{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"https://kannada.oneindia.com/news/bengaluru/rowdy-kavala-murder-accused-nakhara-babu-hacked-to-death-088287.html" }, "headline": "ಕವಳ ಕೊಂದ ರೌಡಿ ನಖ್ರಾ ಬಾಬು ಖಲಾಸ್", "url":"https://kannada.oneindia.com/news/bengaluru/rowdy-kavala-murder-accused-nakhara-babu-hacked-to-death-088287.html", "image": { "@type": "ImageObject", "url": "http://kannada.oneindia.com/img/1200x60x675/2014/10/12-kavala600.jpg", "width": "1200", "height":"675" }, "thumbnailUrl":"http://kannada.oneindia.com/img/128x50/2014/10/12-kavala600.jpg", "datePublished": "2014-10-12T16:53:16+05:30", "dateModified": "2014-10-12T17:28:18+05:30", "author": { "@type": "Person", "name": "Mahesh" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"Bangalore", "description": "Kavala alias Vijay Kumar's murder accused Nakhara Babu today brutally killed by Kavala gang reportedly. Nakhara Babu and 10 others accused in the case recently got bail and were ready to compromise with Kavala's men.", "keywords": "Kavala Murder Accused Nakhara Babu killed by Kavala Gang, ಕವಳ ಕೊಂದ ರೌಡಿ ನಖ್ರಾ ಬಾಬು ಖಲಾಸ್", "articleBody":"ಬೆಂಗಳೂರು, ಅ.12: ಕುಖ್ಯಾತ ರೌಡಿ ವಿಜಯಕುಮಾರ ಅಲಿಯಾಸ್ ಕವಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದ ನಖ್ರಾ ಬಾಬುವನ್ನು ಭಾನುವಾರ ಕೊಚ್ಚಿ ಕೊಲ್ಲಲಾಗಿದೆ. ಕವಳನನ್ನು ಹತ್ಯೆಗೈದು ಜೈಲು ಸೇರಿದ್ದ ನಖ್ರಾ ಬಾಬು ಹಾಗೂ 10 ಜನ ಆರೋಪಿಗಳು ಇತ್ತೀಚೆಗೆ ಜಾಮೀನು ಪಡೆದು ಹೊರಬಂದಿದ್ದರು. ಆದರೆ, ಸಾವಿನ ಭಯದಿಂದ ತತ್ತರಿಸುತ್ತಿದ್ದ ಬಾಬು ಭಾನುವಾರ ಹತ್ಯೆಯಾಗಿದ್ದಾನೆ. ಕೊಲೆ ಮಾಡಿದವರನ್ನು ಶೀಘ್ರವೇ ಬಂಧಿಸಲಾಗುತ್ತದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹೇಳಿದ್ದಾರೆ.ರೌಡಿಸಂ ಬಿಟ್ಟರೂ ರೌಡಿಗಳು ಮಾತ್ರ ಆತನ ವಿರುದ್ಧ ಕತ್ತಿ ಎತ್ತುವುದನ್ನು ನಿಲ್ಲಿಸುವುದಿಲ್ಲ. ದಂಧೆ ಬಿಡುತ್ತೇನೆ ಎನ್ನುತ್ತಿದ್ದ ಡೆಡ್ಲಿ ಸೋಮನ ಗ್ಯಾಂಗಿನ ಕವಳನಿಗೆ ಆದ ಗತಿ ಈಗ ನಖ್ರಾ ಬಾಬುವಿಗೂ ಆಗಿದೆ. ಜೀವ ಭಯದಿಂದ ಕವಳನನ್ನು ಕೊಂದಿದ್ದ ನಖ್ರಾ ಬಾಬುಗೆ ತನ್ನ ಮನೆಗಿಂತ ಜೈಲು ಸೇಫ್ ಆಗಿತ್ತು. ಅದರೆ, ಜಾಮೀನು ಪಡೆದು ಹೊರ ಬಂದ ತಕ್ಷಣವೇ ಸಹ ಆರೋಪಿಗಳಾದ ವಿಶ್ವ ಹಾಗೂ ಹೀರಾಲಾಲ್ ರನ್ನು ಕರೆಸಿಕೊಂಡಿದ್ದಾನೆ.ಕವಳನಂಥ ದೈತ್ಯನನ್ನು ಹೇಗೋ ಮುಗಿಸಿದ್ದೇವೆ ಆದರೆ, ನಮ್ಮ ಜೀವಕ್ಕೆ ರಕ್ಷಣೆ ಇಲ್ಲ. ಸುಮ್ಮನೆ ಕವಳನ ಶಿಷ್ಯರನ್ನು ಕರೆಸಿಕೊಂಡು ಕಾಂಪ್ರೋಮೈಸ್ ಮಾಡಿಕೊಳ್ಳೋಣ ಎಂದು ನಖ್ರಾ ಬಾಬು ಸಲಹೆ ನೀಡಿದ್ದಾನೆ. ಇದಕ್ಕೆ ವಿಶ್ವ ಹಾಗೂ ಹೀರಾಲಾಲ್ ತಲೆಯಾಡಿಸಿದ್ದಾರೆ. ಅದರಂತೆ ಭಾನುವಾರ ಮೀಟಿಂಗ್ ಫಿಕ್ಸ್ ಆಗಿದೆ. ಬಿಟಿಎಂ ಲೇಔಟ್ ನ ಜೈ ಭೀಮ್ ನಗರದ ನಖ್ರಾ ಬಾಬು ಮನೆಯಲ್ಲಿ ವಿಶ್ವ, ಹೀರಾಲಾಲ್ ಹಾಗೂ ಕವಳನ ಹುಡುಗರ ಜೊತೆ ಮಾತುಕತೆ ನಡೆದಿದೆ.ಅದರೆ, ಮಾತುಕತೆ ಮುರಿದು ಬಿದ್ದ ಹಿನ್ನಲೆಯಲ್ಲಿ ಮಾರಾಮಾರಿ ಶುರುವಾಗಿದೆ.ಜೀವ ಉಳಿಸಿಕೊಳ್ಳಲು ಕವಳನನ್ನು ಕೊಂದರುಮೊದಲೇ ರೊಚ್ಚಿಗೆದ್ದಿದ್ದ ಕವಳನ ಹುಡುಗರು ಒಂದೇ ಏಟಿಗೆ ನಖ್ರಾಬಾಬುವನ್ನು ಕೊಚ್ಚಿ ಹಾಕಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದ ವಿಶ್ವ, ಹೀರಾಲಾಲ್ ಗೆ ಸರಿಯಾದ ಗೂಸಾ ಬಿದ್ದಿದೆ. ನಂತರ ಆಲ್ಲಿಂದ ಕವಳನ ಹುಡುಗರು ಪರಾರಿಯಾಗಿದ್ದಾರೆ. ಮಾತುಕತೆ ಏಕೆ ಮುರಿದು ಬಿತ್ತು? ಪೊಲೀಸರಿಲ್ಲದೆ ಭೂತ ಜಗತ್ತಿನ ಎರಡು ಗ್ಯಾಂಗ್ ನಡುವಿನ ಸಂಧಾನ ಏಕೆ? ಮಾತುಕತೆಗೆ ಬಂದಿದ್ದ ಕವಳನ ಹುಡುಗರು ಯಾರು? ಎಂಬ ಮಾಹಿತಿಯನ್ನು ವಿಶ್ವ ಅಥವಾ ಹೀರಲಾಲ್ ಬಾಯ್ಬಿಟ್ಟರಷ್ಟೇ ತಿಳಿಯಲು ಸಾಧ್ಯ. ಡೆಡ್ಲಿ ಸೋಮನ ಬಂಟ ಕವಳ ಕೊಲೆಸದ್ಯಕ್ಕೆ ಘಟನಾ ಸ್ಥಳಕ್ಕೆ ಆಗಮಿಸಿರುವ ಮಡಿವಾಳ ಠಾಣೆ ಪೊಲೀಸರು ಗಾಯಗೊಂಡು ಬಿದ್ದಿದ್ದ ವಿಶ್ವ ಹಾಗೂ ಹೀರಾಲಾಲ್ ಗೆ ಸಮೀಪದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಸೈಂಟ್ ಜಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.. ಘಟನೆ ಬಗ್ಗೆ ವಿವರ ಸಂಗ್ರಹಿಸಲಾಗುತ್ತಿದ್ದು, ನಖ್ರಾ ಬಾಬುವನ್ನು ಕವಳನ ಗ್ಯಾಂಗಿನವರೇ ಕೊಂದಿರುವ ಶಂಕೆ ಇದೆ, ತನಿಖೆ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ.ಕವಳ ಹಾಗೂ ಬಾಬು ಕಿತ್ತಾಟ: ಒಂದು ಕಾಲದಲ್ಲಿ ಕವಳನ ಬಂಟನಾಗಿದ್ದ ನಖರಾ ಬಾಬು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕವಳನನ್ನು ಹತ್ಯೆ ಮಾಡಿ ನಗರದಲ್ಲಿ ತಲೆ ಮರೆಸಿಕೊಂಡಿದ್ದ. ಅದರೆ, ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದ, ನಂತರ ಇತರೆ ಆರೋಪಿಗಳ ಜೊತೆ ಜಾಮೀನು ಪಡೆದು ಹೊರ ಬಂದಿದ್ದ.ಸೋಮನ ಗ್ಯಾಂಗಿನ ಕವಳ-ಕುಟ್ಟಿ ಕಥೆಕವಳನ ಚಟುಚಟಿಕೆ ಬಗ್ಗೆ ಪೊಲೀಸರಿಗೆ ಹಾಗೂ ಇತರೆ ಗ್ಯಾಂಗ್ ಗಳಿಗೆ ಬಾಬು ಮಾಹಿತಿ ನೀಡುತ್ತಿದ್ದ. 2013ರ ವಿಧಾನಸಭಾ ಚುನಾವಣೆ ಸಮಯದಲ್ಲಿಯೂ ಬಾಬು ಕೊಟ್ಟ ಮಾಹಿತಿ ಅನ್ವಯ ಕವಳನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ತನ್ನ ಬಂಧನಕ್ಕೆ ನಖರಾ ಬಾಬು ಕಾರಣ ಎಂದು ತಿಳಿದ ಕವಳ ಆತನಿಗೆ ಜೀವ ಬೆದರಿಕೆ ಹಾಕಿದ್ದ. ಚುನಾವಣೆ ಮುಗಿದ ಬಳಿಕ ಜೈಲಿನಿಂದ ಹೊರಬಂದ ಕವಳ ಬಾಬುನನ್ನು ಅಪಹರಿಸಿ ಕಾಲು ಮುರಿದು ಹಾಕಿದ್ದ. ಇದರಿಂದ ತೀವ್ರವಾಗಿ ಹೆದರಿದ ಬಾಬು ಹೇಗಾದರೂ ಕವಳನನ್ನು ಮುಗಿಸಲು ಮುಂದಾದ. ಕುಟ್ಟಿ ಗ್ಯಾಂಗಿನ ಸಹಾಯ ಪಡೆದು ಕವಳನನ್ನು ಫಿನಿಷ್ ಮಾಡಿದ್ದ. ಈಗ ಬಾಬುವನ್ನು ಕವಳನ ಶಿಷ್ಯಂದಿರು ಮುಗಿಸಿದ್ದಾರೆ." }
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕವಳ ಕೊಂದ ರೌಡಿ ನಖ್ರಾ ಬಾಬು ಖಲಾಸ್

By Mahesh
|
Google Oneindia Kannada News

ಬೆಂಗಳೂರು, ಅ.12: ಕುಖ್ಯಾತ ರೌಡಿ ವಿಜಯಕುಮಾರ ಅಲಿಯಾಸ್ ಕವಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದ ನಖ್ರಾ ಬಾಬುವನ್ನು ಭಾನುವಾರ ಕೊಚ್ಚಿ ಕೊಲ್ಲಲಾಗಿದೆ. ಕವಳನನ್ನು ಹತ್ಯೆಗೈದು ಜೈಲು ಸೇರಿದ್ದ ನಖ್ರಾ ಬಾಬು ಹಾಗೂ 10 ಜನ ಆರೋಪಿಗಳು ಇತ್ತೀಚೆಗೆ ಜಾಮೀನು ಪಡೆದು ಹೊರಬಂದಿದ್ದರು. ಆದರೆ, ಸಾವಿನ ಭಯದಿಂದ ತತ್ತರಿಸುತ್ತಿದ್ದ ಬಾಬು ಭಾನುವಾರ ಹತ್ಯೆಯಾಗಿದ್ದಾನೆ. ಕೊಲೆ ಮಾಡಿದವರನ್ನು ಶೀಘ್ರವೇ ಬಂಧಿಸಲಾಗುತ್ತದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹೇಳಿದ್ದಾರೆ.

ರೌಡಿಸಂ ಬಿಟ್ಟರೂ ರೌಡಿಗಳು ಮಾತ್ರ ಆತನ ವಿರುದ್ಧ ಕತ್ತಿ ಎತ್ತುವುದನ್ನು ನಿಲ್ಲಿಸುವುದಿಲ್ಲ. ದಂಧೆ ಬಿಡುತ್ತೇನೆ ಎನ್ನುತ್ತಿದ್ದ ಡೆಡ್ಲಿ ಸೋಮನ ಗ್ಯಾಂಗಿನ ಕವಳನಿಗೆ ಆದ ಗತಿ ಈಗ ನಖ್ರಾ ಬಾಬುವಿಗೂ ಆಗಿದೆ. ಜೀವ ಭಯದಿಂದ ಕವಳನನ್ನು ಕೊಂದಿದ್ದ ನಖ್ರಾ ಬಾಬುಗೆ ತನ್ನ ಮನೆಗಿಂತ ಜೈಲು ಸೇಫ್ ಆಗಿತ್ತು. ಅದರೆ, ಜಾಮೀನು ಪಡೆದು ಹೊರ ಬಂದ ತಕ್ಷಣವೇ ಸಹ ಆರೋಪಿಗಳಾದ ವಿಶ್ವ ಹಾಗೂ ಹೀರಾಲಾಲ್ ರನ್ನು ಕರೆಸಿಕೊಂಡಿದ್ದಾನೆ.

'ಕವಳನಂಥ ದೈತ್ಯನನ್ನು ಹೇಗೋ ಮುಗಿಸಿದ್ದೇವೆ ಆದರೆ, ನಮ್ಮ ಜೀವಕ್ಕೆ ರಕ್ಷಣೆ ಇಲ್ಲ. ಸುಮ್ಮನೆ ಕವಳನ ಶಿಷ್ಯರನ್ನು ಕರೆಸಿಕೊಂಡು ಕಾಂಪ್ರೋಮೈಸ್ ಮಾಡಿಕೊಳ್ಳೋಣ' ಎಂದು ನಖ್ರಾ ಬಾಬು ಸಲಹೆ ನೀಡಿದ್ದಾನೆ. ಇದಕ್ಕೆ ವಿಶ್ವ ಹಾಗೂ ಹೀರಾಲಾಲ್ ತಲೆಯಾಡಿಸಿದ್ದಾರೆ. ಅದರಂತೆ ಭಾನುವಾರ ಮೀಟಿಂಗ್ ಫಿಕ್ಸ್ ಆಗಿದೆ. ಬಿಟಿಎಂ ಲೇಔಟ್ ನ ಜೈ ಭೀಮ್ ನಗರದ ನಖ್ರಾ ಬಾಬು ಮನೆಯಲ್ಲಿ ವಿಶ್ವ, ಹೀರಾಲಾಲ್ ಹಾಗೂ ಕವಳನ ಹುಡುಗರ ಜೊತೆ ಮಾತುಕತೆ ನಡೆದಿದೆ.ಅದರೆ, ಮಾತುಕತೆ ಮುರಿದು ಬಿದ್ದ ಹಿನ್ನಲೆಯಲ್ಲಿ ಮಾರಾಮಾರಿ ಶುರುವಾಗಿದೆ.[ಜೀವ ಉಳಿಸಿಕೊಳ್ಳಲು ಕವಳನನ್ನು ಕೊಂದರು]

Kavala Murder Accused Nakhara Babu killed by Kavala Gang

ಮೊದಲೇ ರೊಚ್ಚಿಗೆದ್ದಿದ್ದ ಕವಳನ ಹುಡುಗರು ಒಂದೇ ಏಟಿಗೆ ನಖ್ರಾಬಾಬುವನ್ನು ಕೊಚ್ಚಿ ಹಾಕಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದ ವಿಶ್ವ, ಹೀರಾಲಾಲ್ ಗೆ ಸರಿಯಾದ ಗೂಸಾ ಬಿದ್ದಿದೆ. ನಂತರ ಆಲ್ಲಿಂದ ಕವಳನ ಹುಡುಗರು ಪರಾರಿಯಾಗಿದ್ದಾರೆ. ಮಾತುಕತೆ ಏಕೆ ಮುರಿದು ಬಿತ್ತು? ಪೊಲೀಸರಿಲ್ಲದೆ ಭೂತ ಜಗತ್ತಿನ ಎರಡು ಗ್ಯಾಂಗ್ ನಡುವಿನ ಸಂಧಾನ ಏಕೆ? ಮಾತುಕತೆಗೆ ಬಂದಿದ್ದ ಕವಳನ ಹುಡುಗರು ಯಾರು? ಎಂಬ ಮಾಹಿತಿಯನ್ನು ವಿಶ್ವ ಅಥವಾ ಹೀರಲಾಲ್ ಬಾಯ್ಬಿಟ್ಟರಷ್ಟೇ ತಿಳಿಯಲು ಸಾಧ್ಯ. [ಡೆಡ್ಲಿ ಸೋಮನ ಬಂಟ ಕವಳ ಕೊಲೆ]

ಸದ್ಯಕ್ಕೆ ಘಟನಾ ಸ್ಥಳಕ್ಕೆ ಆಗಮಿಸಿರುವ ಮಡಿವಾಳ ಠಾಣೆ ಪೊಲೀಸರು ಗಾಯಗೊಂಡು ಬಿದ್ದಿದ್ದ ವಿಶ್ವ ಹಾಗೂ ಹೀರಾಲಾಲ್ ಗೆ ಸಮೀಪದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಸೈಂಟ್ ಜಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.. ಘಟನೆ ಬಗ್ಗೆ ವಿವರ ಸಂಗ್ರಹಿಸಲಾಗುತ್ತಿದ್ದು, ನಖ್ರಾ ಬಾಬುವನ್ನು ಕವಳನ ಗ್ಯಾಂಗಿನವರೇ ಕೊಂದಿರುವ ಶಂಕೆ ಇದೆ, ತನಿಖೆ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಕವಳ ಹಾಗೂ ಬಾಬು ಕಿತ್ತಾಟ: ಒಂದು ಕಾಲದಲ್ಲಿ ಕವಳನ ಬಂಟನಾಗಿದ್ದ ನಖರಾ ಬಾಬು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕವಳನನ್ನು ಹತ್ಯೆ ಮಾಡಿ ನಗರದಲ್ಲಿ ತಲೆ ಮರೆಸಿಕೊಂಡಿದ್ದ. ಅದರೆ, ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದ, ನಂತರ ಇತರೆ ಆರೋಪಿಗಳ ಜೊತೆ ಜಾಮೀನು ಪಡೆದು ಹೊರ ಬಂದಿದ್ದ.[ಸೋಮನ ಗ್ಯಾಂಗಿನ ಕವಳ-ಕುಟ್ಟಿ ಕಥೆ]

ಕವಳನ ಚಟುಚಟಿಕೆ ಬಗ್ಗೆ ಪೊಲೀಸರಿಗೆ ಹಾಗೂ ಇತರೆ ಗ್ಯಾಂಗ್ ಗಳಿಗೆ ಬಾಬು ಮಾಹಿತಿ ನೀಡುತ್ತಿದ್ದ. 2013ರ ವಿಧಾನಸಭಾ ಚುನಾವಣೆ ಸಮಯದಲ್ಲಿಯೂ ಬಾಬು ಕೊಟ್ಟ ಮಾಹಿತಿ ಅನ್ವಯ ಕವಳನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ತನ್ನ ಬಂಧನಕ್ಕೆ ನಖರಾ ಬಾಬು ಕಾರಣ ಎಂದು ತಿಳಿದ ಕವಳ ಆತನಿಗೆ ಜೀವ ಬೆದರಿಕೆ ಹಾಕಿದ್ದ.

ಚುನಾವಣೆ ಮುಗಿದ ಬಳಿಕ ಜೈಲಿನಿಂದ ಹೊರಬಂದ ಕವಳ ಬಾಬುನನ್ನು ಅಪಹರಿಸಿ ಕಾಲು ಮುರಿದು ಹಾಕಿದ್ದ. ಇದರಿಂದ ತೀವ್ರವಾಗಿ ಹೆದರಿದ ಬಾಬು ಹೇಗಾದರೂ ಕವಳನನ್ನು ಮುಗಿಸಲು ಮುಂದಾದ. ಕುಟ್ಟಿ ಗ್ಯಾಂಗಿನ ಸಹಾಯ ಪಡೆದು ಕವಳನನ್ನು ಫಿನಿಷ್ ಮಾಡಿದ್ದ. ಈಗ ಬಾಬುವನ್ನು ಕವಳನ ಶಿಷ್ಯಂದಿರು ಮುಗಿಸಿದ್ದಾರೆ.

English summary
Kavala alias Vijay Kumar's murder accused Nakhara Babu today brutally killed by Kavala gang reportedly. Nakhara Babu and 10 others accused in the case recently got bail and were ready to compromise with Kavala's men, Vijay Kumar alias Kavala (43) who brutally hacked to death in Hosur on June 24, 2014
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X