ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಲ್ಕ್‌ಬೋರ್ಡ್- ಜಯದೇವ ನಡುವೆ ಮತ್ತಷ್ಟು ಸಂಚಾರ ದಟ್ಟಣೆ ಸಾಧ್ಯತೆ

|
Google Oneindia Kannada News

ಬೆಂಗಳೂರು, ಜುಲೈ 12: ಜಯದೇವ ಜಂಕ್ಷನ್ ಹಾಗೂ ಸಿಲ್ಕ್ ಬೋರ್ಡ್ ನಡುವೆ ರೋಡ್ ಕಮ್ ರೈಲ್ ಫ್ಲೈಓವರ್ ನಿರ್ಮಾಣ ಮಾಡಲು ಬಿಎಂಆರ್‌ಸಿಎಲ್ ಸಜ್ಜಾಗಿದ್ದು ಇದರಿಂದ ಸಂಚಾರ ದಟ್ಟಣೆ ವಿಪರೀತವಾಗುವ ಸಾಧ್ಯತೆ ಇದೆ.

ಬಿಎಂಆರ್‌ಸಿಎಲ್ ಕೆಲ ದಿನಗಳ ಹಿಂದಷ್ಟೇ 2.8 ಕಿ.ಮೀ ವ್ಯಾಪ್ತಿಯಲ್ಲಿ ಲೂಪ್ಸ್ ಹಾಗೂ ರಾಂಪ್ಸ್‌ ನಿರ್ಮಾಣ ಮಾಡಲು 134 ಕೋಟಿ ರೂ ಟೆಂಡರ್ ಆಹ್ವಾನಿಸಿತ್ತು. ಅದರಲ್ಲಿ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ರಸ್ತೆ ಅಗಲೀಕರಣ ಮಾಡುವ ಕಾಮಗಾರಿಯೂ ಕೂಡ ಒಳಗೊಂಡಿದೆ.

ಮೆಟ್ರೋ ನಿರ್ಮಾಣ ಕಾಮಗಾರಿ: ಸಂಚಾರ ಮಾರ್ಗ ಬದಲಾವಣೆಮೆಟ್ರೋ ನಿರ್ಮಾಣ ಕಾಮಗಾರಿ: ಸಂಚಾರ ಮಾರ್ಗ ಬದಲಾವಣೆ

ಮೇಲ್ಸೇತಿವೆಯಲ್ಲಿ ಸಿಗ್ನಲ್ ಫ್ರೀ ಕಾರಿಡಾರ್ ನಿರ್ಮಾಣವೂ ಕೂಡ ನಡೆಯಲಿದ್ದು ಇದರಿಂದ ಇನ್ನಷ್ಟು ಸಂಚಾರ ದಟ್ಟಣೆ ಎದುರಾಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

Road cum rail flyover in Silkboard hits normal people

ಎಲಿವೇಟೆಡ್ ರಸ್ತೆಯುಈಗಿರುವ ರಸ್ತೆಗಿಂತಲೂ ಎಂಟು ಮೀಟರ್ ಎತ್ತರದಲ್ಲಿರುತ್ತದೆ. ಮೆಟ್ರೋ ಮಾರ್ಗವು 16 ಮೀಟರ್ ಎತ್ತರದಲ್ಲಿರುತ್ತದೆ. ನಾಲ್ಕು ಲೇನ್ ರಸ್ತೆಯು 20 ಮೀಟರ್ ಅಗಲೀಕರಣಗೊಳಿಸಲಾಗುತ್ತಿದೆ. ಎಲೆಕ್ಟ್ರಾನಿಕ್‌ಸಿಟಿ ಇಂದ ಬಿಟಿಎಂ ಹಾಗೂ ಎಚ್‌ಎಸ್‌ಆರ್ ಲೇಔಟ್‌, ಮಾರತ್ತಹಳ್ಳಿ ಹಾಗೂ ಎಚ್‌ಎಸ್‌ಆರ್ ಲೇಔಟ್‌, ಸಿಲ್ಕ್‌ಬೋರ್ಡ್ ಜಂಕ್ಷನ್‌ನಲ್ಲಿ ನಾಲ್ಕು ಮಾರ್ಗದ ಲೂಪ್ಸ್ ಅಂಡ್ ರಾಂಪ್ಸ್ ನಿರ್ಮಿಸಲಾಗುತ್ತದೆ.

ಇನ್ನು ಆರ್‌ವಿ ರಸ್ತೆ-ಬೊಮ್ಮಸಂದ್ರ ಹಾಗೂ ಸಿಲ್ಕ್‌ಬೋರ್ಡ್ , ಕೆಆರ್ ಪುರಂ, ಏರ್‌ಪೋರ್ಟ್ ಮಧ್ಯೆ ಎರಡು ಮೆಟ್ರೋ ಮಾರ್ಗಗಳು ಬರಲಿವೆ.

ಈಗಾಗಲೇ ಸಿಲ್ಕ್‌ಬೋರ್ಡ್‌ನಲ್ಲಿ ವಿಪರೀತ ಸಂಚಾರ ದಟ್ಟಣೆ ಎದುರಾಗುತ್ತಿದೆ, ಈ ಕಾಮಗಾರಿ ಆರಂಭವಾದ ಪಕ್ಷದಲ್ಲಿ ಜನರಿಗೆ ಕಚೇರಿಗಳಿಗೆ, ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ಹೋಗುವುದು ಕಷ್ಟಕರವಾಗಲಿದೆ.
ಬನ್ನೇರುಘಟ್ಟ ರಸ್ತೆ ಮೂಲಕ ಸಿಲ್ಕ್‌ ಬೋರ್ಡ್‌ ಕಡೆಗೆ ಹೋಗುವವರು ಜೆಡಿ ಮರಾ ಜಂಕ್ಷನ್ ಮತ್ತು 9ನೇ ಕ್ರಾಸ್ ರಸ್ತೆ ಕಡೆಗೆ ಎಡ ತಿರುವು ತೆಗೆದುಕೊಂಡು, ನಂತರ ಈಸ್ಟ್‌ ಎಂಡ್ ಮುಖ್ಯ ರಸ್ತೆಗೆ ಬಲ ತಿರುವು ತೆಗೆದುಕೊಂಡು, ಮತ್ತೆ ಮಾರೇನಹಳ್ಳಿ ಮುಖ್ಯ ರಸ್ತೆ ಕಡೆಗೆ ಬಲ ತಿರುವು ತೆಗೆದುಕೊಂಡು ಸಿಲ್ಕ್‌ ಬೋರ್ಡ್‌ ತಲುಪ ಬಹುದಾಗಿದೆ.

English summary
Road cum rail flyover in Silkboard hits normal people, Work on a road-cum-rail flyover at the junction that accommodates Metro lines and road traffic will begin soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X