ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರ್‌ಪೋರ್ಟ್‌ನಲ್ಲಿ ಇನ್ನು ರೊಬೊಟ್‌ಗಳದ್ದೇ ದರ್ಬಾರು, ಏನೇನು ಕೆಲಸ ಮಾಡುತ್ತೆ ಗೊತ್ತಾ?

|
Google Oneindia Kannada News

ಬೆಂಗಳೂರು, ಜೂನ್ 27:ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಇನ್ನುಮುಂದೆ ವಾಹನ ನಿಲುಗಡೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ರೊಬೊಟ್‌ಗಳು ನೋಡಿಕೊಳ್ಳಲಿವೆ.

ಹಾಗೆಯೇ ಏರ್‌ಪೋರ್ಟ್‌ನಲ್ಲಿ ರಿಮೋಟ್ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ರಿಮೋಟ್ ಪಾರ್ಕಿಂಗ್ ಸೇವೆಯಲ್ಲಿ ಹೈಡ್ರಾಲಿಕ್ ಲಿಫ್ಟ್‌ ವ್ಯವಸ್ಥೆ ಕೂಡ ಇರುತ್ತದೆ.

ಕೆಂಪೇಗೌಡ ಏರ್‌ಪೋರ್ಟ್‌ನ ವಿರಾಮ ಕೊಠಡಿ, ಹೋಟೆಲ್ ಬಂದ್

ವಾಹನಗಳನ್ನು ಲಿಫ್ಟ್‌ ಮಾಡಿ ಎಲ್ಲಿ ವಾಹನ ನಿಲುಗಡೆಗೆ ಜಾಗವಿದೆಯೋ ಅಲ್ಲಿ ವಾಹನ ನಿಲುಗಡೆಯಾಗಲಿದೆ. ಈ ವ್ಯವಸ್ಥೆ ವಿದೇಶಗಳಿದ್ದು ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

Robot will handle parking in Kempegowda Airport

ಮನುಷ್ಯರ ಬದಲಾಗಿ ರೊಬೊಟ್‌ಗಳು ಕಾರು ಪಾರ್ಕಿಂಗ್ ಮಾಡುತ್ತವೆ. ಬಿಐಎಎಲ್ ರೊಬೊಟ್‌ ಹಾಗೂ ಅದಕ್ಕೆ ಸಂಬಂಧಿಸಿದ ವಸ್ತುಗಳ ಖರೀದಿಗಾಗಿ ಟೆಂಡರ್ ಆಹ್ವಾನಿಸಿದೆ. ಗುತ್ತಿಗೆದಾರರು ಕಾರು ಪಾರ್ಕಿಂಗ್ ಮ್ಯಾನೇಜ್‌ಮೆಂಟ್, ರಿಮೋಟ್ ಕಾರ್ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ತಿಳಿದಿರಬೇಕು. ಈ ಕಾರು ಪಾರ್ಕಿಂಗ್ ಸ್ಥಳದಲ್ಲಿ 1600 ಕಾರುಗಳನ್ನು ನಿಲುಗಡೆ ಮಾಡಬಹುದಾಗಿದೆ.

ಇದೀಗ ಕೆಐಎನಲ್ಲಿ 2 ಸಾವಿರ ಕಾರುಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಬಿಐಎಎಲ್ ಟರ್ಮಿನಲ್ 2ರ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದು, ಮುಂದಿನ ದಿನಗಳಲ್ಲಿ ಸಾಕಷ್ಟು ಹೊಸ ಸೌಲಭ್ಯಗಳನ್ನು ಒದಗಿಸಲಿದೆ. ಮೊದಲ ಹಂತವು 2,55,000 ಸ್ಕ್ವೇರ್ ಮೀಟರ್ ಜಾಗವನ್ನು ಒಳಗೊಂಡಿದೆ.

English summary
Yes Robot will handling parking in Kempegowda international Airport instead of human beings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X