ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ನೈಸ್ ರಸ್ತೆಯಲ್ಲಿ ದರೋಡೆ ವದಂತಿ:ದೂರು ನೀಡಿದ ಅಶೋಕ್ ಖೇಣಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 30: ಬೆಂಗಳೂರಿನ ನೈಸ್ ರಸ್ತೆಯಲ್ಲಿ ದರೋಡೆ ನಡೆಯುತ್ತೆ ಎನ್ನುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಶೋಕ್ ಖೇಣಿ ಈ ವಿಡಿಯೋ ವಿರುದ್ಧ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

ನೈಸ್ ರಸ್ತೆಯಲ್ಲಿ ಈ ರೀತಿಯ ಯಾವುದೇ ಘಟನೆಗಳು ನಡೆದಿಲ್ಲ. ಇದುವರೆಗೂ ಇದರ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ, ಯಾವುದೇ ಪ್ರಕರಣ ಕೂಡ ದಾಖಲಾಗಿಲ್ಲ.

ಕಂಪನಿಗೆ ಕೆಟ್ಟ ಹೆಸರು ತರಲು ಈ ರೀತಿ ಮಾಡಿದ್ದಾರೆ. ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ, ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳುವಂತೆ ಸೈಬರ್ ಪೊಲೀಸರಿಗೆ ಖೇಣಿ‌ ಮನವಿ ಮಾಡಿದ್ದಾರೆ.

Nice road

ವಿಡಿಯೋದಲ್ಲಿ ನೈಸ್ ರಸ್ತೆಯಲ್ಲಿ ಕಳ್ಳತನ ಮತ್ತು ದರೋಡೆ ನಡೆಯುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹರಿದಾಡಿತ್ತು. ಮಾರಕಾಸ್ತ್ರಗಳನ್ನು ಹಿಡಿದಿದ್ದ ಯುವಕರ ತಂಡ ಕಾರೊಂದನ್ನು ಅಡ್ಡಗಟ್ಟಿ ದೋಚಲು ಮುಂದಾಗಿದ್ದರು.

ನೈಸ್ ರೋಡ್‌ ಮೇಲ್ಸೇತುವೆಯಿಂದ ಕಲ್ಲು ಬೀಳುತ್ತೆ !ನೈಸ್ ರೋಡ್‌ ಮೇಲ್ಸೇತುವೆಯಿಂದ ಕಲ್ಲು ಬೀಳುತ್ತೆ !

ಆದರೆ ಕಾರು ಚಾಲಕ ಕೂಡಲೇ ಎಚ್ಚೆತ್ತು ಕಾರನ್ನು ರಿವರ್ಸ್ ಗೇರ್ ನಲ್ಲಿ ವೇಗವಾಗಿ ಹಿಂದಕ್ಕೆ ತೆಗೆದುಕೊಂಡು ಹೋಗಿದ್ದ. ಕಾರನ್ನು ಅಟ್ಟಾಡಿಸಿದ್ದ ದುಷ್ಕರ್ಮಿಗಳು ಕಾರಿನ ಮೇಲೆ ದೊಣ್ಣೆಗಳನ್ನು ಎಸೆದಿದ್ದರು. 25 ಸೆಕೆಂಡ್ ಗಳ ಈ ವಿಡಿಯೋ ವ್ಯಾಪಕ ವೈರಲ್ ಆಗಿತ್ತು.

Recommended Video

ಬೆಂಗಳೂರು: 'ಗ್ರಾ.ಪಂ ಮಟ್ಟದಲ್ಲಿ ಬಿಜೆಪಿ ಹಿಡಿತ ಸಾಧಿಸುತ್ತಿದೆ'-ಆರ್.ಆಶೋಕ್ | Oneindia Kannada

ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು‌ ಹರಿಬಿಟ್ಟಿರುವ ವಿಡಿಯೋ ,ಆಡಿಯೋದಲ್ಲಿ ಕಲ್ಲು ಎಸೆಯುತ್ತಾರೆ, ನೈಸ್ ರಸ್ತೆ ಬಳಿ ಕಾದು ಕಳಿತು ಕಲ್ಲು ಎಸೆದು ಗಮನ ಬೇರೆಡೆ ಸೆಳೆದು (ಡೈವರ್ಟ್) ಮಾಡುತ್ತಾರೆ. ಕಾರು ನಿಲ್ಲಿಸಿದ ತಕ್ಷಣ ತಮ್ಮ ವರಸೆಯನ್ನು ಕಳ್ಳರು ತೋರಿಸುತ್ತಾರೆ ಎನ್ನುವ ಸಂದೇಶ ಹರಿಬಿಡಲಾಗಿದೆ.

English summary
Robbery Rumor On Bengaluru Nice Road Ashok Kheny Files Complaint Against Fake Video.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X