ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಮನರಂಜಿಸಿದ ವಿದ್ಯಾರ್ಥಿಗಳ ರೋಬೋ ಕಾರ್‌ ರೇಸ್‌

|
Google Oneindia Kannada News

ಬೆಂಗಳೂರು, ಮಾರ್ಚ್‌ 7: ವಿದ್ಯಾರ್ಥಿಗಳಲ್ಲಿ ಆವಿಷ್ಕಾರ, ವಿನ್ಯಾಸ ಮತ್ತು ಇಂಜನೀಯರಿಂಗ್‌ ಕೌಶಲ್ಯಗಳನ್ನು ಹೆಚ್ಚಿಸುವ ಉದ್ದೇಶದಿಂದ ತರಬೇತಿ ನೀಡುವ ಸಂಸ್ಥೆ ರೋಬೋಕ್ಯೂಬ್‌ ಶನಿವಾರ ನಗರದ ಎಲೆಕ್ಟ್ರಾನಿಕ್‌ ಸಿಟಿಯ ಎಸ್‌ಎಫ್‌ಎಸ್‌ ಅಕಾಡೆಮಿಯಲ್ಲಿ ಒಂದು ವಿಶಿಷ್ಟ ಸ್ಪರ್ಧೆಯನ್ನು ಅಯೋಜಿಸಿತ್ತು.

ರೋಬೋ ಕ್ಯೂಬ್‌ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ತಯಾರಿಸಿರುವ ರೋಬೋ ಕಾರ್‌ ಗಳ ರೇಸ್‌ ಬಹಳ ಆಕರ್ಷಕವಾಗಿತ್ತು. ಸಣ್ಣ ಟ್ರಾಕ್‌ ಮೇಲೆ ಅಡೆತಡೆಗಳನ್ನು ದಾಟುತ್ತಾ, ವೇಗವಾಗಿ ಗಮ್ಯವನ್ನು ತಲುಪಲು ವಿದ್ಯಾರ್ಥಿಗಳು ನಡೆಸುತ್ತಿದ್ದ ಕಸರತ್ತು ಎಲ್ಲರ ಮನರಂಜಿಸುವಲ್ಲಿ ಯಶಸ್ವಿಯಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಟ ಚೇತನ್‌ ವರ್ಧನ್‌ ಮಾತನಾಡಿ, ಮಕ್ಕಳಲ್ಲಿ ಸೈನ್ಸ್‌, ಟೆಕ್ನಾಲಜಿ, ಇಂಜನೀಯರಿಂಗ್‌ ಮತ್ತು ಗಣಿತ ಕಾನ್ಸೆಪ್ಟ್‌ಗಳನ್ನು ಅಳವಡಿಸಿಕೊಂಡು ಹೊಸತನ್ನು ನಿರ್ಮಿಸುವ ಕುತೂಹಲವನ್ನು ಬೆಳೆಸುವಂತಹ ಇಂತಹ ಸ್ಪರ್ಧೆಗಳು ಹೆಚ್ಚಾಗಬೇಕು. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಹೊಸತನ್ನು ರೂಫಿಸಬೇಕು ಹಾಗೂ ಏನನ್ನೋ ಸಾಧಿಸಬೇಕು ಎನ್ನುವ ಗುರಿಯನ್ನು ಹೆಚ್ಚಿಸಿದರೆ ಅವರು ಅಸಾಧಾರಣವಾದ ಕ್ರಿಯಾತ್ಮಕತೆಯನ್ನು ತೋರಿಸುತ್ತಾರೆ ಎಂದು ಹೇಳಿದರು.

Robot Car Race Of Students Entertained In Electronic City

ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಸುರಜ್‌ ಬಂಗೇರಾ ಮಾತನಾಡಿ, 2015 ರಿಂದ ರೋಬೋಕ್ಯೂಬ್‌ ವಿದ್ಯಾರ್ಥಿಗಳಿಗೆ ಇಂತಹ ತರಬೇತಿಯನ್ನು ನೀಡುತ್ತಾ ಬಂದಿದೆ. ಅಲ್ಲದೆ, ಐಐಟಿ ದೆಹಲಿ, ಹೈದರಬಾದ್‌, ಕ್ರೈಸ್ಟ್‌ ಯೂನಿವರ್ಸಿಟಿ, ಕೋಚಿ ಮತ್ತು ಪುಣೆ ನಗರಗಳಲ್ಲಿ ಇಂತಹ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿದ್ದಾರೆ. ಅಲ್ಲದೆ ರೋಬೋ ಕ್ಯೂಬ್‌ ಸಂಸ್ಥೆಯ ವಿದ್ಯಾರ್ಥಿಗಳು ವಿದೇಶದಲ್ಲಿ ನಡೆದ ವಿವಿಧ ರೋಬೋಟ್‌ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ. ಇಲ್ಲಿ ಭಾಗಿಯಾದ 52 ವಿದ್ಯಾರ್ಥಿಗಳು ರೋಬೋಟ್‌ ಗಳನ್ನು ತಯಾರಿಸಲು ಹಾಗೂ ಅವುಗಳನ್ನು ಚಾಲನೆ ಮಾಡಲು ಹಾಕಿರುವ ಶ್ರಮ ನೋಡಿದರೆ ಹೆಮ್ಮೆ ಎನಿಸುತ್ತದೆ ಎಂದರು.

ಎಸ್‌ಎಫ್‌ಎಸ್‌ ಅಕಾಡೆಮಿಯ ವಿದ್ಯಾರ್ಥಿಗಳಿಗೆ ರೋಬೋಕ್ಯೂಬ್‌ ಸಂಸ್ಥೆಯ ವತಿಯಿಂದ ರಚಿಸಲಾಗಿರುವ ಪಠ್ಯಕ್ರಮದ ಮೂಲಕ ರೋಬೋಟ್‌ ಗಳನ್ನು ಜೋಡಿಸುವ ಹಾಗೂ ಅವುಗಳಿಗೆ ಪ್ರೋಗ್ರಾಮ್‌ ಕೋಡ್‌ಗಳನ್ನು ಬರೆಯುವುದನ್ನು ಕಲಿಸಿಕೊಡಲಾಗಿತ್ತು. ಈ ಪಠ್ಯಕ್ರಮ ಹಾಗೂ ತರಬೇತಿಯಿಂದ ವಿದ್ಯಾರ್ಥಿಗಳು ಮೆಡಿಕಲ್‌, ಫೈರ್‌ ಫೈಟರ್ಸ್‌ ನಂತಹ ರೋಬೋಟ್‌ ಮಾಡೆಲ್‌ಗಳನ್ನು ನಿರ್ಮಿಸಿದ್ದರು.

English summary
Robot Car Race of Students Entertained in Electronic City. This event orgnaised by FSS Academy bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X