• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಿರ್ಗತಿಕ 30 ಮಿಲಿಯನ್ ಜನರಿಗೆ ಆಹಾರ ಪೂರೈಕೆ ಮಾಡಲಿರುವ RHA

|

ಬೆಂಗಳೂರು, ಆಗಸ್ಟ್ 7: ಶೂನ್ಯ ನಿಧಿಯ ರಾಬಿನ್‌ ಹುಡ್‌ ಆರ್ಮಿ(RHA) ತನ್ನ ಸ್ವಯಂಸೇವಕರೊಂದಿಗೆ ರೆಸ್ಟೋರೆಂಟ್‌ಗಳು ಮತ್ತು ಸಮುದಾಯಗಳಿಂದ ಅವಕಾಶ ವಂಚಿತ ಜನರಿಗೆ ಅಗತ್ಯ ಆಹಾರ ಪೂರೈಕೆ ಮಾಡಲು ಶ್ರಮಿಸುತ್ತಿದೆ. #ಮಿಷನ್‌30ಎಂ ಯೋಜನೆಯೊಂದಿಗೆ ಈ ಸಂಘಟನೆ 2020ರ ಆಗಸ್ಟ್‌ 15ರೊಳಗೆ ಭಾರತದ ಸೇರಿದಂತೆ 10 ದೇಶಗಳು (ಬಹ್ರೇನ್, ಬೋಟ್ಸ್ವಾನ, ಮಲೇಷ್ಯಾ, ನೇಪಾಳ, ನೈಜೀರಿಯಾ, ಪಾಕಿಸ್ತಾನ, ಫಿಲಿಪೈನ್ಸ್, ಶ್ರೀಲಂಕಾ ಮತ್ತು ಉಗಾಂಡಾ) ದೇಶಗಳ ನಗರ ಮತ್ತು ಗ್ರಾಮಿಣ ಪ್ರದೇಶಗಳಿಗೆ 30 ಮಿಲಿಯನ್‌ ಆಹಾರ ಪೂರೈಕೆ ಮಾಡುವ ಪಣ ತೊಟ್ಟಿದೆ.

   Corona ವಿರುದ್ಧ ಹೋರಾಟಕ್ಕೆ ನಿಂತ HAL | Oneindia Kannada

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   #ಮಿಷನ್‌30ಎಂ ವಿಶ್ವದ ಅತಿ ದೊಡ್ಡ ಆಹಾರ ಪೂರೈಕೆಯ ಪ್ರಯತ್ನವಾಗಿದೆ. ಇದಕ್ಕಾಗಿ ಸಂಘಟನೆ ದೇಶದ ಮೂಲೆ ಮೂಲೆಯ ಕಾರ್ಪೊರೇಟರ್‌ಗಳು ಮತ್ತು ಸ್ವಯಂಸೇವಕರನ್ನು ಒಟ್ಟುಗೂಡಿಸಿದೆ. ಇವರು ಗ್ರಾಮೀಣ ಪ್ರದೇಶಗಳು, ಅನಾಥಾಲಯಗಳು, ವೃದ್ಧಾಶ್ರಮಗಳು, ಸೂರುರಹಿತ ಜನರು, ರೋಗಿಗಳು ಮತ್ತು ದಿನಗೂಲಿ ನೌಕರರಿಗೆ ಆಹಾರ ವಿತರಿಸಲಿದ್ದಾರೆ. ಕೋವಿಡ್‌-19 ಹಿನ್ನೆಲೆಯಲ್ಲಿ ಲಕ್ಷಾಂತರ ಜನರು ತಮ್ಮ ಜೀವನೋಪಾಯದ ಮಾರ್ಗಗಳನ್ನು ಕಳೆದುಕೊಂಡಿರುವುದರಿಂದ #ಮಿಷನ್‌30ಎಂ ಯೋಜನೆಯನ್ನು ಆರಂಭಿಸಲಾಗಿದೆ. ಈ ಯೋಜನೆ ಜುಲೈ 1ರಂದು ಆರಂಭಗೊಂಡಿದ್ದು, ಮೊದಲ 33 ದಿನಗಳಲ್ಲೇ 9 ದೇಶಗಳ 143 ನಗರಗಳಿಗೆ 12.5 ಮಿಲಿಯನ್‌ ಆಹಾರ ಪೂರೈಕೆ ಮಾಡಿದೆ. ಇದು ಹಾರ್ವಡ್‌ ಕೇಸ್‌ ಸ್ಟಡಿಯ ಭಾಗವಾಗಿದೆ.

   ಕೋವಿಡ್ ಭೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ; ಮಾರ್ಗಸೂಚಿ ಪ್ರಕಟ

   ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

   ರಾಬಿನ್ ಹುಡ್ ಆರ್ಮಿ ನೀಲ್ ಘೋಸ್ ಸಂಸ್ಥಾಪಕರಾದರೆ, ಆರುಷಿ ಬಾತ್ರಾ ಮತ್ತು ಸಂಚಿತ್ ಜೈನ್ ರಾಬಿನ್ ಹುಡ್ ಆರ್ಮಿಯ ಇತರ ಸಹ-ಸಂಸ್ಥಾಪಕರಾಗಿದ್ದಾರೆ. "ಕೋವಿಡ್-19 ನ ಪರಿಣಾಮಗಳು ಆ ಸೋಂಕಿನಷ್ಟೇ ಅಪಾಯಕಾರಿ. ಇದರಿಂದ ಲಕ್ಷಾಂತರ ಜನರು ತಮ್ಮ ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ. ಸರ್ಕಾರ ಮತ್ತು ಅಧಿಕಾರಿಗಳನ್ನು ಹೊಣೆಯಾಗಿಸುವುದು ಸುಲಭ, ಆದರೆ ಇದು ಕೇವಲ ಸರ್ಕಾರಗಳು ಮಾತ್ರವಲ್ಲದೆ ನಾಗರಿಕ ಸಮಾಜವೂ ಸಹ ನಿರ್ವಹಿಸಬೇಕಾದ ಬಿಕ್ಕಟ್ಟಾಗಿದೆ. #ಮಿಷನ್30ಎಂ ಮೂಲಕ 30 ಮಿಲಿಯನ್ ಜನರಿಗೆ ಸೇವೆ ಸಲ್ಲಿಸುವುದು ನಾಗರಿಕರನ್ನು ಸಜ್ಜುಗೊಳಿಸುವುದು ನಮ್ಮ ಗುರಿ ಎಂದಿದ್ದಾರೆ.''

   ''ಬೆಂಗಳೂರಿನಲ್ಲಿ 10 ಸಾವಿರಕ್ಕಿಂತ ಹೆಚ್ಚು ಒಣಪಡಿತರ ಕಿಟ್‌ಗಳ ಅವಶ್ಯಕತೆ ಇದೆ. ಪೌರಕಾರ್ಮಿಕರು, ದಿನಗೂಲಿ ನೌಕರರು, ಮನೆಗೆಲಸದವರು, ಆಟೋ ಚಾಲಕರು, ಅನಾಥಾಶ್ರಮಗಳು, ಬೀದಿ ಬದಿ ವ್ಯಾಪಾರಿಗಳು, ವೃದ್ಧಾಪ್ಯದ ಮನೆಗಳು ಇತ್ಯಾದಿ. ಪೀಡಿತ ರೋಗಗಳಿಂದಾಗಿ ಮಧ್ಯಮ ವರ್ಗದ ಕುಟುಂಬಗಳು ಕ್ಷೌರಿಕರು, ಟೈಲರ್‌ಗಳು ಇತ್ಯಾದಿಗಳಿಗೆ ನೆರವಿಗೆ ಅಗತ್ಯವಿದೆ. ಸ್ಥಳೀಯ ಅಧಿಕಾರಿಗಳ ಸಹಾಯದಿಂದ ನಾವು ಇದನ್ನು ಮಾಡಲು ಸಮರ್ಥರಾಗಿದ್ದೇವೆ'' ಎಂದಿದ್ದಾರೆ.

   English summary
   As part of #Mission30M initiative, RHA said it will bring together the food industry, corporates, media houses, and RHA volunteers to serve food to 30 million people affected due to COVID-19 in rural and urban areas across ten countries.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X