ್.ನಗರ, ಜ್ಞಾನಭಾರತಿ, ಲಕ್ಶ್ಮೀದೇವಿ ನಗರ ವಾರ್ಡ್ ನಲ್ಲಿ ತುಸು ಹೆಚ್ಚಿನ ವೋಟಿಂಗ್ ನಡೆದಿದೆ. ಈ ಭಾಗದಲ್ಲಿ ಮುನಿರತ್ನ ಅವರಿಗೆ ಹೆಚ್ಚಿನ ಕಂಟ್ರೋಲ್ ಇರುವುದರಿಂದ ಮತ್ತು ಕ್ಷೇತ್ರದ ಚಿತ್ರಣವನ್ನು ಬಲ್ಲವರಾಗಿರುವುದರಿಂದ, ಬಿಜೆಪಿಗೆ ಇದರ ಲಾಭವಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ ಕಮಲದ ನಾಯಕರು.

Recommended Video

Policeರಿಗೆ Justice ಸಿಗಲ್ಲ !! ಇನ್ನು ನಿಮ್ಗೆ!! | Oneindia Kannada
ಬಹುನಿರೀಕ್ಷಿತ ಈ ಚುನಾವಣೆಯ ಫಲಿತಾಂಶ ಫೋಟೋ ಫಿನಿಷ್

ಬಹುನಿರೀಕ್ಷಿತ ಈ ಚುನಾವಣೆಯ ಫಲಿತಾಂಶ ಫೋಟೋ ಫಿನಿಷ್

ಕಳೆದ ಬಾರಿಯ ಚುನಾವಣೆಗೆ ಹೋಲಿಸಿದರೆ ಶೇ.10ರಷ್ಟು ಕಡಿಮೆ ಮತದಾನವಾಗಿದೆ ಮತ್ತು ಒಟ್ಟು ಚಲಾವಣೆಯಾಗಿರುವ ಮತಗಳು ಸುಮಾರು 2.1ಲಕ್ಷ. ಹಾಗಾಗಿ, ಮೂರು ಅಭ್ಯರ್ಥಿಗಳಲ್ಲಿ ಯಾರಿಗೆ ಈ ಮತಗಳು ಹಂಚಿ ಹೋಗಲಿವೆ ಎನ್ನುವುದು ಒಂದು ಕಡೆಯಾದರೆ, ಯಾರು ಗೆದ್ದರೂ ಅಂತರ ಕಮ್ಮಿ ಇರುತ್ತದೆ ಎನ್ನುವುದು ಮುಖಂಡರುಗಳ ಲೆಕ್ಕಾಚಾರ. ಬಹುನಿರೀಕ್ಷಿತ ಈ ಚುನಾವಣೆಯ ಫಲಿತಾಂಶ ಫೋಟೋ ಫಿನಿಷ್ ಆದರೂ ಆಗಬಹುದು.

English summary
RR Nagar Assembly Bypoll: Is Low Turnout Heading Towards Photo Finish Result?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X