ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಸ್ತೆಯ ಮೇಲೆಯೇ ರಸ್ತೆಯ ಹೆಸರು ಬರೆಯಲು ಮುಂದಾದ ಬಿಬಿಎಂಪಿ

|
Google Oneindia Kannada News

ಬೆಂಗಳೂರು, ಜನವರಿ 13: ರಸ್ತೆಯ ಮೇಲೆಯೇ ರಸ್ತೆಯ ಹೆಸರು ಬರೆಯಲು ಬಿಬಿಎಂಪಿ ಹೊಸ ಯೋಜನೆ ಸಿದ್ಧಪಡಿಸಿದೆ.

ಬೆಂಗಳೂರಿನ ರಸ್ತೆಯ ಮೇಲ್ಭಾಗದಲ್ಲಿ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ದೊಡ್ಡದಾಗಿ ಕಾಣುವಂತೆ ರಸ್ತೆಯ ಹೆಸರುಗಳನ್ನು ಬರೆಸಲಾಗುತ್ತದೆ.

ಸ್ವಚ್ಛ ಸರ್ವೇಕ್ಷಣದಲ್ಲಿ ಉತ್ತಮ ಸ್ಥಾನ ಗಳಿಸಲು ಬಿಬಿಎಂಪಿ ಸಿದ್ಧತೆಸ್ವಚ್ಛ ಸರ್ವೇಕ್ಷಣದಲ್ಲಿ ಉತ್ತಮ ಸ್ಥಾನ ಗಳಿಸಲು ಬಿಬಿಎಂಪಿ ಸಿದ್ಧತೆ

ಕೆಂಪೇಗೌಡ ರಸ್ತೆ, ಜಯಚಾಮರಾಜೇಂದ್ರ ರಸ್ತೆ, ಮಹಾತ್ಮಾ ಗಾಂಧಿ ರಸ್ತೆ, ಡಾ. ರಾಜ್ ಕುಮಾರ್ ರಸ್ತೆ, ಅಂಬೇಡ್ಕರ್ ವೀಧಿ ಸೇರಿದಂತೆ ನಗರದ ಮೊದಲಾದ ರಸ್ತೆಗಳಿಗೆ ಮಹಾನ್ ವ್ಯಕ್ತಿಗಳ ಹೆಸರನ್ನು ನಾಮಕರಣ ಮಾಡಲಾಗಿದೆ. ಈ ಹೆಸರುಗಳನ್ನು ರಸ್ತೆ ಮೇಲೆ ಬರೆಯುವುದರಿಂದ ಅವರ ಗೌರವಕ್ಕೆ ಧಕ್ಕೆಯುಂಟಾಗುತ್ತದೆ ಎನ್ನುವ ಆಕ್ಷೇಪಗಳು ವ್ಯಕ್ತವಾಗಿವೆ.

Road Name On The Road BBMP New Plan

ಈ ಹಿಂದೆ ರಸ್ತೆಯ ಮೇಲೆ ರಸ್ತೆಯ ಹೆಸರು ಬರೆಯುವ ಕುರಿತು ಈ ಹಿಂದಿನ ಕಾರ್ಯದರ್ಶಿ ವಿಜಯಭಾಸ್ಕರ್ ಸಲಹೆ ನೀಡಿದ್ದರು. ನಗರದ 1400 ಕಿ.ಮೀ ಉದ್ದದ 470 ಆರ್ಟೀರಿಯಲ್ ಹಾಗೂ ಸಬ್ ಆರ್ಟೀರಿಯಲ್ ರಸ್ತೆಗಳ ಮೇಲೆ ಹೆಸರು ಬರೆಸುವುದಕ್ಕೆ ಸಿದ್ಧತೆ ನಡೆಸಲಾಗಿದೆ.

ಈಗಾಗಲೇ ಎಲ್ಲೆಲ್ಲಿ ವೈಟ್ ಟಾಪಿಂಗ್ ನಡೆದಿದೆಯೇ ಅಲ್ಲಿ ಮೊದಲ ಹಂತದಲ್ಲಿ ಹೆಸರು ಬರೆಯುವ ಕೆಲಸ ಆರಂಭವಾಗಲಿದೆ.ರಸ್ತೆಗಳ ಹೆಸರು ಏನು ಇದೆಯೋ ಅದೇ ಹೆಸರನ್ನು ರಸ್ತೆಯ ಮೇಲೆ ಬರೆಯಲಾಗುತ್ತದೆ. ಯಾವುದೇ ರೀತಿಯ ಆಕ್ಷೇಪ ವ್ಯಕ್ತವಾಗುವುದಿಲ್ಲ ಎಂದು ತಿಳಿಸಿದಿದ್ದೇನೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿ ಹೇಳಿದ್ದಾರೆ.

ರಸ್ತೆಯ ಮೇಲೆ ಹೆಸರು ಬರೆಯುವುದರಿಂದ ಚಾಲಕ ರಸ್ತೆಯ ಹೆಸರು ತಿಳಿಯಲು , ಅಕ್ಕ ಪಕ್ಕ ಗಮನ ಹರಿಸುವ ಅಗತ್ಯವಿರುವುದಿಲ್ಲ.

Recommended Video

Yediyurappaಗೆ Vishwanth class ತಗೊಂಡ ಪರಿ ಇದು!! | Oneindia Kannada

English summary
BBMP has prepared a new project to write the name of the road on the road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X