ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲ್ಲೇಶ್ವರದಲ್ಲಿ ರೋಮಿಯೋ ಲವ್ಸ್ ಅನಾರ್ಕಲಿ 'ನಾಟಕ

By Mahesh
|
Google Oneindia Kannada News

ಬೆಂಗಳೂರು, ಸೆ. 10: ರಂಗಾಸಕ್ತ ಯುವಕರ ಕನಸಿನ ಕೂಸಾಗಿ ರೂಪುಗೊಂಡು ಕನ್ನಡ ರಂಗಭೂಮಿಗೆ ತನ್ನ ಅಳಿಲು ಸೇವೆಯನ್ನು ನೀಡುತ್ತಾ ಬಂದಿರುವ 'ಧ್ವನಿ' ನಾಟಕ ತಂಡ ಸದಾ ಹೊಸ ಪ್ರಯೋಗಗಳನ್ನು ಮಾಡುತ್ತಾ ಬಂದಿದೆ. ಇಂಥದ್ದೊಂದು ಪ್ರಯೋಗ ಸೆ. 12 ರಂದು ಮಲ್ಲೇಶ್ವರದ ಸೇವಾ ಸದನದಲ್ಲಿ ಪ್ರದರ್ಶನಗೊಳ್ಳುತ್ತಿದೆ.

ಈ ನಾಟಕವು ಒಂದು ವಿಶಿಷ್ಟವಾದ ಪ್ರೇಮ ಕಥಾವಸ್ತುವುಳ್ಳ, ಹಾಸ್ಯ ಮಿಶ್ರಿತ ವಿನೂತನ ಪ್ರಯೋಗ. ಸುಮಾರು 100 ನಿಮಿಷಗಳ ಈ ನಾಟಕವು ತೀವ್ರ ಭಾವನೆಗಳ ಸಂಗಮವೂ ಆಗಿ ರಸಿಕ ಪ್ರೇಕ್ಷಕರ ಮನಸೂರೆಗೊಳ್ಳುವುದರಲ್ಲಿ ಸಂಶಯವಿಲ್ಲ.

ಈ ನಾಟಕದ ಉಪ ಶೀರ್ಷಿಕೆಯಾಗಿ "ಅದೇ ಪ್ರೀತಿ ಹೊಸ ರೀತಿ" ಎಂಬುದರಲ್ಲೇ ತಿಳಿದು ಬರುವುದೇನೆಂದರೆ ಪ್ರೀತಿ, ಪ್ರೇಮಗಳು ಶತ ಶತಮಾನಗಳಿಂದ ಅದೇ ಆಗಿದ್ದರೂ ಕಾಲಬದಲಾದಂತೆಲ್ಲಾ ತನ್ನ ಸ್ವರೂಪವನ್ನು ಆಯಾ ಕಾಲಮಾನಕ್ಕೆ ಹಾಗೂ ಸಂಸ್ಕೃತಿಗನುಗುಣವಾಗಿ ಬದಲಾಯಿಸಿಕೊಳ್ಳುತ್ತಾ ತನ್ನ ಇರುವನ್ನು ಸಾಬೀತುಪಡಿಸುತ್ತಾ ಬಂದಿದೆ.

Romeo Loves Anarkali Comedy Play

ಈ ನಾಟಕದ ಕೊನೆಯಲ್ಲಿ ಪ್ರೇಮಿಗಳು ಒಂದಾಗುತ್ತಾರಾ ಅಥವ ಈ ಸಮಾಜದ ಕೃತಕ ಸಂಪ್ರದಾಯಗಳಿಗೆ ತಮ್ಮ ಪ್ರೀತಿಯನ್ನು ಬಲಿಕೊಡುತ್ತಾರಾ? ಎಂಬುದು ನಾಟಕದ ರೋಚಕ ಅಂತ್ಯದಲ್ಲಿ ತೆರೆದುಕೊಳ್ಳುತ್ತದೆ.

ಈ ನಾಟಕವು ರಂಗದ ಮೇಲೆ ತರಲು ಹಲವಾರು ಶ್ರಮಿಗಳು ಕೆಲಸ ಮಾಡಿರುತ್ತಾರೆ, ಕನ್ನಡ ರಂಗಭೂಮಿ ಕಲಾವಿದರು ಹಾಗೂ ಚಲನಚಿತ್ರ ರಂಗಕ್ಕೆ ಅನೇಕ ಕಥೆ ಚಿತ್ರಕಥೆಗಳನ್ನು ರಚಿಸಿರುವ ಮಹೇಶ್ ಎಸ್.ಪಿ ಈ ನಾಟಕವನ್ನು ರಚಿಸಿದ್ದಾರೆ. ಈ ನಾಟಕಕ್ಕೆ ಓರ್ವ ಕ್ರಿಯಾಶೀಲ ಸಂಗೀತ ನಿರ್ದೇಶಕರಾದ ಸಂದೀಪ್ ಎಚ್.ಎಸ್ ರಾವ್ ರವರ ಸುಶ್ರಾವ್ಯ ಸಂಗೀತವಿರುತ್ತದೆ.

ಇವರೊಂದಿಗೆ ಪ್ರಖ್ಯಾತ ಕೊಳಲು ವಾದಕರಾದ ತೇಜಸ್ವಿ ಹರಿದಾಸ್ ರವರ ಕೊಡುಗೆ ಅಪಾರ. ಬೆಳಕು ವಿನ್ಯಾಸವನ್ನು ಸುನೀಲ್ ಕುಮಾರ್ ರವರು ನಿಭಾಯಿಸಿದರೆ, ರಂಗಸಜ್ಜಿಕೆಹಾಗೂ ವಸ್ತ್ರ ವಿನ್ಯಾಸವನ್ನು ಕನ್ನಡ ಚಿತ್ರರಂಗದ ಪ್ರಖ್ಯಾತ ಕಲಾ ನಿರ್ದೇಶಕರಾದ ವೀಳ್ಯಾ ರಾಘವೇಂದ್ರ ಮತ್ತು ವಿಶ್ವಾಸ್ ಕಶ್ಯಪ್ ರವರು ನಿರ್ವಹಿಸಿರುತ್ತಾರೆ.

ಪ್ರಸಾಧನ ವಿಜಯ್ ಬೆಣಚ ರವರದ್ದು. ತಂಡದ ಎಲ್ಲ ಕಲಾವಿದರನ್ನು ಒಟ್ಟುಗೂಡಿಸಿ, ನಾಟಕದ ಎಲ್ಲ ವಿಭಾಗಗಳೊಂದಿಗೂ ಸಾಮರಸ್ಯ ಮೂಡಿಸಿ ಈ ನಾಟಕವನ್ನು ರಂಗದ ಮೇಲೆ ತರುತ್ತಿರುವವರು ಕನ್ನಡ ಚಿತ್ರರಂಗದಲ್ಲಿ ಅನೇಕ ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಶಂಕರ್ ಗಣೇಶ್.

ತಂಡದ ಪರಿಚಯ : "ಧ್ವನಿ" ತಂಡವು ಜನವರಿ 2015 ರಿಂದ ಮೂರು ಪ್ರತ್ಯೇಕ ನಾಟಕಗಳನ್ನು ಸಿದ್ದಪಡಿಸಿಕೊಂಡು ಈ ವರ್ಷದಾದ್ಯಂತ ಪ್ರದರ್ಶನ ಗೊಳಿಸಲು ಸಜ್ಜುಗೊಂಡಿದೆ. ಮರಾಠಿ ಮೂಲದ ಎರಡು ಕನ್ನಡ ನಾಟಕಗಳಾದ 'ಪುರುಶ್' ಹಾಗೂ 'ಆಲ್ ಲೈನ್ ಕ್ಲಿಯರ್' ಎಂಬ ಸಾಮಾಜಿಕ ಹಾಗೂ ಹಾಸ್ಯನಾಟಕಗಳು ಕಳೆದ ತಿಂಗಳುಗಳಲ್ಲಿ ಪ್ರದರ್ಶನ ಹಾಗೂ ಮರುಪ್ರದರ್ಶನಗಳನ್ನು ಕಂಡಿದೆ. ತದನಂತರ 'ರೋಮಿಯೋ ಲವ್ಸ್ ಅನಾರ್ಕಲಿ' ಎಂಬ ವಿಭಿನ್ನ ಪ್ರಯೋಗದ ಪ್ರೇಮ ಕಥೆಯ ಹಂದರವುಳ್ಳ ಹಾಸ್ಯ ಹಾಗೂ ಸಂಗೀತಮಯ ನಾಟಕ ಪ್ರದರ್ಶನ ನೀಡುತ್ತಿದೆ.

English summary
Dhwani a theatre troupe, performing a new play – Romeo Loves Anarkali– A Romantic comedy play, with a new script and design. The play is organized on 12th Sep 2015 at Seva Sadan, Malleshwaram,Bangalore at 3:30PM & 7.00 PM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X