ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಟೋದಲ್ಲಿ ಬಂದು ಮತದಾನ ಮಾಡಿದ ರಿಜ್ವಾನ್ ಅರ್ಷದ್

|
Google Oneindia Kannada News

ಬೆಂಗಳೂರು, ಏಪ್ರಿಲ್ 18 : ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌-ಜೆಡಿಎಸ್‌ ಅಭ್ಯರ್ಥಿ ರಿಜ್ವಾನ್ ಅರ್ಷದ್ ಅವರು ಆಟೋದಲ್ಲಿ ಬಂದು ಮತದಾನ ಮಾಡುವ ಮೂಲಕ ಗಮನ ಸೆಳೆದರು. ಆಟೋ ಚಾಲಕಿ ಮಹಿಳೆ ಎನ್ನುವುದು ವಿಶೇಷವಾಗಿತ್ತು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಗುರುವಾರ ರಿಜ್ವಾನ್ ಅರ್ಷದ್ ಅವರು ಪತ್ನಿ ನಹಿಝಾ ಅವರ ಜೊತೆ ರೆಸಿಡೆನ್ಸಿ ರಸ್ತೆಯ ಸೆಂಟ್ ಜೋಸೆಫ್ ಬಾಯ್ಸ್ ಕಾಲೇಜಿಗೆ ಬಂದು ತಮ್ಮ ಹಕ್ಕು ಚಲಾಯಿಸಿದರು. 'ಯುವಕರು ಹೆಚ್ಚು-ಹೆಚ್ಚು ಮತದಾನ ಮಾಡಬೇಕು' ಎಂದು ಕರೆ ನೀಡಿದರು.

ನಿಮ್ಮ ರಾಜಕೀಯ ಜ್ಞಾನವನ್ನು ಒರೆಗೆ ಹಚ್ಚುವ ರಸಪ್ರಶ್ನೆ

ಮತದಾನ ಕೇಂದ್ರಕ್ಕೆ ರಿಜ್ವಾನ್ ಅರ್ಷದ್ ಅವರು ಪತ್ನಿ ನಹಿಝಾ ಜೊತೆ ಆಟೋದಲ್ಲಿ ಆಗಮಿಸಿದರು. ಆಟೋವನ್ನು ಶಾಂತಮ್ಮ ಎಂಬ ಮಹಿಳಾ ಚಾಲಕಿ ಓಡಿಸುತ್ತಿದ್ದರು.

Rizwan Arshad takes auto raid to caste voting

ಮತದಾನ ಮಾಡಿದ ಬಳಿಕ ಮಾತನಾಡಿದ ರಿಜ್ವಾನ್ ಅರ್ಷದ್ ಅವರು, 'ಶಾಂತಮ್ಮ ಅವರು ಹಿಂದಿನಿಂದಲೂ ನನಗೆ ಪರಿಚಿತರು. ನೀವು ಅಭ್ಯರ್ಥಿಯಾದರೆ ನನ್ನ ಆಟೋದಲ್ಲಿ ಬರಬೇಕು ಎಂದು ಒತ್ತಾಯಿಸಿದ್ದರು. ಆದ್ದರಿಂದ ಮತದಾನ ಮಾಡಲು ಆಟೋದಲ್ಲಿ ಬಂದೆ' ಎಂದರು.

ಬೆಂಗಳೂರು ಕೇಂದ್ರದ ಚುನಾವಣಾ ಪುಟ

'ಕ್ಷೇತ್ರದಲ್ಲಿ ಪ್ರಚಾರ ನಡೆಸುವಾಗ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಬದಲಾವಣೆಗೆ ಒಂದು ಅವಕಾಶವಿದೆ. ಎಲ್ಲರೂ ಬಂದು ಮತದಾನ ಮಾಡಬೇಕು. 10 ವರ್ಷಗಳ ಕಾಲ ಬೆಂಗಳೂರು ಕೇಂದ್ರದಲ್ಲಿ ಬಿಜೆಪಿ ಯಾವುದೇ ಕೆಲಸ ಮಾಡಿಲ್ಲ' ಎಂದು ದೂರಿದರು.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಪಿ.ಸಿ.ಮೋಹನ್ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ರಿಜ್ವಾನ್ ಅರ್ಷದ್, ಪಕ್ಷೇತರ ಅಭ್ಯರ್ಥಿಯಾಗಿ ನಟ ಪ್ರಕಾಶ್ ರಾಜ್ ಕಣದಲ್ಲಿದ್ದಾರೆ.

English summary
Bangalore Central lok sabha seat Congress-JD(S) candidate Rizwan Arshad come to cast vote by auto as a wish by women auto driver Shanthamma.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X