ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಡಿಯೂರಪ್ಪ ಮನೆ ಮುಂದೆ 'ಸುಂದರಿ'ಯ 'ಕಾರು'ಬಾರು

|
Google Oneindia Kannada News

ಬೆಂಗಳೂರು, ಆಗಸ್ಟ್24: ಮುಖ್ಯಮಂತ್ರಿ ಯಡಿಯೂರಪ್ಪ ಮನೆ ಮುಂದೆ ಸುಂದರಿಯದ್ದೇ ಕಾರು ಬಾರು.

ಪೊಲೀಸರಿಂದ ಹಿಡಿದು ಭದ್ರತಾ ಸಿಬ್ಬಂದಿವರೆಗೂ ಸುಂದರಿಯ ಜೊತೆ ಫೋಟೊ ತೆಗೆದುಕೊಳ್ಳುವುದರಲ್ಲೇ ಬಿಜಿಯಾಗಿದ್ದಾರೆ. ಅಷ್ಟಕ್ಕೂ ಈ ಸುಂದರಿ ಯಾರು ಅಂತೀರಾ ಅದೇ ಎಂಟಿಬಿ ನಾಗರಾಜ್ ಅವರ ರೋಲ್ಸ್ ರಾಯ್ಸ್ ಕಾರು.

ದುಬಾರಿ ಕಾರು ಖರೀದಿಸಿದ ಅನರ್ಹ ಶಾಸಕ ಎಂಟಿಬಿ ನಾಗರಾಜ್ ದುಬಾರಿ ಕಾರು ಖರೀದಿಸಿದ ಅನರ್ಹ ಶಾಸಕ ಎಂಟಿಬಿ ನಾಗರಾಜ್

ಕಾಂಗ್ರೆಸ್‌-ಜೆಡಿಎಸ್‌ ದೋಸ್ತಿ ಸರಕಾರ ಪತನಕ್ಕೆ ಕಾರಣರಾಗಿರುವವರ ಪೈಕಿ ಒಬ್ಬರಾಗಿ, ಈಗ ಅನರ್ಹಗೊಂಡ ಶಾಸಕರಾಗಿರುವ ಎಂಟಿಬಿ ನಾಗರಾಜ್‌ ಈಗ ದುಬಾರಿ ಕಾರು ಖರೀದಿಸಿದ್ದ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು.

ಒಂದು, ಎರಡು ಕೋಟಿಯಲ್ಲ 12 ಕೋಟಿ ರೂಪಾಯಿ ಕಾರನ್ನು ಎಂಟಿಬಿ ನಾಗರಾಜ್‌ ಖರೀದಿಸಿದ್ದರು.ಇದೀಗ ಸಿಎಂ ಯಡಿಯೂರಪ್ಪ ಮನೆ ಮುಂದೆ ಅದೇ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದೆ.

ರೋಲ್ಸ್ ರಾಯ್ಸ್ ಕಾರಿನಲ್ಲಿ ಓಡಾಡಬೇಕೆಂಬ ಆಸೆ ಮೊದಲಿನಿಂದಲೂ ಇತ್ತು. ಹೀಗಾಗಿ ತೆರಿಗೆ ಎಲ್ಲವನ್ನು ಕಟ್ಟಿ 12.75 ಕೋಟಿ ರೂ. ಪಾವತಿಸಿದ್ದೇನೆ ಎಂದು ನಾಗರಾಜ್‌ ಹೇಳಿದ್ದರು.

ರಾಜ್ಯ ರಾಜಕಾರಣಿಗಳ ಪೈಕಿ ಇಷ್ಟೊಂದು ದುಬಾರಿ ಕಾರು ಹೊಂದಿರುವ ಕೆಲವೇ ಕೆಲವು ವ್ಯಕ್ತಿಗಳ ಪೈಕಿ ನಾಗರಾಜ್‌ ಕೂಡ ಒಬ್ಬರಾಗಿದ್ದಾರೆ.

ದುಬೈನಲ್ಲಿ ಸಿದ್ದಪಡಿಸಿರುವ ಈ ಕಾರ್ ಅನ್ನು ವೈಟ್ ಪೆಟ್ರೋಲ್ ಬಳಸಿ ಓಡಿಸಲಾಗುತ್ತದೆ. ಲೀಟರಿಗೆ ನಾಲ್ಕು ಕಿ.ಮೀ ಮೈಲೇಜ್ ನೀಡುತ್ತದೆ.

ಎಂಟಿಬಿ ನಾಗರಾಜ್ ಅವರ ಆಸ್ತಿ ಎಷ್ಟಿದೆ?

ಎಂಟಿಬಿ ನಾಗರಾಜ್ ಅವರ ಆಸ್ತಿ ಎಷ್ಟಿದೆ?

ಎಂಟಿಬಿ ನಾಗರಾಜ್ ಹೊಂದಿರುವ ಕೃಷಿಯೇತರ ಭೂಮಿ ಮೌಲ್ಯ 370 ಕೋಟಿ. ಕುಟುಂಬದ ಒಟ್ಟು ಸಾಲ 233 ಕೋಟಿಯಾಗಿದೆ. 2013ರ ಚುನಾವಣೆಯಲ್ಲಿ ತಮ್ಮ ಕುಟುಂಬದ ಆಸ್ತಿ 470 ಕೋಟಿ ಎಂದು ಎಂಟಿಬಿ ನಾಗರಾಜ್ ಘೋಷಣೆ ಮಾಡಿದ್ದರು. 2018ರ ಚುನಾವಣೆಗೆ ಸ್ಪರ್ಧೆ ಮಾಡುವಾಗ ಅವರು ತಮ್ಮ ವೈಯಕ್ತಿಕ ಆಸ್ತಿ 708 ಕೋಟಿ, ಪತ್ನಿ ಹೆಸರಿನಲ್ಲಿ 306 ಕೋಟಿ ಆಸ್ತಿ ಇದೆ ಎಂದು ಘೋಷಿಸಿದ್ದಾರೆ.

ಎಂಟಿಬಿ ನಾಗರಾಜ್ ಅನರ್ಹ ಶಾಸಕ

ಎಂಟಿಬಿ ನಾಗರಾಜ್ ಅನರ್ಹ ಶಾಸಕ

2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಹೊಸಕೋಟೆ ಕ್ಷೇತ್ರದಲ್ಲಿ ಎಂಟಿಬಿ ನಾಗರಾಜ್ ಕಣಕ್ಕಿಳಿದಿದ್ದರು. 98,824 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಜುಲೈನಲ್ಲಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸ್ಪೀಕರ್ ರಮೇಶ್ ಕುಮಾರ್ ಶಾಸಕ ಸ್ಥಾನದಿಂದ ಅವರನ್ನು ಅನರ್ಹಗೊಳಿಸಿದ್ದಾರೆ. ಕಾಂಗ್ರೆಸ್‌ನಿಂದ ಸಹ ಅವರನ್ನು ಉಚ್ಛಾಟನೆ ಮಾಡಲಾಗಿದೆ.

ರೋಲ್ಸ್ ರಾಯಲ್ಸ್ ಕಾರು ಪ್ರಮೋದ್ ಮಧ್ವರಾಜ್ ಬಳಿ ಕೂಡ ಇದೆ

ರೋಲ್ಸ್ ರಾಯಲ್ಸ್ ಕಾರು ಪ್ರಮೋದ್ ಮಧ್ವರಾಜ್ ಬಳಿ ಕೂಡ ಇದೆ

ಉಡುಪಿ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ಬಳಿ ರೋಲ್ಸ್ ರಾಯಲ್ಸ್ ಫೋಸ್ಟ್ ಎಸ್‌ಬಡ್ಲ್ಯುಬಿ ಕಾರು ಇದೆ. ಅದರ ಮೌಲ್ಯ ಸುಮಾರು 5.80 ಕೋಟಿ. ನೋಂದಣಿಗೆ 90 ಲಕ್ಷ, ಸೇವಾ ಶುಲ್ಕ 19 ಲಕ್ಷ, ಸೇವಾ ತೆರಿಗೆ 2.66 ಲಕ್ಷ, ಕಸ್ಟಮ್ಸ್ ಕ್ಲಿಯರೆನ್ಸ್‌ಗೆ 2.22 ಲಕ್ಷ ಮೊತ್ತವನ್ನು ಅವರು ಪಾವತಿ ಮಾಡಿದ್ದರು.

ಮೈತ್ರಿ ಸರ್ಕಾರದಲ್ಲಿ ವಸತಿ ಸಚಿವರಾಗಿದ್ದರು

ಮೈತ್ರಿ ಸರ್ಕಾರದಲ್ಲಿ ವಸತಿ ಸಚಿವರಾಗಿದ್ದರು

2004, 2013 ಮತ್ತು 2018ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಎಂಟಿಬಿ ನಾಗರಾಜ್ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ವಸತಿ ಸಚಿವರಾಗಿದ್ದರು. ಆದರೆ, ಬದಲಾದ ರಾಜಕೀಯ ಚಿತ್ರಣದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸರ್ಕಾರವೇ ಪತನಗೊಂಡು ಸಚಿವ ಸ್ಥಾನವೂ ಹೋಯಿತು.

English summary
Disqualified MLA MTB Nagaraj Rolls Royce car stands in front of BS Yediyurappa's house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X