ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರು ಚಾಲಕರೇ ಎಚ್ಚರ, ಎಂತೆಂಥಾ ಕಳ್ಳರಿರ್ತಾರೆ ನೋಡಿ

|
Google Oneindia Kannada News

ಬೆಂಗಳೂರು, ಜುಲೈ 4: ಸಿಲಿಕಾನ್ ಸಿಟಿಯಲ್ಲಿ ಸರಗಳ್ಳತನದ ಜೊತೆಗೆ ಚಾಲಕರ ಬಳಿ ಕಳ್ಳತನವೂ ಹೆಚ್ಚಾಗಿದೆ, ಅಡ್ರೆಸ್ ಕೇಳುವ ನೆಪವೊಡ್ಡಿ ಅಥವಾ ಇನ್ನೇನೋ ಹೇಳಿ ಚಾಲಕರ ಗಮನ ಬೇರೆಡೆಗೆ ಸೆಳೆದು ಕಳ್ಳತನ ಮಾಡುವವರ ಸಂಖ್ಯೆ ಹೆಚ್ಚಾಗಿದೆ.

ಕಾರಿನ ಒಳಗಿರುವ ಪರ್ಸ್, ಮೊಬೈಲ್ ಇನ್ನಿತರೆ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿಬಿಡುತ್ತಾರೆ. ಇಂತಹದೊಂದು ಗ್ಯಾಂಗ್ ನಗರದಲ್ಲಿದೆ. ಅತಿ ಹೆಚ್ಚು ವಾಹನ ದಟ್ಟಣೆ ಇರುವ ಪ್ರದೇಶದಲ್ಲಿ ಈ ಗ್ಯಾಂಗ್ ಸಕ್ರಿಯವಾಗಿದೆ.

ಹಗಲಿನಲ್ಲಿ ಸಾಚಾ ಚಾಲಕರು, ರಾತ್ರಿ ಹೊತ್ತು ಭಯಂಕರ ದರೋಡೆಕೋರರುಹಗಲಿನಲ್ಲಿ ಸಾಚಾ ಚಾಲಕರು, ರಾತ್ರಿ ಹೊತ್ತು ಭಯಂಕರ ದರೋಡೆಕೋರರು

ಬೆಳಗ್ಗೆ 10.45ರಲ್ಲಿ ಕಾರಿನಲ್ಲಿ ಸಿದ್ಧಾರ್ಥನ್ ಬೈಯಪ್ಪನಹಳ್ಳಿ ಜಂಕ್ಷನ್ ಕಡೆ ಹೋಗುತ್ತಿದ್ದಾಗ ಮೆಟ್ರೋ ನಿಲ್ದಾಣದ ಬಳಿ ಟ್ರಾಫಿಕ್ ಜಾಮ್ ಆಗಿದೆ. ಈ ವೇಳೆ ಒಬ್ಬಾತ ಹಿಂದಿನಿಂದ ಬಂದು ಕಿಟಕಿ ಬಡಿದಿದ್ದಾನೆ.

Robbers targetting car drivers

ಕಾಬರಿಗೊಂಡ ಸಿದ್ಧಾರ್ಥನ್ ಚಕ್ರ ಕಾಲಿನ ಮೇಲೆ ಹರಿದಿರಬೇಕು ಎಂದು ಕಿಟಕಿ ಗ್ಲಾಸ್ ಇಳಿಸಿದಾಗ ಅದೇ ಸಮಯಕ್ಕೆ ಮತ್ತೊಬ್ಬ ಬಲಭಾಗದ ಡೋರ್ ಜೋರಾಗಿ ತಟ್ಟಿದ್ದಾನೆ, ಆ ಸಮಯದಲ್ಲಿ ಮತ್ತೊಂದು ಕಡೆ ಇದ್ದ ವ್ಯಕ್ತಿ ಮೊಬೈಲ್ ತೆಗೆದುಕೊಂಡು ಓಡಿ ಹೋಗಿದ್ದಾನೆ.

ಇದಾದ ಕೆಲವೇ ನಿಮಿಷಗಳಲ್ಲಿ ಹಳೇ ಮದ್ರಾಸ್ ರಸ್ತೆ ಟ್ರಿನಿಟಿ ಅಪಾರ್ಟ್‌ಮೆಂಟ್ ಮುಂಭಾಗ ರಜತ್ ಕಾರಿನಲ್ಲಿದ್ದಾಗ ಯುವಕನೊಬ್ಬ ಗ್ಲಾಸ್ ಇಳಿಸುವಂತೆ ಸನ್ನೆ ಮಾಡಿದಾಗ ಎಡಗಡೆ ಡೋರ್ ತೆಗೆದು ಕಾರಿನಲ್ಲಿ ಕುಳಿತು ಜಗಳ ಮಾಡಿದ್ದಾನೆ.

ಕೇವಲ 3 ತಾಸಿನಲ್ಲಿ ಬೆಂಗಳೂರಿನ 13 ಅಂಗಡಿಗಳಿಗೆ ಕನ್ನಕೇವಲ 3 ತಾಸಿನಲ್ಲಿ ಬೆಂಗಳೂರಿನ 13 ಅಂಗಡಿಗಳಿಗೆ ಕನ್ನ

ಬಳಿಕಕ್ಷಮೆ ಕೇಳಿ ಹೋಗಿದ್ದಾರೆ, ಸ್ವಲ್ಪ ದೂರ ಹೋಗಿ ನೋಡಿದಾಗ ಮೊಬೈಲ್ ಕಳ್ಳತನ ವಾಗಿತ್ತು.
ಜುಲೈ 1 ರಂದು ಹೊಸೂರು ರಸ್ತೆ ಮತ್ತು ಬೈಯಪ್ಪನಹಳ್ಳಿ ಜಂಕ್ಷನ್‌ನಲ್ಲಿ ಕೇವಲ 15 ನಿಮಿಷಗಳ ಅಂತರದಲ್ಲಿ ಚಾಲಕರ ಗಮನ ಬೇರೆಡೆಗೆ ಸೆಳೆದು ಮೂರು ಮೊಬೈಲ್ ದೋಚಿದ್ದಾರೆ.

ಈ ಬಗ್ಗೆ ಕೆಆರ್‌ಪುರ, ಟಿಸಿ ಪಾಳ್ಯ ನಿವಾಸಿ ಸಿದ್ಧಾರ್ಥನ್ ಹಾಗೂ ರಂಜನ್ ಮಿಶ್ರಾ ದೂರು ನೀಡಿದ್ದಾರೆ.

English summary
Robbers are targetting car drivers to loot them initially asking help later loot the mobile, purse and valuable items in the car.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X