• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭೂ ಕಬಳಿಕೆ : ರೋಷನ್ ಬೇಗ್ ವಿರುದ್ಧ ಎಸಿಎಂಎಂ ಕೋರ್ಟಿಗೆ ದೂರು

By Mahesh
|

ಬೆಂಗಳೂರು, ನವೆಂಬರ್ 27: ಪಾಕಿಸ್ತಾನಿ ಮಹಿಳೆಯೊಬ್ಬರಿಗೆ ಸೇರಿರುವ ಆಸ್ತಿಯನ್ನು ಕಬಳಿಕೆ ಮಾಡಿರುವ ಆರೋಪ ಹೊತ್ತಿರುವ ಸಚಿವ ರೋಶನ್ ಬೇಗ್ ಹಾಗೂ ಕುಟುಂಬದವರ ವಿರುದ್ಧ ಎಸಿಎಂಎಂ ನ್ಯಾಯಾಲಯಕ್ಕೆ ನಗರ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಅವರು ದೂರು ನೀಡಿದ್ದಾರೆ.

ಸುಮಾರು 165 ಕೋಟಿಗೂ ಹೆಚ್ಚು ಮೌಲ್ಯದ ಸರ್ಕಾರಿ ಆಸ್ತಿ ಕಬಳಿಕೆ ಮಾಡಿದ್ದಾರೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ, ನಗರ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಅವರು ಶುಕ್ರವಾರದಂದು ಸುದ್ದಿಗೋಷ್ಠಿ ನಡೆಸಿ ಗಂಭೀರ ಆರೋಪ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು,

ಈಗ ಸಚಿವ ರೋಷನ್ ಬೇಗ್ ಹಾಗೂ ಅವರ ಕುಟುಂಬದವರ ವಿರುದ್ಧ ಸಮಗ್ರ ತನಿಖೆಗೆ ಆಗ್ರಹಿಸಿ ಎಸಿಬಿ ಮತ್ತು ಬಿಎಂಟಿಎಫ್ ಹಾಗೂ ಎಸಿಎಂಎಂ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದೇನೆ ಎಂದು ಎನ್.ಆರ್.ರಮೇಶ್ ತಿಳಿಸಿದರು.

ಭೂ ಹಗರಣದ ಆರೋಪಕ್ಕೆ ಗುರಿಯಾಗಿರುವ ರೋಷನ್ ಬೇಗ್ ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕೈಬಿಡಬೇಕು ಹಾಗೂ ಹಗರಣ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.

ಹಗರಣದ ವಿವರಣೆ: ರೋಷನ್ ಬೇಗ್ ಅವರ ಪುತ್ರ ರುಮನ್ ಬೇಗ್ ಮತ್ತು ಬಿ.ಆರ್.ನಾಯ್ಡು ಸಹಭಾಗಿತ್ವದ ಸುಜಾಯ್ ಜಾಹೀರಾತು ಕಂಪನಿಯು ಅಕ್ರಮ ಜಾಹೀರಾತು ದಂಧೆಯಿಂದ ಪಾಲಿಕೆಗೆ ಪ್ರತಿವರ್ಷ 25 ಕೋಟಿ ನಷ್ಟ ಸಂಭವಿಸುತ್ತಿದೆ.

* ವಾರ್ಡ್ ನಂಬರ್ 63ರ ತಿಮ್ಮಯ್ಯ ರಸ್ತೆಯ ಕೆಎಸ್‍ಎಫ್ ಸಿ ಕಚೇರಿ ಪಕ್ಕದ 10 ಸಾವಿರ ಚದರಡಿ ಭೂಕಬಳಿಕೆ ಮಾಡಿದ್ದಾರೆ.

* ಧರ್ಮಸಿಂಗ್ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಸಚಿವರಾಗಿದ್ದ ರೋಷನ್ ಬೇಗ್ ತಮ್ಮ ಮಾಲೀಕತ್ವದ ಡ್ಯಾನಿಷ್ ಪಬ್ಲಿಕೇಷನ್ ಸಂಸ್ಥೆಗೆ ಕೇವಲ 1.68 ಕೋಟಿ ರೂ.ಗಳಿಗೆ ತಮ್ಮ ಪ್ರಭಾವ ಬಳಸಿ ಈ ಅಮೂಲ್ಯ ಆಸ್ತಿಯನ್ನು ವರ್ಗಾಯಿಸಿಕೊಂಡಿದ್ದಾರೆ.

* ಆ ಆಸ್ತಿಯ ಬೆಲೆ ಆಗ 10 ಕೋಟಿ ಇತ್ತು. ಅದನ್ನು ಕೇವಲ 1.68 ಕೋಟಿಗೆ ಬಿಬಿಎಂಪಿ ಯಿಂದ ಬರೆಸಿಕೊಂಡಿದ್ದರು. ಈ ಕುರಿತಂತೆ ಕೆಲವು ಸಾಮಾಜಿಕ ಹೋರಾಟಗಾರರು ಕೋರ್ಟ್‍ನಲ್ಲಿ ಕೇಸು ಹಾಕಿದ್ದಾರೆ. ಈ ಪ್ರಕರಣದಲ್ಲಿ ರೋಷನ್ ಬೇಗ್ ಮತ್ತು ಅವರ ಪತ್ನಿಯನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಇಡೀ ಆಸ್ತಿಯನ್ನು ಬಿಬಿಎಂಪಿ ವಶಕ್ಕೆ ಪಡೆಯುವಂತೆ ಉಚ್ಚ ನ್ಯಾಯಾಲಯ ಆದೇಶ ಮಾಡಿತ್ತು.

ಮಲ್ಲಿಕಾಬೇಗಂ ಆಸ್ತಿ: ದೇಶ ಬಿಟ್ಟು ಹೋದ ಮಲ್ಲಿಕಾಬೇಗಂ ಎಂಬ ಮಹಿಳೆಯ ಇನ್‍ಫೆಂಟ್ರಿ ರಸ್ತೆಯಲ್ಲಿರುವ 25408 ಚದರಡಿ ಆಸ್ತಿ ಸರ್ಕಾರಕ್ಕೆ ಸೇರಬೇಕು. ಆದರೆ, ರೋಷನ್ ಬೇಗ್ ಹಾಗೂ ಅವರ ಹಿಂಬಾಲಕರು ಆ ಆಸ್ತಿಗೆ ನಕಲಿ ದಾಖಲೆ ಸೃಷ್ಟಿಸಿ ಅದೇ ಜಾಗದಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣ ನಿರ್ಮಿಸಿದ್ದಾರೆ. ಇಂತಹ ಅಕ್ರಮ ಆಸ್ತಿಗೆ ಪಾಲಿಕೆ ಅಧಿಕಾರಿಗಳು ಖಾತೆ ಮಾಡಿಕೊಟ್ಟಿದ್ದಾರೆ. ಈ ಆಸ್ತಿಯ ಮೌಲ್ಯ 100 ಕೋಟಿಯಾಗಲಿದೆ.

ಇನ್ನೊಂದು ಪ್ರಕರಣದಲ್ಲಿ ಪುಲಿಕೇಶಿ ನಗರದ ಕೋಲ್ಸ್ ಪಾರ್ಕ್ ಹತ್ತಿರ 11635 ಚದರಡಿ ವಿಸ್ತೀರ್ಣದ 35 ಕೋಟಿ ರೂ.ಆಸ್ತಿಯನ್ನು ತಮ್ಮದಾಗಿಸಿಕೊಂಡು ಅದಕ್ಕೆ ಕೆಲವು ಮಂದಿಯನ್ನು ಭಾಗಿದಾರರನ್ನಾಗಿ ಬೇಗ್ ಮಾಡಿಕೊಂಡಿದ್ದಾರೆ. ಈ ಪ್ರಕರಣ ಕೂಡ ಕೆಳ ನ್ಯಾಯಾಲಯದಲ್ಲಿದೆ. ಸಚಿವ ರೋಷನ್ ಬೇಗ್ ಪ್ರಭಾವ ಬಳಸಿ ಹೈಕೋರ್ಟ್‍ನಲ್ಲಿ ತಡೆಯಾಜ್ಞೆ ತಂದಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BJP city spokesman N.R. Ramesh on alleged that Urban Development Minister Roshan Baig and his family members involved in land grabbing worth more than Rs 100 Cr.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more