ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಾನಗರದಲ್ಲಿ ರಸ್ತೆ ಅಪಘಾತ; ಬೆಂಗಳೂರಿಗೆ 3ನೇ ಸ್ಥಾನ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 22 : ಭಾರತದ ಮಹಾನಗರಗಳ ಪೈಕಿ ರಸ್ತೆ ಅಪಘಾತದಲ್ಲಿ ಬೆಂಗಳೂರು ನಗರ 3ನೇ ಸ್ಥಾನದಲ್ಲಿದೆ. ಕಳೆದ ವರ್ಷ ನಗರದಲ್ಲಿ 4,684 ರಸ್ತೆ ಅಪಘಾತ ನಡೆದಿದ್ದು, 768 ಜನರು ಮೃತಪಟ್ಟಿದ್ದಾರೆ.

ಕೇಂದ್ರ ರಸ್ತೆ ಮತ್ತು ಹೆದ್ದಾರಿ ಖಾತೆ ಸಚಿವಾಲಯ ಈ ಕುರಿತು ವರದಿ ಬಿಡುಗಡೆ ಮಾಡಿದೆ. 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಬೃಹತ್ ನಗರಗಳಲ್ಲಿನ ರಸ್ತೆ ಅಪಘಾತದ ಕುರಿತು ಸಚಿವಾಲಯ ಮಾಹಿತಿ ಸಂಗ್ರಹ ಮಾಡಿದೆ.

ಹೆಲ್ಮೆಟ್ ಧರಿಸದಿದ್ದರೆ 3 ತಿಂಗಳ ಕಾಲ ಲೈಸೆನ್ಸ್ ರದ್ದು; ತಕ್ಷಣದಿಂದ ಜಾರಿ ಹೆಲ್ಮೆಟ್ ಧರಿಸದಿದ್ದರೆ 3 ತಿಂಗಳ ಕಾಲ ಲೈಸೆನ್ಸ್ ರದ್ದು; ತಕ್ಷಣದಿಂದ ಜಾರಿ

2018ರಲ್ಲಿ ನಗರದಲ್ಲಿ 4,129 ರಸ್ತೆ ಅಪಘಾತ ನಡೆದಿದ್ದು, 686 ಜನರು ಮೃತಪಟ್ಟಿದ್ದರು. 2018 ಮತ್ತು 2019ರಲ್ಲಿ ನಗರ 3ನೇ ಸ್ಥಾನದಲ್ಲಿಯೇ ಮುಂದುವರೆದಿದೆ. 2017ರಲ್ಲಿ ನಗರ 5ನೇ ಸ್ಥಾನದಲ್ಲಿತ್ತು.

ಡ್ರೈವಿಂಗ್ ಲೈಸೆನ್ಸ್‌ ಪಡೆಯಲು ಇನ್ನು 90 ದಿನ ಕಾಯಬೇಕು ಡ್ರೈವಿಂಗ್ ಲೈಸೆನ್ಸ್‌ ಪಡೆಯಲು ಇನ್ನು 90 ದಿನ ಕಾಯಬೇಕು

Road Accident Bengaluru In Third Place In The Country

2019ರಲ್ಲಿ ಕರ್ನಾಟಕದಲ್ಲಿ ರಸ್ತೆ ಅಪಘಾತಗಳು ಕಡಿಮೆಯಾಗಿವೆ. 40,658 ಅಪಘಾತಗಳು ದಾಖಲಾಗಿದ್ದರೆ 10,958 ಜನರು ಮೃತಪಟ್ಟಿದ್ದಾರೆ. 2018ರಲ್ಲಿ ರಾಜ್ಯದಲ್ಲಿ ಒಟ್ಟು 41,701 ಅಪಘಾತ ನಡೆದಿದ್ದರೆ, 10,990 ಜನರು ಮೃತಪಟ್ಟಿದ್ದರು.

ಪೆರಿಫೆರಲ್‌ ವರ್ತುಲ ರಸ್ತೆ; 172 ಎಕರೆ ಹೆಚ್ಚುವರಿ ಭೂ ಸ್ವಾಧೀನ ಪೆರಿಫೆರಲ್‌ ವರ್ತುಲ ರಸ್ತೆ; 172 ಎಕರೆ ಹೆಚ್ಚುವರಿ ಭೂ ಸ್ವಾಧೀನ

ಚೆನ್ನೈ ಪ್ರಥಮ ಸ್ಥಾನ : ದೇಶದ ಮಹಾನಗರದಲ್ಲಿ ರಸ್ತೆ ಅಪಘಾತದಲ್ಲಿ ಚೆನ್ನೈ ಮೊದಲ ಸ್ಥಾನದಲ್ಲಿದೆ. 6871 ಅಪಘಾತ ನಡೆದಿದ್ದರೆ 1252 ಜನರು ಮೃತಪಟ್ಟಿದ್ದಾರೆ. ದೆಹಲಿ 2ನೇ ಸ್ಥಾನದಲ್ಲಿದ್ದು, 5601 ಅಪಘಾತ ನಡೆದಿದ್ದು, 1463 ಜನರು ಮೃತಪಟ್ಟಿದ್ದಾರೆ ಎಂದು ವರದಿ ಹೇಳಿದೆ.

Recommended Video

CSK ತಂಡದ DJ Bravo ಇನ್ನುಳಿದ ಪಂದ್ಯದಲ್ಲಿ ಆಗೋದಿಲ್ಲ , ಏಕೆ | Oneindia Kannada

2018ಕ್ಕೆ ಹೋಲಿಕೆ ಮಾಡಿದರೆ 2019ರಲ್ಲಿ ಚೆನ್ನೈನಲ್ಲಿ ಶೇ 9.35 ಮತ್ತು ದೆಹಲಿಯಲ್ಲಿ ಶೇ 13.98ರಷ್ಟು ರಸ್ತೆ ಅಪಘಾತಗಳ ಕಡಿಮೆಯಾಗಿವೆ. 2019ರಲ್ಲಿ ದೇಶದಲ್ಲಿ 4,49,002 ಅಪಘಾತ ನಡೆದಿದ್ದು, 1,51,113 ಜನರು ಮೃತಪಟ್ಟಿದ್ದಾರೆ.

2019ರ ಸೆಪ್ಟೆಂಬರ್‌ನಲ್ಲಿ ರಸ್ತೆ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ದೇಶಾದ್ಯಂತ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲಾಯಿತು. ಇದರಿಂದಾಗಿ ಶೇ 3.86ರಷ್ಟು ಅಪಘಾತ ಪ್ರಮಾಣ, ಶೇ 0.20ರಷ್ಟು ಸಾವಿನ ಪ್ರಮಾಣ ಕಡಿಮೆಯಾಗಿದೆ ಎಂದು ಸಚಿವಾಲಯ ಹೇಳಿದೆ.

English summary
Bengaluru reported 4,684 road accidents and 768 deaths in the year 2019. City in the third-highest number of road accidents among million-plus cities across the the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X