• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಕೆಜಿಎಫ್‌ 2' ಚಿತ್ರಕ್ಕೆ ಮತ್ತೆ ವಿಘ್ನ: ತಂಗಂ ತಾಯಿಯಿಂದ ದಾವೆ

|

ಬೆಂಗಳೂರು, ಸೆಪ್ಟೆಂಬರ್ 29: ಬಹುನಿರೀಕ್ಷಿತ ಕೆಜಿಎಫ್‌ 2 ಸಿನೆಮಾಕ್ಕೆ ಮತ್ತೊಂದು ಕಂಟಕ ಎದುರಾಗಿದೆ. ರೌಡಿ ತಂಗಂ ತಾಯಿ ಕೆಜಿಎಫ್ 2 ಸಿನಿಮಾ ಮೇಲೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.

'ತಮ್ಮ ಮಗ ರೌಡಿ ತಂಗಂ ಕುರಿತು ಉತ್ತಮವಾಗಿ ತೋರಿಸುತ್ತೇವೆಂದು ಸಿನಿಮಾದವರು ಹೇಳಿದ್ದರು, ಆದರೆ ಕೆಜಿಎಫ್‌ ಮೊದಲ ಚಿತ್ರದಲ್ಲಿ ಸಿನಿಮಾದಲ್ಲಿ ಆತನನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ' ಎಂದು ರೌಡಿ ತಂಗಂ ತಾಯಿ ಪೌಳಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಕೆಜಿಎಫ್‌ 2 ಚಿತ್ರಕ್ಕೆ ನಿರಾಳ ನೀಡಿದ ಹೈಕೋರ್ಟ್‌ ಆದೇಶಕೆಜಿಎಫ್‌ 2 ಚಿತ್ರಕ್ಕೆ ನಿರಾಳ ನೀಡಿದ ಹೈಕೋರ್ಟ್‌ ಆದೇಶ

ಎರಡನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದ್ದು, ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಪ್ರಶಾಂತ್ ನೀಲ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಹಾಗೂ ಬಿಜಿಎಂಎಲ್ ಕಂಪೆನಿಗೆ ನ್ಯಾಯಾಲಯವು ನೊಟೀಸ್ ನೀಡಿದೆ.

ಈ ಹಿಂದೆ 'ಕೋಲಾರ' ಎಂಬ ಚಿತ್ರದ ಮೇಲೆಯೂ ರೌಡಿ ತಂಗಂ ತಾಯಿ ದಾವೆ ಹೂಡಿದ್ದರು. 'ಕೋಲಾರ' ಚಿತ್ರದ ತಂಡವು ಹತ್ತು ಲಕ್ಷ ರೂಪಾಯಿ ನೀಡುವುದಾಗಿ ಹೇಳಿ ಕೊನೆಗೆ ನಾಲ್ಕು ಲಕ್ಷ ಹಣ ಮಾತ್ರ ನೀಡಿದ್ದರು ಎಂದು ತಂಗಂ ತಾಯಿ ಪೌಳಿ ಆರೋಪಿಸಿದ್ದರು.

ಕೆಜಿಎಫ್‌ 2 ವಿರುದ್ಧ ಕೆಲವು ದಿನಗಳ ಹಿಂದಷ್ಟೆ ಪ್ರಕರಣವೊಂದು ದಾಖಲಾಗಿ, ಚಿತ್ರತಂಡವು ಕೆಜಿಎಫ್‌ನ ಸೈನೈಡ್ ಗುಡ್ಡದಲ್ಲಿ ಚಿತ್ರೀಕರಣ ಮಾಡದಂತೆ ತಡೆಯಲಾಗಿತ್ತು. ಆದರೆ ನಂತರ ಹೈಕೋರ್ಟ್ ಈ ಆದೇಶಕ್ಕೆ ತಡೆ ನೀಡಿತು.

ಲೆವೆಲ್ಲೆ ಯಾರು? ಅವರಿಗೂ ಕೆಜಿಎಫ್ಗೂ ಎಲ್ಲಿಂದೆಲ್ಲಿಯ ಸಂಬಂಧ?ಲೆವೆಲ್ಲೆ ಯಾರು? ಅವರಿಗೂ ಕೆಜಿಎಫ್ಗೂ ಎಲ್ಲಿಂದೆಲ್ಲಿಯ ಸಂಬಂಧ?

ಕೆಜಿಎಫ್ ಚಿತ್ರ ಸರಣಿಯನ್ನು ಕೆಜಿಎಫ್‌ನ ಕುಖ್ಯಾತ ರೌಡಿ ತಂಗಂ ಜೀವನ ಸಂಬಂಧಿಸಿದ ಕತೆ ಇದೆ ಎನ್ನಲಾಗಿದೆ. 'ಕೋಲಾರ' ಚಿತ್ರವೂ ಸಹ ರೌಡಿ ತಂಗಂ ಬದುಕನ್ನೇ ಆಧಾರವಾಗಿಸಿಕೊಂಡು ಮಾಡಿದ್ದ ಸಿನಿಮಾವಾಗಿತ್ತು.

English summary
Rowdy Thangam's mother Pouly put case on KGF 2 movie. She alleged that 'Movie shows bad things about my son Thangam'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X