ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ವಿಟ್ಟರ್ ನಲ್ಲಿ ಕ್ಷಮೆ ಯಾಚಿಸಿದ ರೋಷನ್ ಬೇಗ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 14: ಪ್ರಧಾನಿ ನರೇಂದ್ರ ಮೋದಿಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ವಿವಾದ ಸೃಷ್ಟಿಸಿದ್ದ ರೋಷನ್ ಬೇಗ್ ಟ್ವಿಟ್ಟರ್ ನಲ್ಲಿ ಕ್ಷಮೆ ಯಾಚಿಸಿದ್ದಾರೆ. ಈ ಕುರಿತು ಸಾಲು ಸಾಲು ಟ್ವೀಟ್ ಮಾಡುವ ಮೂಲಕ, ನನ್ನ ಉದ್ದೇಶ ಯಾರಿಗೂ ನೋವನ್ನುಂಟು ಮಾಡುವುದಾಗಿರಲಿಲ್ಲ ಎಂದಿದ್ದಾರೆ.

ಅಷ್ಟಕ್ಕೂ ಮೋದಿಯವರ ಬಗ್ಗೆ ರೋಷನ್ ಬೇಗ್ ಹೇಳಿದ್ದೇನು?ಅಷ್ಟಕ್ಕೂ ಮೋದಿಯವರ ಬಗ್ಗೆ ರೋಷನ್ ಬೇಗ್ ಹೇಳಿದ್ದೇನು?

ಪ್ರಧಾನಿ ಮೋದಿಯವರ ವಿರುದ್ಧ ನಾನೆಂದೂ ಅಂಥ ಭಾಷೆಯನ್ನು ಪ್ರಯೋಗಿಸಿಲ್ಲ. ಬಿಜೆಪಿಗೆ ಕಾಂಗ್ರೆಸ್ ವಿರುದ್ಧ ಮಾತನಾಡುವುದಕ್ಕೆ ಯಾವ ವಿಷಯವೂ ಸಿಗುತ್ತಿಲ್ಲ. ಅದಕ್ಕೆಂದೇ ನನ್ನನ್ನು ಗುರಿಯಾಗಿಸುತ್ತಿದದೆ ಎಂದಿದ್ದಾರೆ.

ರೋಷನ್ ಬೇಗ ವಿವಾದಾತ್ಮಕ ಹೇಳಿಕೆ: ಸೂಲಿಬೆಲೆ ಟ್ವಿಟ್ಟರ್ ನಲ್ಲೇನಿದೆ?ರೋಷನ್ ಬೇಗ ವಿವಾದಾತ್ಮಕ ಹೇಳಿಕೆ: ಸೂಲಿಬೆಲೆ ಟ್ವಿಟ್ಟರ್ ನಲ್ಲೇನಿದೆ?

ಇತ್ತೀಚೆಗೆ ಪುಲಕೇಶಿನಗರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ರೋಷನ್ ಬೇಗ್, ಪ್ರಧಾನಿ ಮೋದಿಯವರನ್ನು ಸೂ.... ಮಗ, ಬೋ... ಮಗ ಎಂದೆಲ್ಲ ನಿಂದಿಸಿದ ವಿಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿತ್ತು.

ಆದರೆ ಇವೆಲ್ಲವೂ ಸುಳ್ಳು ಎಂದು ರೋಷನ್ ಬೇಗ್ ಟ್ವೀಟ್ ಮಾಡಿದ್ದಾರೆ.

ನನ್ನನ್ನು ಕ್ಷಮಿಸಿ

"ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ನನ್ನನ್ನು ಕ್ಷಮಿಸಿ. ನನಗೆ ಯಾರ ಬಗ್ಗೆಯೂ ಅಗೌರವವಿಲ್ಲ" ಎಂದು ರೋಷನ್ ಬೇಗ್ ಟ್ವೀಟ್ ಮಾಡಿದ್ದಾರೆ.

ಮೋದಿ ವಿರುದ್ಧ ಅವಾಚ್ಯ ಪದ ಬಳಸಿಲ್ಲ

ನಾನು ಯಾವತ್ತೂ ಅಂಥ ಭಾಷೆಯನ್ನು ಬಳಸಿಲ್ಲ, ಅದರಲ್ಲೂ ನಮ್ಮ ಪ್ರಧಾನಿಯ ಮೇಲೆ ಅವನ್ನು ಪ್ರಯೋಗಿಸಿಲ್ಲ. ಬಿಜೆಪಿಗಗೆ ನನ್ನ ವಿರುದ್ಧ ಮಾತನಾಡುವುದಕ್ಕೆ ಯಾವ ವಿಷಯವೂ ಇಲ್ಲ, ಆದ್ದರಿಂದ ಈ ವಿವಾದ ಸೃಷ್ಟಿಸುತ್ತಿದೆ ಎಂದು ಸಹ ಅವರು ಟ್ವೀಟ್ ಮಾದಿದ್ದಾರೆ.

ಮೋದಿ ಬಗ್ಗೆ ಅಪಾರ ಗೌರವವಿದೆ

ನನಗೆ ಪ್ರಧಾನಿ ಅವರ ಬಗ್ಗೆ ಅತ್ಯಂತ ಹೆಚ್ಚು ಗೌರವವಿದೆ. ಅವರು ಕೇವಲ ಬಿಜೆಪಿಯ ಪ್ರಧಾನಿಯಲ್ಲ, ದೇಶದ ಪ್ರಧಾನಿ ಎಂಬುದು ನನಗೆ ತಿಳಿದಿದೆ ಎಂದು ಮೋದಿಯವರ ಬಗೆಗಿನ ತಮ್ಮ ಗೌರವವನ್ನು ಟ್ವಿಟ್ಟರ್ ನಲ್ಲಿ ಹೊರಹಾಕಿದ್ದಾರೆ.

ತಮಿಳು ಮಾತಾಡೊಕೆ ಸರಿಯಾಗಿ ಬರೋಲ್ಲ

ನಾನು ತಮಿಳಿನಲ್ಲಿ ಯಾವ್ಯಾವುದೋ ಅವಾಚ್ಯ ಶಬ್ದ ಮಾತನಾಡಿದೇನೆ ಎನ್ನುತ್ತಾರೆ. ಆದರೆ ನನಗೆ ತಮಿಳನ್ನು ಸ್ಪಷ್ಟವಾಗಿ ಮಾತನಾಡುವುದಕ್ಕೆ ಬರುವುದಿಲ್ಲ. ನಾನು ಹೇಳಿದ್ದು ಗಿಎಸ್ ಟಿ ಮತ್ತು ನೋಟು ನಿಷೇಧದ ನಂತರ ಹಲವು ವ್ಯಾಪಾರಿಗಳು ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ ಎಂದಷ್ಟೇ ಎಂದು ತಮ್ಮ ಮಾತಿಗೆ ಸಮಜಾಯಿಷಿ ನೀಡಿದ್ದಾರೆ.

English summary
"If anyone has felt bad about my words. I have rendered my apology, I don't mean any disrespect to anyone", Roshan Baig tweeted, and begs apology for his remarks against Prime minister Narendra modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X