ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ ಮೂರನೇ ಹಂತದ ಮಾರ್ಗ ಯಾವುದು?

|
Google Oneindia Kannada News

ಬೆಂಗಳೂರು, ಫೆ.11 : ನಮ್ಮ ಮೆಟ್ರೋ ಎರಡನೇ ಹಂತದ ಯೋಜನೆಗೆ ಕೇಂದ್ರ ಸರ್ಕಾರದ ಅನುಮತಿ ದೊರೆತ ಬಳಿಕ ಬಿಎಂಆರ್ ಸಿಎಲ್ ನಗರದಲ್ಲಿ ಮೆಟ್ರೊ ಸಂಪರ್ಕ ಜಾಲವನ್ನು ಮತ್ತಷ್ಟು ವಿಸ್ತರಣೆ ಮಾಡಲು ಚಿಂತನೆ ನಡೆಸಿದೆ. ಅದಕ್ಕಾಗಿ ಮೂರನೇ ಹಂತದಲ್ಲಿ 133 ಕಿ.ಮೀ. ಉದ್ದದ ಮಾರ್ಗ ನಿರ್ಮಾಣ ಮಾಡಲು ಯೋಜನೆ ತಯಾರಿಸಿದೆ.

ನಮ್ಮ ಮೆಟ್ರೋ ಮೂರನೇ ಹಂತದಲ್ಲಿ ಒಟ್ಟು ಐದು ಮಾರ್ಗಗಳನ್ನು ನಿರ್ಮಾಣ ಮಾಡಲು ಬಿಎಂಆರ್ ಸಿಎಲ್ ಉದ್ದೇಶಿಸಿದೆ. ಇವುಗಳಲ್ಲಿ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ನಿಂದ ಹೆಬ್ಬಾಳವರೆಗಿನ 33 ಕಿ.ಮೀ. ಉದ್ದದ ಮಾರ್ಗವೂ ಸೇರಿದ್ದು, ಈ ಮಾರ್ಗದ ಕುರಿತು ಯೋಜನಾ ವರದಿ ತಯಾ­ರಿಸುವಂತೆ ರೈಟ್ಸ್ ಸಂಸ್ಥೆಗೆ ಮನವಿ ಮಾಡಿದೆ. [ಮೆಟ್ರೋ ಎರಡನೇ ಹಂತಕ್ಕೆ ಕೇಂದ್ರದ ಅನುಮತಿ]

Namma Metro

ಮೆಟ್ರೋ ಮೂರನೇ ಹಂತದಲ್ಲಿ ನೂತನ ಮಾರ್ಗಗಳ ನಿರ್ಮಾಣದ ಕುರಿತು ಅಧ್ಯಯನ ನಡೆಸಲು ಕೇಂದ್ರ ಉನ್ನತಾ­ಧಿಕಾರ ಸಮಿತಿ ಒಪ್ಪಿಗೆ ನೀಡಿದೆ. ಮೂರನೇ ಹಂತದಲ್ಲಿ ನಾಗವಾರದಿಂದ ಕೆಂಪೇಗೌಡ ಅಂತರ­ರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ (25 ಕಿ.ಮೀ), ಹೊಸಕೆರೆಹಳ್ಳಿಯಿಂದ ಮಾರತ್‌ ಹಳ್ಳಿವರೆಗೆ (23 ಕಿ.ಮೀ), ಸರ್ಜಾಪುರ ಲೇಔಟ್‌ನಿಂದ ಯಲಹಂಕ­ವರೆಗೆ (35 ಕಿ.ಮೀ) ಮತ್ತು ನೈಸ್‌ ರಸ್ತೆಯಿಂದ ವಿಜಯನಗರದವರೆಗೆ (17 ಕಿ.ಮೀ) ಮಾರ್ಗಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.

ನಮ್ಮ ಮೆಟ್ರೋ ಮೊದಲನೇ ಹಂತದಲ್ಲಿ 42.3 ಕಿ.ಮೀ., ಎರಡನೇ ಹಂತದಲ್ಲಿ 72 ಕಿ.ಮೀ. ಮತ್ತು ಮೂರನೇ ಹಂತದಲ್ಲಿ 133 ಕಿ.ಮೀ. ಉದ್ದದ ಮಾರ್ಗಗಳನ್ನು ನಿರ್ಮಿಸುವ ಮೂಲಕ ನಗರದ ಎಲ್ಲ ಭಾಗಗಳಿಗೆ ನಮ್ಮ ಮೆಟ್ರೋ ಸೇವೆಯನ್ನು ವಿಸ್ತರಣೆ ಮಾಡಲು ಚಿಂತನೆ ನಡೆಸಿದೆ. ಮೂರನೇ ಹಂತದ ಪ್ರಸ್ತಾವನೆ ಸದ್ಯ ತಯಾರಾಗುತ್ತಿದ್ದು, ಅನುಷ್ಠಾನಕ್ಕೆ ಬರಲು ಹಲವು ವರ್ಷಗಳು ಬೇಕಾಗುತ್ತದೆ.

ಮಾರ್ಗದ ವಿವರವಾದ ವರದಿ ತಯಾರಿಸುವ ರೈಟ್ಸ್ ಸಂಸ್ಥೆ ಮೇಲ್ಸೇತುವೆ ಮಾರ್ಗದಲ್ಲಿ ಪ್ರತಿ 200 ಮೀಟರ್‌ಗೆ ಮತ್ತು ಸುರಂಗ ಮಾರ್ಗದಲ್ಲಿ ಪ್ರತಿ 100 ಮೀಟರ್‌ಗೆ ಒಂದು ಬಾರಿಯಂತೆ ಮಣ್ಣಿನ ಪರೀಕ್ಷೆ ನಡೆಸಲು ತೀರ್ಮಾನಿಸಿದೆ. 2ಎ ಮತ್ತು 3ನೇ ಹಂತದ ಯೋಜನೆಗಳ ಅಧ್ಯಯನ ನಡೆಸಿದ ನಂತರ, ಸಂಸ್ಥೆ ತನ್ನ ಕಾರ್ಯವನ್ನು ಆರಂಭಿಸಲಿದೆ.

English summary
Namma Metro is set for another network boost. Buoyed by the Centre’s recent clearance of Namma Metro Phase-II, the Bangalore Metro Rail Corporation Limited (BMRCL) has begun the spadework for a 133-km Phase III.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X