ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್.ಆರ್.ನಗರ: ಈ 3ಕಾರಣಕ್ಕಾಗಿ ಡಿ.ಕೆ.ಶಿವಕುಮಾರ್ ಗೆ ಇದು ಪ್ರತಿಷ್ಠೆಯ ಚುನಾವಣೆ

|
Google Oneindia Kannada News

ಬೆಂಗಳೂರು, ಅ 4: ಶಿರಾ ಮತ್ತು ರಾಜರಾಜೇಶ್ವರಿ ನಗರದ ಉಪಚುನಾವಣೆಯ ರಂಗು ಕಾವೇರುತ್ತಿದೆ. ಶಿರಾ ಕ್ಷೇತ್ರದ ವ್ಯಾಪ್ತಿಯ ಜೆಡಿಎಸ್ ಮುಖಂಡರು, ಇಂದು, ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರುತ್ತಿದ್ದಾರೆ.

ಇನ್ನು, ದಿವಂಗತ ಐಪಿಎಸ್ ಅಧಿಕಾರಿ ಡಿ.ಕೆ.ರವಿಯವರ ಪತ್ನಿ ಕುಸುಮಾ, ಕೂಡಾ ಇಂದು ಕಾಂಗ್ರೆಸ್ ಸೇರಿದ್ದಾರೆ. ಈ ಹಿಂದೆ ಕಾಂಗ್ರೆಸ್ ನಲ್ಲೇ ಇದ್ದ ರವಿ ಮಾವ, ಮಧ್ಯೆ ಜೆಡಿಎಸ್ ಪಕ್ಷಕ್ಕೆ ತನ್ನ ನಿಯತ್ತನ್ನು ತೋರಿಸಿದ್ದವರು.

ಯಡಿಯೂರಪ್ಪ ವಿರುದ್ದ ಆಪರೇಷನ್ ಕಮಲದ 16 ಮುಖಂಡರ ಬಂಡಾಯ ಸಾಧ್ಯತೆ?ಯಡಿಯೂರಪ್ಪ ವಿರುದ್ದ ಆಪರೇಷನ್ ಕಮಲದ 16 ಮುಖಂಡರ ಬಂಡಾಯ ಸಾಧ್ಯತೆ?

ಶನಿವಾರದಂದು (ಅ 3) ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಸಹೋದರ ಸುರೇಶ್ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್ ಜೊತೆಗೆ ರವಿಯವರ ಮಾವ ಹನುಮಂತರಾಯಪ್ಪನವರ ನಿವಾಸಕ್ಕೆ ಭೇಟಿ ನೀಡಿ ಚುನಾವಣಾ ಸಂಬಂಧ ಚರ್ಚಿಸಿದ್ದರು.

ರಾಜರಾಜೇಶ್ವರಿ ನಗರ ಉಪಚುನಾವಣೆ: ನೊಣವಿನಕೆರೆ ಅಜ್ಜಯ್ಯ ನುಡಿದ ಭವಿಷ್ಯರಾಜರಾಜೇಶ್ವರಿ ನಗರ ಉಪಚುನಾವಣೆ: ನೊಣವಿನಕೆರೆ ಅಜ್ಜಯ್ಯ ನುಡಿದ ಭವಿಷ್ಯ

ರಾಮಲಿಂಗ ರೆಡ್ಡಿ ನೇತೃತ್ವದ ಚುನಾವಣಾ ಸಮಿತಿ, ಆರ್.ಆರ್.ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾರು ಎನ್ನುವುದನ್ನು ಅಂತಿಮವಾಗಿ ಪ್ರಕಟಿಸಲಿದೆ. ಇನ್ನು, ನೊಣವಿನಕೆರೆ ಅಜ್ಜಯ್ಯನವರನ್ನೂ ಡಿಕೆಶಿ ಈ ಸಂಬಂಧ ಸಂಪರ್ಕಿಸಿದ್ದಾರೆ. ಡಿಕೆಶಿಗೆ ಈ ಚುನಾವಣೆ ಯಾಕಿಷ್ಟು ಪ್ರತಿಷ್ಠೆ?

ಡಿ.ಕೆ.ರವಿ ತಾಯಿ ಗೌರಮ್ಮ ಆಕ್ರೋಶ

ಡಿ.ಕೆ.ರವಿ ತಾಯಿ ಗೌರಮ್ಮ ಆಕ್ರೋಶ

ತನ್ನ ಸೊಸೆ ಕುಸುಮಾ ಕಾಂಗ್ರೆಸ್ಸಿನ ಸಂಭಾವ್ಯ ಅಭ್ಯರ್ಥಿ ಎಂದು ಗೊತ್ತಾಗುತ್ತಿದ್ದಂತೆಯೇ ಡಿ.ಕೆ.ರವಿ ತಾಯಿ ಗೌರಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಿಥಿಗೆ ಬಂದು ಹೋದವಳು ಆಮೇಲೆ ಒಂದು ದಿನಾನೂ ಈ ಕಡೆ ತಲೆ ಹಾಕಲಿಲ್ಲ ಎಂದು ಗೌರಮ್ಮ ಸಿಟ್ಟಾಗಿದ್ದಾರೆ. ಇದಕ್ಕೆ, ಕುಸುಮಾ ತಂದೆ ತಿರುಗೇಟು ನೀಡಿದ್ದಾರೆ ಕೂಡಾ..

ಕೆಪಿಸಿಸಿ ಅಧ್ಯಕ್ಷರಾದ ಮೇಲೆ ನಡೆಯುತ್ತಿರುವ ಮೊದಲ ಚುನಾವಣೆ

ಕೆಪಿಸಿಸಿ ಅಧ್ಯಕ್ಷರಾದ ಮೇಲೆ ನಡೆಯುತ್ತಿರುವ ಮೊದಲ ಚುನಾವಣೆ

ಕೆಪಿಸಿಸಿ ಅಧ್ಯಕ್ಷರಾದ ಮೇಲೆ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಹಾಗಾಗಿಯೇ, ಇದು ಡಿಕೆಶಿಗೆ ಸತ್ವಪರೀಕ್ಷೆ ಮತ್ತು ಪ್ರತಿಷ್ಠೆಯ ವಿಚಾರ. ಕೆಪಿಸಿಸಿಯಲ್ಲಿ ಇದೆ ಎನ್ನಲಾಗುತ್ತಿರುವ ಬಣ ರಾಜಕೀಯದಲ್ಲಿ ತನ್ನ ಖದರ್ ಅನ್ನು ತೋರಿಸಲು ಡಿಕೆಶಿಗೆ ಇದು ಸದಾವಕಾಶ. ಈ ಚುನಾವಣೆಯ ಮೂಲಕ ಹೈಕಮಾಂಡ್ ಮಟ್ಟದಲ್ಲೂ ತನ್ನ ಛಾಪನ್ನು ಮೂಡಿಸಲು ಡಿಕೆಶಿಗೆ ಇದೊಳ್ಳೆಯ ಸಮಯ.

ಸಹೋದರ ಡಿ.ಕೆ.ಸುರೇಶ್ ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಗೆ

ಸಹೋದರ ಡಿ.ಕೆ.ಸುರೇಶ್ ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಗೆ

ಇನ್ನೊಂದು ಪ್ರಮುಖ ಕಾರಣ ಏನಂದರೆ, ರಾಜರಾಜೇಶ್ವರಿ ನಗರ ಅಸೆಂಬ್ಲಿ ಕ್ಷೇತ್ರ ತನ್ನ ಸಹೋದರ ಡಿ.ಕೆ.ಸುರೇಶ್ ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಗೆ ಬರುವಂತದ್ದು. ಕಳೆದ ಬಾರಿ ಹೆಚ್ಚಿನ ಮತ ಡಿ.ಕೆ.ಸುರೇಶ್ ಗೆ ಇಲ್ಲಿಂದ ಬಂದಿತ್ತು. ಸಹೋದರನ ವ್ಯಾಪ್ತಿಯ ಕ್ಷೇತ್ರವಾಗಿರುವುದರಿಂದ ಜಯ ಸಾಧಿಸುವುದನ್ನು ಡಿಕೆಶಿ ಸಹೋದರರಿಬ್ಬರೂ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.

ಬಿಜೆಪಿಗೆ ಸೇರ್ಪಡೆಯಾಗಿರುವ ಮುನಿರತ್ನ, ಆಪರೇಶನ್ ಕಮಲಕ್ಕೆ ಒಳಗಾದವರು

ಬಿಜೆಪಿಗೆ ಸೇರ್ಪಡೆಯಾಗಿರುವ ಮುನಿರತ್ನ, ಆಪರೇಶನ್ ಕಮಲಕ್ಕೆ ಒಳಗಾದವರು

ಬಿಜೆಪಿಗೆ ಸೇರ್ಪಡೆಯಾಗಿರುವ ಮುನಿರತ್ನ, ಆಪರೇಶನ್ ಕಮಲಕ್ಕೆ ಒಳಗಾದವರು. ಇವರಿಂದಾಗಿ, ಸಮ್ಮಿಶ್ರ ಸರಕಾರ ಪತನಗೊಂಡಿತ್ತು. ಇವರ ಮನವೊಲಿಸಲು ಡಿಕೆಶಿ ಮುಂಬೈಗೆ ಹೋಗಿದ್ದೂ ಗೊತ್ತೇ ಇದೆ. ಪಕ್ಷಾಂತರಿಗಳಿಗೆ ಪಾಠ ಕಲಿಸಲು ಈಗಿನ ಚುನಾವಣೆಯಲ್ಲಿ ಶತಾಯಗತಾಯು ಜಯ ಸಾಧಿಸಲು, ಡಿಕೆಶಿ ತನ್ನ ರಾಜಕೀಯ ಅನುಭವವನ್ನೆಲ್ಲಾ ಧಾರೆ ಎರೆಯಬಹುದು.

Recommended Video

ಇದು ರಾಜಕೀಯ ಪ್ರೇರೇಪಿತ ,by - election ಹತ್ರ ಬಂತಲ್ಲಾ ? | Oneindia Kannada

English summary
RR Nagar Assembly Bypoll Is Prestigious Election For DK Shivakumar, 3 Reasons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X