ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್ ಮತಬ್ಯಾಂಕ್ ಗೆ ಬೇಗ್ ಇಟ್ರಾ ಗುನ್ನಾ..

|
Google Oneindia Kannada News

ಬೆಂಗಳೂರು, ನವೆಂಬರ್ 25: ಅನರ್ಹ ಶಾಸಕ ರೋಷನ್ ಬೇಗ್ ನಡೆಸಿರುವ ಆಂತರಿಕ ಸಭೆ ಈಗ ಬಹಿರಂಗವಾಗಿದೆ. ಶಿವಾಜಿನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಲ್ಪಸಂಖ್ಯಾತರು ಬಿಜೆಪಿಯನ್ನು ಬೆಂಬಲಿಸಲು ಕರೆ ನೀಡಿದ್ದಾರೆ.

ಶಿವಾಜಿನಗರದ ಬಿಜೆಪಿ ಅಭ್ಯರ್ಥಿ ಸರವಣ್ ಪರವಾಗಿ ಪ್ರಚಾರ ಮಾಡಿದ್ದಾರೆ. ಈಗ ಬಿಜೆಪಿ ಪರವಾಗಿ ಬೇಗ್ ಬಹಿರಂಗವಾಗಿ ಪ್ರಚಾರಕ್ಕಿಳಿದಿದ್ದಾರೆ. ಈ ಮೂಲಕ ಕಾಂಗ್ರೆಸ್ ನ ಸಾಂಪ್ರದಾಯಿಕ ಮತಬ್ಯಾಂಕ್ ನ್ನು ಛಿದ್ರಗೊಳಲಿಸಲು ತಯಾರಿ ನಡೆಸಿದ್ದಾರೆ.

ಉಪ ಚುನಾವಣೆ ಕಣದಿಂದ ಹಿಂದೆ ಸರಿದ ರೋಷನ್ ಬೇಗ್ಉಪ ಚುನಾವಣೆ ಕಣದಿಂದ ಹಿಂದೆ ಸರಿದ ರೋಷನ್ ಬೇಗ್

"ಶಿವಾಜಿನಗರ ಇದೊಂದು ಛೋಟಾ ಹಿಂದೂಸ್ತಾನ್, ಇಲ್ಲಿಯೂ ಹಿಂದೂಗಳಿದ್ದಾರೆ, ಮುಸಲ್ಮಾನರಿದ್ದಾರೆ, ಕ್ರಿಶ್ಚಿಯನ್ನರು ಇದ್ದಾರೆ. ನಾವೆಲ್ಲರೂ ಒಂದಾಗಿ ಈ ದೇಶವನ್ನು ಅಭಿವೃದ್ದಿಗೊಳಿಸಬೇಕಿದೆ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ಕೈಯನ್ನು ಬಲಪಡಿಸಬೇಕಿದೆ. ದೇಶ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಮುಸಲ್ಮಾನರು ಹಿಂದೆ ಸರಿಯಬಾರದು." ಎಂದು ಹೇಳಿದ್ದಾರೆ.

Roshan Baig Punch To Congress Vote Bank

ಮುಸಲ್ಮಾನರು ವಿಶಿಷ್ಟವಾದವರು, ಶಾಂತಿ ಬಯಸುವವರು. ನಾವೂ ಕೂಡಾ ಬಿಜೆಪಿಯ ಜೊತೆಗಿದ್ದೇವೆ ಎಂಬುದನ್ನು ತೋರಿಸಬೇಕು. ನಮ್ಮನ್ನು ಇದುವರೆಗೆ ಮತಬ್ಯಾಂಕ್ ಆಗಿ ನೋಡಲಾಗಿತ್ತು, ಇನ್ಮುಂದೆ ನಾವು ಜಾಗೃತರಾಗೋಣ ಎಂದು ಹೇಳಿದ್ದಾರೆ.

ಒಮ್ಮೆಯೂ ಚುನಾವಣೆ ಗೆಲ್ಲದ ಅಭ್ಯರ್ಥಿಗೆ, ಕಾಂಗ್ರೆಸ್ ಮತ್ತೆಮತ್ತೆ ಟಿಕೆಟ್ಒಮ್ಮೆಯೂ ಚುನಾವಣೆ ಗೆಲ್ಲದ ಅಭ್ಯರ್ಥಿಗೆ, ಕಾಂಗ್ರೆಸ್ ಮತ್ತೆಮತ್ತೆ ಟಿಕೆಟ್

ಈ ಉಪ ಚುನಾವಣೆಯಲ್ಲಿ ನಾವೆಲ್ಲರೂ ಬಿಜೆಪಿಯನ್ನು ಗೆಲ್ಲಿಸಲು ಪ್ರಯತ್ನಿಸೋಣ ಎಂದು ಹೇಳುವ ಮೂಲಕ ಕಾಂಗ್ರೆಸ್ ಗೆ ಟಾಂಗ್ ಕೊಟ್ಟಿದ್ದಾರೆ. ಶಿವಾಜಿನಗರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸರವಣ್, ಕಾಂಗ್ರೆಸ್ ನಿಂದ ರಿಜ್ವಾನ್ ಅರ್ಷದ್ ಮತ್ತು ಜೆಡಿಎಸ್ ನಿಂದ ತನ್ವೀರ್ ಕಣದಲ್ಲಿದ್ದಾರೆ. ಡಿಸೆಂಬರ್ 05 ರಂದು ಮತದಾನ ನಡೆಯಲ್ಲಿದ್ದು, ಡಿಸೆಂಬರ್ 09 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

English summary
An Internal Meeting By Disqualified Legislator Roshan Baig Has Now Been Revealed. At a Meeting At The BJP Office In Shivajinagar, Minorities Have Called For Support For The BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X