ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್.ಆರ್.ನಗರ: 3 ಸುತ್ತಿನಲ್ಲಿ ಜೆಡಿಎಸ್ಸಿಗೆ ಭಾರೀ ಹಿನ್ನಡೆ

|
Google Oneindia Kannada News

ಬೆಂಗಳೂರು, ನ 10: ಭಾರೀ ಕುತೂಹಲಕ್ಕೆ ಎಡೆಮಾಡಿ ಕೊಟ್ಟಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಯ ರಾಜರಾಜೇಶ್ವರಿ ನಗರ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಆರಂಭವಾಗಿದೆ.

Recommended Video

RR ನಗರದಲ್ಲಿ ನಾವು ಗೆಲ್ಲೋಕ್ಕೆ chance ಇಲ್ಲಾ | Oneindia Kannada

ಇದುವರೆಗಿನ ಮಾಹಿತಿಯ ಪ್ರಕಾರ ಮೂರು ಸುತ್ತಿನ ಮತ ಎಣಿಕೆ ಮುಗಿದಿದ್ದು, ಆರಂಭಿಕ ಫಲಿತಾಂಶದ ಪ್ರಕಾರ ಬಿಜೆಪಿ ಅಭ್ಯರ್ಥಿ ಮುನಿರತ್ನ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. ಮುನಿರತ್ನ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಎಚ್.ಕುಸುಮಾ ಅವರಿಗಿಂತ ಮುನ್ನಡೆಯಲ್ಲಿದ್ದಾರೆ.

 ಆರ್. ಆರ್. ನಗರ ಉಪ ಚನಾವಣೆ; ಮುನಿರತ್ನಗೆ ಆರಂಭಿಕ ಮುನ್ನಡೆ ಆರ್. ಆರ್. ನಗರ ಉಪ ಚನಾವಣೆ; ಮುನಿರತ್ನಗೆ ಆರಂಭಿಕ ಮುನ್ನಡೆ

ಇದೇ ರೀತಿಯಲ್ಲಿ ಫಲಿತಾಂಶ ಮುಂದುವರಿದರೆ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಠೇವಣಿ ಕಳೆದುಕೊಳ್ಳುವ ಸಾಧ್ಯತೆಯಿದೆ. ಈ ಕ್ಷೇತ್ರದಲ್ಲಿ ಸೋಲಿನ ಸುಳಿವನ್ನು ಮೊದಲೇ ನೀಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ನಾವು ಜಯದ ಸನಿಹಕ್ಕೆ ಬರುತ್ತೇವೆ ಎಂದು ಹೇಳಿದ್ದರು.

RR Nagar Assembly Bypoll: JDS Candidate Krishnamurthy Got Just 2500 Votes

ಮೂರು ಸುತ್ತಿನ ಮತಎಣಿಕೆಯಲ್ಲಿ ಗಮನಿಸಬೇಕಾದ ವಿಚಾರ ಏನಂದರೆ ಜೆಡಿಎಸ್ ಅಭ್ಯರ್ಥಿಗೆ ಬಂದಿದ್ದು ಕೇವಲ 2,500 ಮತಗಳು. ಇದುವರೆಗಿನ ಫಲಿತಾಂಶದ ಪ್ರಕಾರ, ಮುನಿರತ್ನ 6,418 ಮತಗಳಿಂದ ಮುನ್ನಡೆಯಲ್ಲಿದ್ದಾರೆ.

ಮೂರು ಸುತ್ತಿನ ಮತ ಎಣಿಕೆಯ ನಂತರ ಪಕ್ಷಕ್ಕೆ ಬಂದ ಮತಗಳು ಹೀಗಿವೆ:

ಮುನಿರತ್ನ (ಬಿಜೆಪಿ) - 15, 110
ಎಚ್. ಕುಸುಮಾ (ಕಾಂಗ್ರೆಸ್) - 8, 692
ಕೃಷ್ಣಮೂರ್ತಿ (ಜೆಡಿಎಸ್) - 2,500

English summary
RR Nagar Assembly Bypoll: JDS Candidate Krishnamurthy Got Just 2500Votes,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X