ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ರೈಲ್ವೆ ಭದ್ರತಾ ಸುರಕ್ಷಾ ಪಡೆ ಘಟಕ ಸ್ಥಾಪನೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 09 : ಬೆಂಗಳೂರು ನಗರದಲ್ಲಿ ರೈಲ್ವೆ ಭದ್ರತಾ ಸುರಕ್ಷಾ ಪಡೆಯ ಶಾಶ್ವತ ಘಟಕ ಸ್ಥಾಪನೆಯಾಗಲಿದೆ. ಇದು ಕರ್ನಾಟಕದಲ್ಲಿ ಸ್ಥಾಪನೆಯಾಗುತ್ತಿರುವ ಮೊದಲ ಘಟಕವಾಗಿದೆ.

ರೈಲ್ವೆ ಭದ್ರತಾ ಸುರಕ್ಷಾ ಪಡೆ (ಆರ್‌ಪಿಎಸ್‌ಎಫ್) ತುರ್ತು ಸಂದರ್ಭದಲ್ಲಿ ನಗರದ ರೈಲು ನಿಲ್ದಾಣದ ಸುರಕ್ಷತೆಯ ಹೊಣೆ ಹೊರಲಿದೆ. ಪ್ರಸ್ತುತ ಸಿಕಂದರಾಬಾದ್ ಮತ್ತು ತಿರುಚಿನಾಪಳ್ಳಿಯಲ್ಲಿ ಈ ಘಟಕವಿದೆ.

ದಶಕಗಳ ಬೇಡಿಕೆಗೆ ಮನ್ನಣೆ; ಹುಬ್ಬಳ್ಳಿ-ಚೆನ್ನೈ ರೈಲು ಸೇವೆ ಆರಂಭದಶಕಗಳ ಬೇಡಿಕೆಗೆ ಮನ್ನಣೆ; ಹುಬ್ಬಳ್ಳಿ-ಚೆನ್ನೈ ರೈಲು ಸೇವೆ ಆರಂಭ

ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಸಮೀಪದಲ್ಲಿಯೇ 100 ಜನರು ಉಳಿದುಕೊಳ್ಳಬಹುದಾದದ ಘಟಕ ಸ್ಥಾಪನೆಯಾಗಲಿದೆ. ತುರ್ತು ಸಂದರ್ಭದಲ್ಲಿ ಯಶವಂತಪುರ, ಬೈಯಪ್ಪನಹಳ್ಳಿ, ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಈ ಘಟಕ ಧಾವಿಸಬಹುದಾಗಿದೆ.

ಹೊಸಪೇಟೆ-ಕೊಟ್ಟೂರು ನಡುವೆ ರೈಲು; ದಶಕಗಳ ಕನಸು ನನಸುಹೊಸಪೇಟೆ-ಕೊಟ್ಟೂರು ನಡುವೆ ರೈಲು; ದಶಕಗಳ ಕನಸು ನನಸು

RPSF Permanent Unit In Bengaluru Soon

ಬೆಂಗಳೂರು ನಗರಕ್ಕೆ ಆಗಾಗ ಉಗ್ರರ ದಾಳಿಯ ಎಚ್ಚರಿಕೆ ಬರುತ್ತದೆ. ಆದ್ದರಿಂದ, ನಗರದಲ್ಲಿ ಆರ್‌ಪಿಎಸ್‌ಎಫ್ ಶಾಶ್ವತ ಘಟಕ ಸ್ಥಾಪನೆ ಅನುಕೂಲವಾಗಲಿದೆ. ಈಗಾಗಲೇ ಘಟಕ ಸ್ಥಾಪನೆ ಕಾಮಗಾರಿ ಆರಂಭವಾಗಿದ್ದು, ಆರು ತಿಂಗಳಿನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಪ್ರವಾಸಿಗರಿಗೆ ಸಿಹಿ ಸುದ್ದಿ; ದೂಧ್ ಸಾಗರದಲ್ಲಿ ರೈಲು ನಿಲ್ಲಲಿದೆಪ್ರವಾಸಿಗರಿಗೆ ಸಿಹಿ ಸುದ್ದಿ; ದೂಧ್ ಸಾಗರದಲ್ಲಿ ರೈಲು ನಿಲ್ಲಲಿದೆ

ಯಾವುದೇ ತುರ್ತು ಸಂದರ್ಭದಲ್ಲಿ ಕಾರ್ಯ ನಿರ್ವಹಣೆ ಮಾಡಲು ಆರ್‌ಪಿಎಸ್‌ಎಫ್ ತಂಡ ಸಿದ್ಧವಾಗಿರುತ್ತದೆ. ಈ ತಂಡದ ಸದಸ್ಯರಿಗೆ ಅಗತ್ಯ ತರಬೇತಿಯನ್ನು ನೀಡಲಾಗಿರುತ್ತದೆ. ಮಹಿಳಾ ಮತ್ತು ಪುರುಷರ ಪ್ರತ್ಯೇಕ ವಿಭಾಗ ಇದರಲ್ಲಿ ಇರುತ್ತದೆ.

ಇದುವರೆಗೂ ನಕ್ಸಲ್ ಪೀಡಿತ ಪ್ರದೇಶ, ಈಶಾನ್ಯ ರಾಜ್ಯಗಳು, ಉಗ್ರರ ಉಪಟಳವಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತ್ರ ಶಾಶ್ವತ ಆರ್‌ಪಿಎಸ್‌ಎಫ್ ಘಟಕ ಸ್ಥಾಪನೆಯಾಗುತ್ತಿತ್ತು. ಈಗ ಬೆಂಗಳೂರಿಗೂ ಘಟಕ ಸಿಕ್ಕಿದೆ.

English summary
Railway Protection Special Force (RPSF) permanent unit will set up near KSR railway station, Bengaluru soon. It is the 1st unit of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X