ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಎಂಎ ಹಗರಣಕ್ಕೆ ಸ್ಫೋಟಕ ತಿರುವು ನೀಡಿದ ಸಚಿವರ ಹೇಳಿಕೆ

|
Google Oneindia Kannada News

Recommended Video

ಆರ್.ವಿ.ದೇಶಪಾಂಡೆ ನೀಡಿದ ಹೇಳಿಕೆ ನಿಜಾನಾ? | Oneindia Kannada

ಬೆಂಗಳೂರು, ಜೂನ್ 17: ಬಹುಕೋಟಿ ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಬಗೆದಷ್ಟು ಸತ್ಯಗಳು ಒಂದೊಂದಾಗಿ ಹೊರಬರುತ್ತಿದ್ದು, ಸಚಿವ ಆರ್ ವಿ ದೇಶಪಾಂಡೆ ನೀಡಿದ ಹೇಳಿಕೆ, ಪ್ರಕರಣಕ್ಕೆ ಭಾರೀ ತಿರುವು ನೀಡುವ ಸಾಧ್ಯತೆಯಿದೆ.

ಕಾಂಗ್ರೆಸ್ಸಿನ ಹಿರಿಯ ಮುಖಂಡರ ಜೊತೆ ಮುನಿಸಿಕೊಂಡು, ಬಹಿರಂಗ ಹೇಳಿಕೆ ನೀಡಿದ್ದ ಶಿವಾಜಿನಗರ ಶಾಸಕ ರೋಶನ್ ಬೇಗ್ ರನ್ನು ಗುರಿಯಾಗಿಸಿಕೊಂಡು ದೇಶಪಾಂಡೆ ಹೇಳಿಕೆ ನೀಡಿದ್ದಾರೆ.

ಸಿಎಂ ಕುಮಾರಸ್ವಾಮಿಗೆ ಸುದೀರ್ಘ ಪತ್ರ ಬರೆದ ಎಚ್ಕೆ ಪಾಟೀಲ್ಸಿಎಂ ಕುಮಾರಸ್ವಾಮಿಗೆ ಸುದೀರ್ಘ ಪತ್ರ ಬರೆದ ಎಚ್ಕೆ ಪಾಟೀಲ್

ಅಂದು, ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್ ಜೊತೆ ರೋಶನ್ ಬೇಗ್ ನನ್ನನ್ನು ಭೇಟಿಯಾಗಿದ್ದರು. ಅವರ ಕಂಪೆನಿಗೆ ಎನ್ಒಸಿ (no objection certificate) ನೀಡುವಂತೆ ಶಿಫಾರಸು ಮಾಡಿದ್ದರು ಎಂದು ದೇಶಪಾಂಡೆ ಹೇಳಿದ್ದಾರೆ.

Roshan Baig met me alongwith Mansoor Khan, Minister RV Deshpande statement

ಇಂಗ್ಲಿಷ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಉಲ್ಲೇಖಿಸಿರುವ ದೇಶಪಾಂಡೆ, ಸರಕಾರ ಮನ್ಸೂರ್ ಖಾನ್ ಗೆ ಎನ್ಒಸಿ ನೀಡಿದರೆ, ಬ್ಯಾಂಕ್ ನಿಂದ ಸುಮಾರು ಆರುನೂರು ಕೋಟಿ ಸಾಲ ಅವರಿಗೆ ದೊರೆಯುತ್ತಿತ್ತು ಎಂದು ದೇಶಪಾಂಡೆ ಹೇಳಿದ್ದಾರೆ.

ಮನ್ಸೂರ್ ಖಾನ್ ಬಗ್ಗೆ ಒಳ್ಳೆಯ ಅಭಿಪ್ರಾಯ ರೋಶನ್ ಬೇಗ್ ವ್ಯಕ್ತಪಡಿಸಿದ್ದರು. ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಅವರು ವ್ಯವಹಾರ ನಡೆಸುತ್ತಿದ್ದಾರೆ. ಆತ ಒಳ್ಳೆಯ ಮನುಷ್ಯ ಎಂದು ಮನ್ಸೂರ್ ಅವರನ್ನು ಬೇಗ್ ಹೊಗಳಿದ್ದರು ಎಂದು ದೇಶಪಾಂಡೆ ಹೇಳಿದ್ದಾರೆ.

5000 ಕೋಟಿ, ಒಂದು ಲಕ್ಷ ಹೂಡಿಕೆದಾರರು: ಮನ್ಸೂರ್ ಖಾನ್ ನ ವಂಚನೆ ಲೆಕ್ಕಾಚಾರ5000 ಕೋಟಿ, ಒಂದು ಲಕ್ಷ ಹೂಡಿಕೆದಾರರು: ಮನ್ಸೂರ್ ಖಾನ್ ನ ವಂಚನೆ ಲೆಕ್ಕಾಚಾರ

ಕಾನೂನೂ ರೀತಿಯಲ್ಲಿ ಏನು ಮಾಡಲು ಸಾಧ್ಯವೋ ಅದನ್ನು ಮಾತ್ರ ನನ್ನಿಂದ ಮಾಡಲು ಸಾಧ್ಯ ಎಂದು ರೋಶನ್ ಬೇಗ್ ಅವರಿಗೆ ನಾನು ಹೇಳಿದ್ದೆ ಎಂದು ಸಚಿವ ದೇಶಪಾಂಡೆ ಹೇಳಿದ್ದಾರೆ.

English summary
Senior Congress leader and Shivaji Nagar MLA Roshan Baig met me along with IMA Chief Mansoor Khan, Minister RV Deshpande statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X