• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

3,000 ಉಳಿಸಲು ಹೋಗಿ ಸಿಕ್ಕಿಬಿದ್ದ ರಿಯಾಜ್ ಅಹ್ಮದ್ ಸಯೀದಿ!

By ವಿಕಾಸ್ ನಂಜಪ್ಪ
|

ಬೆಂಗಳೂರು, ಜ.12 : ದುಬೈಗೆ ಹಾರಲು ಸಿದ್ಧವಾಗಿದ್ದ ಶಂಕಿತ ಉಗ್ರ ರಿಯಾಜ್ ಅಹ್ಮದ್ ಸಯೀದಿಯನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ದುಡ್ಡು ಉಳಿಸಲು ಹೋದ ಸಯೀದಿ ಪೊಲೀಸರ ಕೈಗೆ ಸಿಕ್ಕಿಬಿದ್ದದ್ದೇ ಒಂದು ಕಥೆ ಅದರ ವಿವರ ಇಲ್ಲಿದೆ ನೋಡಿ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ನಿವಾಸಿ ನಿವಾಸಿ ರಿಯಾಜ್‌ ಅಹ್ಮದ್‌ ಸಯೀದಿ (32)ಯನ್ನು ಶನಿವಾರ ರಾತ್ರಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ದುಬೈ ವಿಮಾನವೇರಲು ತೆರಳುತ್ತಿದ್ದಾಗ ಸಿಸಿಬಿ ಪೊಲೀಸರು ಮಂಗಳೂರು ಪೊಲೀಸರ ನೆರವಿನೊಂದಿಗೆ ಬಂಧಿಸಿದರು. [ಭಟ್ಕಳ ಮೂಲದ ನಾಲ್ಕನೇ ಶಂಕಿತ ಉಗ್ರ ಬಲೆಗೆ]

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸಯೀದಿ ಮೂರು ದಿನಗಳ ಹಿಂದೆ ದುಬೈ ವಿಮಾನವೇರಬೇಕಿತ್ತು. ಆದರೆ, ಟ್ರಾವೆಲ್ ಎಜೆಂಟ್ ಮಾತು ಕೇಳಿ ಶನಿವಾರ ದುಬೈಗೆ ಹಾರಲು ಸಜ್ಜಾದ ರಿಯಾಜ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. [ಮೂವರು ಶಂಕಿತ ಉಗ್ರರಲ್ಲಿ ಒಬ್ಬ ಎಂಬಿಎ ವಿದ್ಯಾರ್ಥಿ]

ಟ್ರಾವೆಲ್ ಏಜೆಂಟ್ ಮಾತು ನಂಬಿದ : ಶನಿವಾರ ರಾತ್ರಿ ದುಬೈಗೆ ತೆರಳುವುದಕ್ಕಾಗಿ ಭಟ್ಕಳದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ರಿಯಾಜ್ ರಾತ್ರಿ 11.20ಕ್ಕೆ ಹೊರಡುವ ಜೆಟ್‌ ಏರ್‌ವೇಸ್‌ ವಿಮಾನದಲ್ಲಿ ಪ್ರಯಾಣಿಸಲು ಟಿಕೆಟ್‌ ಪಡೆದಿದ್ದ.

ಆದರೆ, ಮೂರು ದಿನಗಳ ಹಿಂದೆ ರಿಯಾಜ್ ದುಬೈಗೆ ಪ್ರಯಾಣ ಬೆಳೆಸಬೇಕಿತ್ತು. ದುಬೈಗೆ ತೆರಳಲು ತುರ್ತು ಟಿಕೆಟ್ ಬುಕ್ ಮಾಡಲು ಹೋಗಿದ್ದ ರಿಯಾಜ್‌ಗೆ ಟ್ರಾವೆಲ್‌ ಏಜೆಂಟ್ ಮೂರು ದಿನಗಳು ತಡೆದರೆ 3000 ರೂ. ರಿಯಾಯಿತಿ ದೊರೆಯುತ್ತದೆ ಎಂದು ಹೇಳಿದ್ದ. ಮೂರು ಸಾವಿರ ಉಳಿಸಲು ಹೋದ ರಿಯಾಜ್, ಪ್ರಯಾಣವನ್ನು ಮುಂದೂಡಿ ಶನಿವಾರ ಹೊರಟಿದ್ದ ಅಷ್ಟರಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ರಿಯಾಜ್ ತನಿಖೆ ನಡೆಯುತ್ತಿದೆ : ದುಬೈನಲ್ಲಿ ಕೆಲಸ ಮಾಡುತ್ತಿದ್ದ ರಿಯಾಜ್‌ ಅಹ್ಮದ್‌ ಸಯೀದಿ ರಜೆ ಮೇಲೆ ಭಟ್ಕಳಕ್ಕೆ ಬಂದಿದ್ದ. ಆತನ ತನಿಖೆ ನಡೆಯುತ್ತಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಹೇಳಿದ್ದಾರೆ. ಸಯೀದಿಗೆ ಇತರ ದೇಶಗಳಲ್ಲಿರುವ ಸಂಪರ್ಕದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಇದುವರೆಗಿನ ತನಿಖೆಯಿಂದ ಕಳೆದ ವಾರ ಭಟ್ಕಳದಲ್ಲಿ ಬಂಧಿಸಿದ ಮೂವರು ಉಗ್ರರಿಗೂ ಮತ್ತು ರಿಯಾಜ್‌ಗೂ ಸಂಪರ್ಕವಿತ್ತು ಎಂದು ತಿಳಿದುಬಂದಿದೆ. ರಿಯಾಜ್ ಸಹ ಅನ್ಸರ್-ಉಲ್-ತವಹಿದ್ ಎಂಬ ಸಂಘಟನೆಯ ಮುಖ್ಯಸ್ಥ ಸುಲ್ತಾನ್ ಅಹಮದ್ ಅರ್ಮರ್ ಎಂಬಾತನ ಸೂಚನೆಯಂತೆ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A mixed bag of luck and bad luck led to the nabbing of this terror suspect from the Mangaluru airport late Saturday night. Riyaz Ahmed Sayyidi was to travel to Dubai three days back, but his travel agent told him to postpone his flight to Saturday night as he was getting a ticket cheaper by Rs 3000.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more