ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಬ್ರೇಕ್

By Srinath
|
Google Oneindia Kannada News

ಬೆಂಗಳೂರು, ಏಪ್ರಿಲ್ 8: ಮೈಸೂರು ರಸ್ತೆ ಬ್ಯಾಟರಾಯನಪುರದಲ್ಲಿರುವ ಶ್ರೀ ಗಾಳಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಇಂದು ಮಂಗಳವಾರದಿಂದ ಗುರುವಾರದವರೆಗೆ ಶ್ರೀರಾಮ ವೇಣುಗೋಪಾಲಸ್ವಾಮಿ ರಥೋತ್ಸವವು ಪ್ರತಿ ವರ್ಷದಂತೆ ವಿಜೃಂಭಣೆಯಿಂದ ಶ್ರದ್ಧಾಭಕ್ತಿಗಳಿಂದ ನಡೆಯಲಿದೆ.

ಸಾವಿರಾರು ಭಕ್ತರು ಸ್ವಾಮಿಯ ದರ್ಶನಕ್ಕಾಗಿ ಆಗಮಿಸುವ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ಉಂಟಾಗಲಿದೆ. ಹಾಗಾಗಿ, ವಾಹನ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ದೇವಸ್ಥಾನದ ಮುಂದಿನ ರಸ್ತೆಯಲ್ಲಿ ಯಾವುದೇ ರೀತಿಯ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿದೆ. ತಾತ್ಕಾಲಿಕ ವ್ಯವಸ್ಥೆಯಾಗಿ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.

roadblock-for-vehicles-at-gali-anjaneya-temple-mysore-road
ನಗರದಿಂದ ಹೊರಗಡೆ ತೆರಳುವ ವಾಹನಗಳು ಹೊಸಗುಡ್ಡದಹಳ್ಳಿ ಜಂಕ್ಷನ್ ವರೆಗೂ ಸಂಚರಿಸಿ ಬಳಿಕ ಎಡ ತಿರುವು ಪಡೆದು ಟಿಂಬರ್ ಯಾರ್ಡ್ ಮೂಲಕ ಮುನೇಶ್ವರ ಬ್ಲಾಕ್ 50 ಅಡಿ ರಸ್ತೆ ಸೇರಿ ಅಲ್ಲಿಂದ ಹೊಸಕೆರೆಹಳ್ಳಿ ಮೂಲಕ ದೇವೇಗೌಡ ವೃತ್ತದಲ್ಲಿ ಬಲ ತಿರುವು ಪಡೆದು ರಿಂಗ್ ರಸ್ತೆಯಲ್ಲಿ ಹಾದು ನಾಯಂಡಹಳ್ಳಿ ಬಳಿ ಮೈಸೂರು ರಸ್ತೆಗೆ ತಲುಪಬಹುದು.

ಮೈಸೂರು ರಸ್ತೆಯಲ್ಲಿ ಕೆಂಗೇರಿ ಕಡೆಯಿಂದ ನಗರದೊಳಕ್ಕೆ ಬರುವ ವಾಹನಗಳು ಕಿಮ್ಕೊ ಜಂಕ್ಷನ್ ವರೆಗೆ ಸಂಚರಿಸಿ ಬಳಿಕ ಎಡ ತಿರುವು ಪಡೆದು ವೆಸ್ಟ್ ಆಫ್ ಕಾರ್ಡ್ ರಸ್ತೆ ತಲುಪಿ ಶನೇಶ್ವರ ದೇವಸ್ಥಾನದ ಬಳಿ ಬಲ ತಿರುವು ಪಡೆದು ಮೇಲ್ಸೇತುವೆಯಲ್ಲಿ ಸಂಚರಿಸಿ, ಬಾಪೂಜಿನಗರ ಜಂಕ್ಷನ್ ಬಳಿ ಮೈಸೂರು ಸರ್ತೆಗೆ ಮುಂದೆ ಸಾಗಬಹುದು ಎಂದು ನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.

ಗಮನಿಸಿ: ಲೋಕಸಭಾ ಚುನಾವಣೆ ಪ್ರಚಾರದ ಎಫೆಕ್ಟ್ ನಿಂದಾಗಿ ಇಂದು ನಗರದಲ್ಲಿ ಮತ್ತೊಂದು ಕಡೆ ಟ್ರಾಫಿಕ್ ಜಾಮ್ ಉಂಟಾಗಲಿದೆ. ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೆಂದ್ರ ಮೋದಿ ಅವರು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆಂದು ನಗರಕ್ಕೆ ಬರುತ್ತಿದ್ದಾರೆ.

ಹೊಸೂರು ರೋಡ್ ಜಂಕ್ಷನ್ ಮೈದಾನದಲ್ಲಿ ಮೋದಿ ಬಹಿರಂಗ ಸಮಾವೇಶ ನಡೆಯಲಿದ್ದು ಲಕ್ಷಾಂತರ ಮಂದಿ ಪಾಲ್ಗೊಳ್ಳುವ ಅಂದಾಜಿದೆ. ಹಾಗಾಗಿ ಆ ಭಾಗದಲ್ಲಿ ಟ್ರಾಫಿ್ಕ ಜಾಮ್ ಉಂಟಾಗಲಿದೆ.

English summary
Roadblock for vehicles at Gali Anjaneya Temple Mysore Road. Vehicular movement will be stopped temporarily from April 8 to 10 on Mysore Road in Bangalore. As Sri Ramanavami celebrations will be held at Gali Anjaneya Temple, Mysore Road, Bangalore the traffic will be curbed says Bangalore Traffic Police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X