ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಎಂಎ ಹಗರಣದಲ್ಲಿ ಭಾಗಿ ಆರೋಪ: ರೋಶನ್ ಬೇಗ್ ಹೇಳಿದ್ದು ಏನು?

|
Google Oneindia Kannada News

ಬೆಂಗಳೂರು, ಜೂನ್ 12: ಐಎಂಎ ಜ್ಯುವೆಲರ್ಸ್‌ ಹಗರಣದ ಹೆಸರು ತಳುಕು ಹಾಕಿಕೊಂಡ ಕಾರಣ ಶಾಸಕ ರೋಶನ್ ಬೇಗ್ ಅವರು ಇಂದು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು.

ನನಗೂ ಐಎಂಎ ಜ್ಯುವೆಲರ್ಸ್‌ಗೂ ಯಾವುದೇ ಸಂಬಂಧ ಇಲ್ಲ, ಅಷ್ಟೆ ಅಲ್ಲ ನನ್ನ ಕುಟುಂಬಸ್ತರು, ಸ್ನೇಹಿತರಿಗೂ ಈ ಸಂಸ್ಥೆಯೊಂದಿಗೆ ಯಾವುದೇ ಸಂಬಂಧ ಇಲ್ಲ ಹಾಗೊಮ್ಮೆ ಇದ್ದರೆ ಸಾಕ್ಷ್ಯ ನೀಡಿ ಎಂದು ರೋಶನ್ ಬೇಗ್ ಸವಾಲು ಹಾಕಿದರು.

ಚಾರಿತ್ರ್ಯ ಹರಣ, ರಾಜಕೀಯ ಕುತಂತ್ರಕ್ಕೆ ಬಲಿಪಶುವಾಗಲಾರೆ: ಬೇಗ್ಚಾರಿತ್ರ್ಯ ಹರಣ, ರಾಜಕೀಯ ಕುತಂತ್ರಕ್ಕೆ ಬಲಿಪಶುವಾಗಲಾರೆ: ಬೇಗ್

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಎಂಎ ಜ್ಯುವೆಲರ್ಸ್‌ ವಂಚನೆ ಪ್ರಕರಣವನ್ನು ಕರ್ನಾಟಕ ಸರ್ಕಾರ ಎಸ್‌ಐಟಿಗೆ ಒಪ್ಪಿಸಿರುವುದನ್ನು ಸ್ವಾಗತಿಸುತ್ತೇನೆ ಆದರೆ ಆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದರೆ ಉತ್ತಮ ಎಂದು ಅವರು ಹೇಳಿದರು.

ಮನ್ಸೂರ್ ಖಾನ್ ಒಬ್ಬ ವಂಚಕ, ಆತ ನನಗೆ ಹಣ ಕೊಟ್ಟಿದ್ದೇನೆ ಎಂದು ಹೇಳಿ ತಲೆಮರೆಸಿಕೊಂಡಿದ್ದಾನೆ, ಅವನ ಮಾತು ನಂಬುವುದು ಹೇಗೆ, ಹಣ ಪಡೆದುದರ ಬಗ್ಗೆ ಸಾಕ್ಷಿಗಳೇನಾದರೂ ಇದ್ದರೆ ನೀಡಿ ಎಂದು ಅವರು ಸವಾಲು ಹಾಕಿದರು.

ಶಾಲೆ ಅಭಿವೃದ್ಧಿಪಡಿಸಿಕೊಟ್ಟಿದ್ದರು: ಬೇಗ್‌

ಶಾಲೆ ಅಭಿವೃದ್ಧಿಪಡಿಸಿಕೊಟ್ಟಿದ್ದರು: ಬೇಗ್‌

ನನ್ನ ಕ್ಷೇತ್ರದಲ್ಲಿ ಇದ್ದ ಒಂದು ಹಳೆಯ ಸರ್ಕಾರಿ ಶಾಲೆಯನ್ನು ಸಾಮಾಜಿಕ ಕಳಕಳಿಯಿಂದ ಅಭಿವೃದ್ಧಿಪಡಿಸಿ ಕೊಡುತ್ತೇನೆ ಎಂದು ಹೇಳಿದ್ದರು ಅಂತೆಯೇ ಮಾಡಿಕೊಟ್ಟಿದ್ದರು, ಆ ಕಾರ್ಯಕ್ರಮಕ್ಕೆ ಅಂದಿನ ಸಿಎಂ ಸಹ ಬಂದಿದ್ದರು, ನಂತರ ನಮ್ಮ ಸಿಯಾಸತ್‌ ಪತ್ರಿಕೆ ಕಚೇರಿಗೆ ಬೆಂಕಿ ಬಿದ್ದು ನಷ್ಟವಾದಾಗ ಪತ್ರಿಕೆ ನಡೆಸಲು ದೇಣಿಗೆ ನೀಡಿದ್ದ, ಅದೂ ಸಹ ಎಲ್ಲವೂ ಚೆಕ್‌ನಲ್ಲಿಯೇ ಪಡೆದಿದ್ದೇವೆ ಎಂದು ರೋಶನ್ ಬೇಗ್ ಹೇಳಿದರು.

'ಮೊಬೈಲ್ ಸಂಖ್ಯೆ ಮಾಹಿತಿ ಪಡೆಯಿರಿ'

'ಮೊಬೈಲ್ ಸಂಖ್ಯೆ ಮಾಹಿತಿ ಪಡೆಯಿರಿ'

ಮನ್ಸೂರ್‌ ಖಾನ್ ಅವರ ಮೊಬೈಲ್ ಸಂಖ್ಯೆಯ ಕರೆ ಮಾಹಿತಿ ಪಡೆಯಿರಿ, ಕಾಣೆಯಾಗುವ ಹಿಂದಿನ 48 ಗಂಟೆಗಳಲ್ಲಿ ಆತನು ಯಾರ್ಯಾರನ್ನು ಸಂಪರ್ಕಿಸಿದ್ದಾನೆ, ಆತನನ್ನು ಯಾರು ಸಂಪರ್ಕಿಸಿದ್ದಾರೆ, ಆತನಿಗೆ ಬಂದಿರುವ ಮೆಸೆಜ್‌ಗಳ ಮಾಹಿತಿ ಪಡೆಯಿರಿ, ಆತನಿಗೆ ಯಾರು ಸಹಾಯ ಮಾಡಿದ್ದಾರೆ, ಆತನ ಜೊತೆ ಯಾರಿದ್ದಾರೆ ಎಂದು ಗೊತ್ತಾಗುತ್ತದೆ ಎಂದು ಅವರು ಹೇಳಿದರು.

2,000 ಕೋಟಿ ವಂಚನೆ ಜಾಲಕ್ಕೆ ಸಿಲುಕಿಸಿದ ಮೊಹ್ಮದ್ ಮನ್ಸೂರ್ ಖಾನ್ ಯಾರು?2,000 ಕೋಟಿ ವಂಚನೆ ಜಾಲಕ್ಕೆ ಸಿಲುಕಿಸಿದ ಮೊಹ್ಮದ್ ಮನ್ಸೂರ್ ಖಾನ್ ಯಾರು?

'ಎಲ್ಲಾ ವಂಚನೆ ಕಂಪೆನಿಗಳ ತನಿಖೆ ನಡೆಯಲಿ'

'ಎಲ್ಲಾ ವಂಚನೆ ಕಂಪೆನಿಗಳ ತನಿಖೆ ನಡೆಯಲಿ'

ಐಎಂಎ ಜೊತೆಗೆ ಆಂಬಿಡಂಟ್, ಆಜ್ಮೇರಾ, ಅಲಾ, ಕ್ಯಾಪಿಟಲ್ ಸಂಸ್ಥೆಗಳ ಬಗ್ಗೆಯೂ ತನಿಖೆ ಆಗಲಿ, ಹೂಡಿಕೆದಾರರ ಪರವಾಗಿ ನಾನು ಇದ್ದೇನೆ, ಅವರಿಗಾಗಿ ನನ್ನ ಹೃದಯ ಮಿಡಿಯುತ್ತದೆ, ಅವರ ಹೋರಾಟದಲ್ಲಿ ನಾನೂ ಪಾಲ್ಗೊಳ್ಳುತ್ತೇನೆ ಎಂದು ಬೇಗ್ ಹೇಳಿದರು.

'ಎಸ್‌ಐಟಿಗೆ ನನ್ನ ಪೂರ್ಣ ಸಹಕಾರ ಇದೆ'

'ಎಸ್‌ಐಟಿಗೆ ನನ್ನ ಪೂರ್ಣ ಸಹಕಾರ ಇದೆ'

ಎಸ್‌ಐಟಿ ತನಿಖೆಗೆ ನನ್ನ ಸಂಪೂರ್ಣ ಸಹಕಾರ ಇರುತ್ತದೆ, ನಾನಾಗಲಿ, ನನ್ನ ಕುಟುಂಬವಾಗಲಿ, ನನ್ನ ಸ್ನೇಹಿತರಾಗಲಿ ಐಎಂಎ ಹಗರಣದಲ್ಲಿ ಇಂಚೂ ಭಾಗೀದಾರರಲ್ಲ, ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಗುತ್ತಿದೆ, ಪ್ರಕರಣದ ತನಿಖೆ ಪಾರದರ್ಶಕವಾಗಿ ಆಗಿ ಸತ್ಯಾಂಶ ಹೊರಗೆ ಬರಲಿ ಎಂದು ಅವರು ಹೇಳಿದರು.

ಜೂನ್ 15ರ ಒಳಗೆ ಹಣ ವಾಪಸ್ ಕೊಡುತ್ತೇನೆ: ಐಎಂಎ ಮಾಲೀಕಜೂನ್ 15ರ ಒಳಗೆ ಹಣ ವಾಪಸ್ ಕೊಡುತ್ತೇನೆ: ಐಎಂಎ ಮಾಲೀಕ

ಆಡಿಯೋ ಕ್ಲಿಪ್‌ನಲ್ಲಿ ರೋಶನ್ ಬೇಗ್ ಹೆಸರು

ಆಡಿಯೋ ಕ್ಲಿಪ್‌ನಲ್ಲಿ ರೋಶನ್ ಬೇಗ್ ಹೆಸರು

ಐಎಂಎ ಜ್ಯುವೆಲ್ಸ್‌ ಮಾಲೀಕ ಮನ್ಸೂರ್ ಖಾನ್ ನಾಪತ್ತೆಯಾದ ನಂತರ ಬಿಡುಗಡೆ ಮಾಡಿದ ಎರಡೂ ಆಡಿಯೋ ಕ್ಲಿಪ್‌ಗಳಲ್ಲಿ ರೋಶನ್ ಬೇಗ್ ಅವರ ಬಗ್ಗೆ ಉಲ್ಲೇಖ ಇದೆ. ರೋಶನ್‌ ಬೇಗ್‌ಗೆ 400 ಕೋಟಿ ನೀಡಿರುವುದಾಗಿ ಮನ್ಸೂರ್ ಖಾನ್ ಆಡಿಯೋದಲ್ಲಿ ಹೇಳಿದ್ದಾರೆ. ಹಾಗಾಗಿ ರೋಶನ್ ಬೇಗ್ ವಿರುದ್ಧವೂ ಅನುಮಾನಗಳು ಎದ್ದಿವೆ, ಹಾಗಾಗಿಯೇ ಅವರು ಇಂದು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು.

English summary
Shivajinagar MLA Roshan Baig gives clarification about IMA jewels fraud case and his name pulled in the issue. He said i do not have connection with IMA jewels case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X