ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತನ್ನ ಮಗುವಿಗೆ ಮದ್ಯ ಕುಡಿಸಿ ವಿಕೃತಿ ಮೆರೆದ ರೌಡಿಶೀಟರ್

|
Google Oneindia Kannada News

ಬೆಂಗಳೂರು, ಫೆಬ್ರವರಿ 5: ತನ್ನ ಮಗುವಿಗೆ ಮದ್ಯ ಕುಡಿಸಿ ರೌಡಿ ಶೀಟರ್ ಓರ್ವ ವಿಕೃತಿ ಮೆರೆದಿದ್ದಾನೆ.

ಪತ್ನಿ ಮೇಲಿನ ಕೋಪಕ್ಕೆ ಮಗುವಿಗೆ ಮದ್ಯ ಕುಡಿಸಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ರೌಡಿ ಶೀಟರ್ ಕುಮಾರ್ ಎಂಬಾತ ಕೃತ್ಯವೆಸಗಿದ್ದು, ಈತನ ಪತ್ನಿ ಸಹಾಯ ಕೇಳಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ವನಿತಾ ಸಹಾಯವಾಣಿ ಕೇಂದ್ರ ಕಚೇರಿಯನ್ನು ಸಂಪರ್ಕಿಸಿದಾಗ ಘಟನೆ ಬೆಳಕಿಗೆ ಬಂದಿದೆ.

 ಶಿರಸಿ; ಕಾಲೇಜು ಸಮವಸ್ತ್ರದಲ್ಲೇ ಮದ್ಯ ಸೇವಿಸಿದ ವಿದ್ಯಾರ್ಥಿಗಳು ವಶಕ್ಕೆ ಶಿರಸಿ; ಕಾಲೇಜು ಸಮವಸ್ತ್ರದಲ್ಲೇ ಮದ್ಯ ಸೇವಿಸಿದ ವಿದ್ಯಾರ್ಥಿಗಳು ವಶಕ್ಕೆ

ಈ ಬಗ್ಗೆ ವನಿತಾ ಸಹಾಯವಾಣಿ ಸಿಬ್ಬಂದಿ ಸ್ಥಳೀಯ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Rowdy Sheeter Feeds Alcohol To 3 Year Old

ಕುಮಾರೇಶ್ ಪ್ರೀತಿಸಿ ಮದುವೆಯಾಗಿದ್ದ, ವಿವಾಹವಾದ ಬಳಿಕ ಆತ ರೌಡಿಶೀಟರ್, ದರೋಡೆಕೋರ ಎಂದು ಪತ್ನಿಗೆ ಗೊತ್ತಾಗಿತ್ತು. ದಂಪತಿಗೆ ಗಂಡು ಮಗು ಆಗಿತ್ತು. ಆದರೂ ಮಹಿಳೆ ಹೇಗೋ ಆತನೊಂದಿಗೆ ಸಂಸಾರ ಮಾಡಿಕೊಂಡಿದ್ದಳು.

ಕಿರುಕುಳ ಹೆಚ್ಚಾದಾಗ ಆತನಿಂದ ದೂರವಾಗಿ ಪ್ರತ್ಯೇಕವಾಗಿ ನೆಲೆಸಿದ್ದರು.ಆರೋಪಿಯ ಕಿರುಕುಳದಿಂದ ನೊಂದ ಮಹಿಳೆ ವನಿತಾ ಸಹಾಯವಾಣಿಯನ್ನು ಸಂಪರ್ಕಿಸಿದ್ದರು. ಮಹಿಳೆಯ ಕೌನ್ಸೆಲಿಂಗ್ ಮಾಡಿದಾಗ ಕುಮಾರೇಶ್ ರೌಡಿಶೀಟರ್ ಆಗಿದ್ದು,ಆತನೊಂದಿಗೆ ಸಂಸಾರ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಅಲ್ಲದೆ, ತನ್ನ ಮೂಗನ್ನು ಸ್ಕ್ರೂ ಡ್ರೈವರ್‌ನಿಂದ ಚುಚ್ಚಿ ಗಾಯಗೊಳಿಸಿರುವುದನ್ನು ಗಮನಕ್ಕೆ ತಂದಿದ್ದು, ಮಗುವಿನ ವಿಚಾರದಲ್ಲಿ ನಡೆದುಕೊಂಡ ವಿಕೃತಿ ಬಗ್ಗೆ ಬಾಯ್ಬಿಟ್ಟಿದ್ದರು.

ಪತ್ನಿ ತನ್ನನ್ನು ದೂರ ಮಾಡಿದ್ದಾಳೆ ಎಂಬ ಕೋಪಕ್ಕೆ ಆರೋಪಿ ಸುಮಾರು ನಾಲ್ಕೂವರೆ ವರ್ಷದ ತನ್ನ ಮಗುವಿಗೆ ಮದ್ಯ ಕುಡಿಸಿ ವಿಕೃತಿ ಮೆರೆದಿದ್ದಾನೆ. ಅಲ್ಲದೆ, ಕುಡಿದ ಮತ್ತಿನಲ್ಲಿ ಮಗು ಮಾತನಾಡುವುದನ್ನು ವಿಡಿಯೋ ಮಾಡಿಸಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

English summary
A rowdy-sheeter made his child drink alcohol in an effort of retaliation against his wife who walked out on him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X