ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಾಜಿನಗರಕ್ಕೆ ಮತ್ತೆ ರೋಷನ್‌ ಬೇಗ್‌ ಸುಲ್ತಾನ್‌!

By Nayana
|
Google Oneindia Kannada News

ಬೆಂಗಳೂರು, ಮೇ 15: ಪ್ರತಿಷ್ಠಿತ ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ನಗರಾಭಿವೃದ್ಧಿ ಸಚಿವ ಆರ್‌. ರೋಷನ್‌ ಬೇಗ್ ಅಧಿಪತ್ಯವನ್ನು ಮುಂದುವರೆಸಿದ್ದು, ಬಿಜೆಪಿಯ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡುಗಿಂತ ಸಾಕಷ್ಟು ಮೇಲುಗೈ ಸಾಧಿಸಿದ್ದಾರೆ.

ಈ ಮೊದಲು ಶಿವಾಜಿನಗರ ಕ್ಷೇತ್ರದಿಂದಲೇ ಆಯ್ಕೆಯಾಗುತ್ತಿದ್ದ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕ್ಷೇತ್ರ ಪುನರ್ ವಿಂಗಡಣೆ ನಂತರ ಹೆಬ್ಬಾಳ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ನಂತರ 2008ರಲ್ಲಿ ಹೆಬ್ಬಾಳದಿಂದ ಆಯ್ಕೆಯಾಗಿ ಪ್ರಕರಣವೊಂದರಲ್ಲಿ ಆರೋಪ ಎದುರಿಸಿ ನಂತರ ಸೋಲನ್ನು ಅನುಭವಿಸಿದ್ದರು.

ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ

ಅದಾದ ನಂತರ 2013ರಲ್ಲಿ ಶಿವಾಜಿನಗರ ಕ್ಷೇತ್ರಕ್ಕೆ ವಾಪಸಾಗಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಇದೀಗ ಎರಡನೇ ಬಾರಿ ಗೆಲುವಿಗಾಗಿ ಪ್ರಯತ್ನಿಸಿದ್ದರು. ಹೀಗಾಗಿ ಸೋಲಿನ ಭೀತಿಯಿಂದ ಹಾಲಿ ಸಚಿವ ರೋಷನ್ ಬೇಗ್ ತಮ್ಮ ಪುತ್ರ ರೂಮನ್ ಬೇಗ್ ಅವರನ್ನು ಕಣಕ್ಕಿಳಿಸಲು ಮುಂದಾಗಿದ್ದರು.

Roshan Baig may retain Shivajinagar

ಆದರೆ ಕಾಂಗ್ರೆಸ್‌ ಹೈಕಮಾಂಡ್‌ ರೋಮನ್‌ ಬೇಗ್‌ಗೆ ಒಪ್ಪಿರಲಿಲ್ಲ. ಹಾಗಾಗಿ ರೋಷನ್‌ ಬೇಗ್‌ ತಾವೇ ಕಣಕ್ಕಿಳಿದಿದ್ದರು. ಅಂತಿಮವಾಗಿ ಮತದಾರರು ರೋಷನ್‌ಬೇಗ್‌ ಮತ್ತೊಮ್ಮೆ, ಪೂರಕವಾಗಿ ಸ್ಪಂದಿಸಿದ್ದು, ಶಿವಾಜಿನಗರ ಮೇಲಿನ ಅಧಿಪತ್ಯವನ್ನು ರೋಷನ್‌ ಬೇಗ್‌ ಮುಂದುವರೆಸಿದ್ದಾರೆ.

LIVE: ಬಾದಾಮಿಯಲ್ಲಿ ಶ್ರೀರಾಮುಲು ವಿರುದ್ಧ ಸಿದ್ದರಾಮಯ್ಯ ಗೆಲುವುLIVE: ಬಾದಾಮಿಯಲ್ಲಿ ಶ್ರೀರಾಮುಲು ವಿರುದ್ಧ ಸಿದ್ದರಾಮಯ್ಯ ಗೆಲುವು

English summary
Urban development minister R.Roshan Baig is dominantly leading in Shivajinagar constituency by several thousand votes and he may defeat Bjp counterpart, former minister Katta Subramanya Naidu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X