ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಗಲಭೆ: 2 ದಿನ ಸಿಸಿಬಿ ವಶಕ್ಕೆ ಸಂಪತ್ ರಾಜ್

|
Google Oneindia Kannada News

ಬೆಂಗಳೂರು, ನವೆಂಬರ್ 17: ಶಾಸಕ ಅಖಂಡ ಶ್ರೀನಿವಾಸ್ ಅವರ ಮನೆಗೆ ಬೆಂಕಿ ಹಚ್ಚಲು ಪ್ರಚೋದನೆ ನೀಡಿದ ಪ್ರಕರಣದ ಆರೋಪಿ ಮಾಜಿ ಮೇಯರ್ ಸಂಪತ್ ರಾಜ್ ಅವರ ಬಂಧನ ನಾಟಕ ಮುಗಿದಿದೆ. ಸ್ನೇಹಿತರ ಮನೆಯಲ್ಲಿ ಸಿಸಿಬಿಗೆ ಸಿಕ್ಕಿದ್ದು, ಮಂಗಳವಾರ ಸಂಜೆ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಎರಡು ದಿನಗಳ ಪೊಲೀಸ್ ವಶಕ್ಕೆ ಪಡೆಯಲಾಗಿದೆ.

ಮಾಜಿ ಮೇಯರ್ ಸಂಪತ್ ರಾಜ್ ಎಸ್ಕೇಪ್ ಚರಿತ್ರೆ ! ಮಾಜಿ ಮೇಯರ್ ಸಂಪತ್ ರಾಜ್ ಎಸ್ಕೇಪ್ ಚರಿತ್ರೆ !

ಇಂದು ಬೆಳಗ್ಗೆ ಸಂಪತ್ ರಾಜ್‌ರನ್ನು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಪ್ರಶ್ನಿಸಿದ್ದಾರೆ. ಇಷ್ಟು ದಿನ ಎಲ್ಲಿದ್ದಿರಿ ? ಮೊಬೈಲ್ ಪೋನ್ ಯಾಕೆ ಸ್ವಿಚ್‌ ಆಫ್‌ ಮಾಡಿಕೊಂಡಿದ್ದೀರಿ ? ವಿಚಾರಣೆಗೆ ನೋಟಿಸ್ ನೀಡಿದರೂ ಯಾಕೆ ಬರಲಿಲ್ಲ? ಆಸ್ಪತ್ರೆಯಿಂದ ತೆರಳಿದ ಬಳಿಕ ವಿಚಾರಣೆಗೆ ಹಾಜರಾಗಬೇಕು ಎಂದು ವೈದ್ಯರು ನಿಮ್ಮ ಗಮನಕ್ಕೆ ತರಲಿಲ್ಲವೇ ? ಎಂಬ ಪ್ರಶ್ನೆಗ ಳನ್ನು ಮುಂದಿಟ್ಟಿದ್ದಾರೆ. ಉತ್ತರ ನೀಡಲು ಸಂಪತ್ ತಡಬಡಿಸಿದ್ದು, ಮಧ್ಯಾಹ್ನಟ ಊಟ ಮುಗಿಸಿದ ನಂತರ ಸಿಟಿ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಸಂಪತ್ ಹಾಜರು ಪಡಿಸಿದರು.

Bengaluru Riots Case : 2 Days Ccb Custody For Sampath Raj

Recommended Video

ಎಷ್ಟ್ ದಿನ ಮೋಸ ಮಾಡ್ತಾರೋ ಮಾಡ್ಲಿ!! | Oneindia Kannada

ಸಂಪತ್ ರಾಜ್ ಅವರ ವಿಚಾರಣೆ ಅಗತ್ಯವಿದ್ದು, ಪೊಲೀಸ್ ವಶಕ್ಕೆ ನೀಡುವಂತೆ ಸಾರ್ವಜನಿಕ ಅಭಿಯೋಜಕರು ಮನವಿ ಮಾಡಿದರು. ಸಂಪತ್ ರಾಜ್ ಪ್ರಭಾವಿ ರಾಜಕಾರಣಿಯಾಗಿದ್ದರೂ, ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದರು. ಡಿ.ಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಸಂಪತ್ ರಾಜ್ ಅವರ ಪಾತ್ರವಿರುವ ಬಗ್ಗೆ ಸಾಕ್ಷಾಧಾರಗಳು ಲಭ್ಯವಿದ್ದು, ಅವರನ್ನು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ. ಕಾನೂನಿಗೆ ಗೌರವ ಕೊಡದೇ ತಲೆ ಮರೆಸಿಕೊಂಡಿದ್ದು, ಸಾಕ್ಷಿಗಳನ್ನು ನಾಶ ಪಡಿಸುವ ಪ್ರಭಾವ ಹೊಂದಿದ್ದಾರೆ. ಹೀಗಾಗಿ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ನೀಡುವಂತೆ ಮನವಿ ಮಾಡಿದರು. ಸಿಸಿಬಿ ಪೊಲೀಸರ ಮನವಿ ಅಂಗೀಕರಿಸಿದ ನ್ಯಾಯಾಧೀಶರು ಎರಡು ದಿನ ಸಿಸಿಬಿ ಪೊಲೀಸರ ವಶಕ್ಕೆ ನೀಡಿದ್ದಾರೆ. ಸಿಸಿಬಿ ಡಿವೈಎಸ್ಪಿ ವೇಣುಗೋಪಾಲ್ ನೇತೃತ್ವದ ತಂಡ ಸಂಪತ್ ರಾಜ್ ಅವರನ್ನು ವಿಚಾರಣೆ ನಡೆಸಲಿದೆ.

English summary
Former Mayor Sampath Raj who is under arrest in connection with the Bengaluru riots case, has been produced before he civil court on Tuesday. The court is issues two days police custody.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X