• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನ ವೈಭವವನ್ನು ಮರಳಿ ತರಲು RJ ಪ್ರದೀಪ್ ಗ್ಯಾಂಗ್ ಸಜ್ಜು

|

ಬೆಂಗಳೂರು, 25 ಜೂನ್ 2019: ಭಾರತದ ಅತಿದೊಡ್ಡ ರೇಡಿಯೊ ನೆಟ್‌ವರ್ಕ್‌ಗಳಲ್ಲಿ ಒಂದಾದ 92.7 ಬಿಗ್ ಎಫ್‌ಎಂ ಬದಲಾಗುತ್ತಿರುವ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು ಮೋಜಿನ ಸ್ಪರ್ಧೆಯನ್ನು ಪ್ರಕಟಿಸಿದೆ.

'ನಮಗೇ ಗೊತ್ತಿಲ್ಲದ ಬೆಂಗಳೂರು' ಎಂಬ ಹೆಸರಿನ ಕಾರ್ಯಕ್ರಮದಲ್ಲಿ 'ಬೆಂಗಳೂರು, ಆರ್.ಜೆ.ಪ್ರದೀಪ ಅವರು ಬೆಂಗಳೂರಿನ ಕುರಿತಾದ ಜ್ಞಾನವನ್ನು ಪರೀಕ್ಷಿಸಲು ನಗರದ ಪರಂಪರೆ ಮತ್ತು ವಿಚಾರಗಳ ಸುತ್ತ ಪ್ರಶ್ನೆಗಳನ್ನು ಕೇಳಲಿದ್ಧಾರೆ. 12 ಗಂಟೆಗಳ ಪ್ರಸಾರ ಸ್ಪರ್ಧೆಯ ಸ್ವರೂಪದೊಂದಿಗೆ, ಕೇಳುಗರು ಮುಂದಿನ 4 ವಾರಗಳಲ್ಲಿ ಗಂಟೆಗೊಂದರಂತೆ ಅತ್ಯಾಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಹೊಂದಿದ್ದಾರೆ. ಪ್ರಸಾರ ಮತ್ತು ಆನ್-ಗ್ರೌಂಡ್ ಚಟುವಟಿಕೆಗಳ ಮಿಶ್ರಣದಿಂದ, ಆರ್ ಜೆ ಪ್ರದೀಪ ಅವರು ಮುಂಬರುವ ವಾರಗಳಲ್ಲಿ ನಗರದ ನಿವಾಸಿಗಳೊಂದಿಗೆ ತಮ್ಮ 'ಬಿಗ್ ಪ್ರದೀಪ ಕ್ಲಬ್' ಅನ್ನು ರಚಿಸಲಿದ್ದಾರೆ.

ಇದನ್ನು 360 ಡಿಗ್ರಿ ಅಭಿಯಾನವನ್ನಾಗಿ ಮಾಡಿ, ಬೆಂಗಳೂರಿನ ಪ್ರಖ್ಯಾತ ಆರ್.ಜೆ.ಪ್ರದೀಪ ಅವರು ಆಯ್ದ ಕ್ಯಾಂಟರ್ ಸ್ಥಳಗಳಲ್ಲಿ ಪ್ರೇಕ್ಷಕರೊಂದಿಗೆ ಸಂವಹನ ನಡೆಸಲಿದ್ದಾರೆ. ಬೆಂಗಳೂರಿನ ಜಯನಗರ, ಮಲ್ಲೇಶ್ವರಂ, ಜೆ.ಪಿ.ನಗರ, ರಾಜಾಜಿನಗರ, ಯಶವಂತ ಪುರ ಸೇರಿದಂತೆ ಬೆಂಗಳೂರಿನ ಸುಮಾರು 15 ಪ್ರಮುಖ ಸ್ಥಳಗಳಲ್ಲಿ ಕ್ಯಾಂಟರ್ ನಿಲ್ಲಿಸಿ ಬೆಂಗಳೂರಿನ ನೆಚ್ಚಿನ ಆರ್ ಜೆ ಪ್ರದೀಪ ಪ್ರೇಕ್ಷಕರೊಂದಿಗೆ ಸಂವಹನದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ವಿಜೇತರನ್ನು ಸಾಮಾಜಿಕ ಮಾಧ್ಯಮದ 92.7 ಎಫ್ಎಂ ನ ಫೇಸ್ಬುಕ್ ಪುಟದಲ್ಲಿ ಪ್ರಕಟಿಸಲಾಗುತ್ತದೆ.

ಈ ವಿಶಿಷ್ಟ ಪರಿಕಲ್ಪನೆಯ ಕುರಿತು ಮಾತನಾಡಿದ ಆರ್ ಜೆ ಪ್ರದೀಪಾ ' ರೇಡಿಯೋ ಸಂವಹನದ ಒಂದು ಪ್ರಬಲ ಮಾಧ್ಯಮವಾಗಿ ದೊಡ್ಡ ಮಟ್ಟದಲ್ಲಿ ಜನರನ್ನು ತಲುಪುತ್ತದೆ. ರೇಡಿಯೋ ಇವಾಗ ಕೇವಲ ಸಂಗೀತ ಹಾಗೂ ಕಾರ್ಯಕ್ರಮಗಳಿಗೆ ಸೀಮಿತವಾಗಿಲ್ಲ. ರೇಡಿಯೋ ಜಾಕಿಯಾಗಿ ಸಮಾಜದಲ್ಲಿ ಒಂದು ಸಕಾರಾತ್ಮಕ ಬದಲಾವಣೆ ತರುವುದು ಜವಾಬ್ದಾರಿ ನನ್ನ ಮೇಲಿದೆ.

ಇನ್ನು ಬೆಂಗಳೂರಿನ ಅತ್ಯಂತ ಹಳೆಯ ರೇಡಿಯೋ ಸ್ಟೇಷನ್ ಆಗಿರುವ 92.7 ಬಿಗ್ ಎಫ್ .ಎಂ ಸಮಾಜಕ್ಕೆ ಏನಾದರೂ ಒಳಿತಾಗುವಂತದ್ದು ಮಾಡಲು ಹಾಗೂ ಎಲ್ಲರ ಜೀವನದಲ್ಲಿ ಒಂದು ಮೌಲ್ಯವನ್ನು ಹೆಚ್ಚಿಸುವ ಆಸೆ ಹೊಂದಿದೆ ನಮ್ಮ ಬೆಂಗಳೂರನ್ನು ಎಲ್ಲರಿಗೂ ವಾಸಿಸಲು ಯೋಗ್ಯವನ್ನಾಗಿಸುವುದು ನನ್ನ ಮುಖ್ಯ ಉದ್ದೇಶವಾಗಿದೆ. ಬೆಂಗಳೂರಿನ ಶ್ರೀಮಂತ ಐತಿಹಾಸಿಕ ಪರಂಪರೆ ಹಾಗೂ ಸಂಸ್ಕೃತಿಯನ್ನು ನಮ್ಮ ಕೇಳುಗರೊಂದಿಗೆ ಹಂಚಿಕೊಳ್ಳುವ ಮೂಲಕ ಸಕಾರಾತ್ಮಕ ಬದಲಾವಣೆಯನ್ನು ತರುವುದು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದೆ.

ಈ ಅಭಿಯಾನವು ಜುಲೈ 19 ರಂದು ಡಿಜಿಟಲ್ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಆರ್ ಜೆ ಪ್ರದೀಪಾ ಅವರ ನಾಲ್ಕು ವಾರಗಳ ಪ್ರಯಾಣವನ್ನು ಸೆರೆಹಿಡಿಯುವ ಚಲನಚಿತ್ರ ಸೆರೆಹಿಡಿಯುವುದರೊಂದಿಗೆ ಮುಕ್ತಾಯಗೊಳ್ಳಲಿದೆ. ಪ್ರಸ್ತುತ 92.7 ಬಿಗ್ ಎಫ್‌ಎಂನಲ್ಲಿ ಪ್ರತಿ ಸೋಮವಾರ-ಶುಕ್ರವಾರ ಸಂಜೆ 5 ರಿಂದ ರಾತ್ರಿ 9 ರವರೆಗೆ ಫುಲ್ ಟೈಮ್ ಪಾಸ್ ಎಂಬ ಕಾರ್ಯಕ್ರಮವನ್ನು ಆಯೋಜಿಸುತ್ತಿರುವ ಆರ್.ಜೆ.ಪ್ರದೀಪ ಗೆ ಇತರ ಆರ್ ಜೆ ಗಳೂ ಬೆಂಬಲ ನೀಡಿದ್ದಾರೆ. ಹಿತವಾದ ಸಂಗೀತದ ಜೊತೆಗೆ ವಿನೋದದಿಂದ ಕೂಡಿದ ಆರ್.ಜೆ.ಪ್ರದೀಪಾ ಅವರ ಶೋ ಫುಲ್ ಟೈಮ್ ಪಾಸ್, ಬೆಂಗಳೂರಿನ ಸಂಜೆಯ ಡ್ರೈವ್ ಸಮಯಕ್ಕೆ ಹೊಸ ಆಯಾಮವನ್ನು ಒದಗಿಸುತ್ತದೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rj Pradeepaa & BIG FM are set to change your perspective on Bengaluru’s Grandeur and this campaign is giving listeners a chance to win exciting prizes every hour.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more