• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ನನ್ನ ಲಂಚ್ ಬಾಕ್ಸ್‌ ತೊಳೆಯಿರಿ' ವಿಮಾನ 2 ಗಂಟೆ ತಡವಾಗಲು ಇದೇ ಕಾರಣ

|

ಬೆಂಗಳೂರು, ಜೂನ್ 19: 'ನನ್ನ ಲಂಚ್ ಬಾಕ್ಸ್ ತೊಳೆಯಿರಿ' ಎಂದು ವಿಮಾನ ಕ್ಯಾಪ್ಟನ್ ಮೇಲ್ವಿಚಾರಕರಿಗೆ ಹೇಳಿದ್ದೇ ತಡ ಜಗಳ ಆರಂಭವಾಗೇ ಬಿಡ್ತು, ಇದೊಂದು ಮಾತು ಏರ್ ಇಂಡಿಯಾ ವಿಮಾನ 2 ಗಂಟೆ ತಡವಾಗಿ ಹೋಗಲು ಕಾರಣವಾಯಿತು.

ಇನ್ನೇನು ಕೆಲವೇ ನಿಮಿಷಗಳಲ್ಲಿ ಬೆಂಗಳೂರಿನಿಂದ ಕೊಲ್ಕತ್ತಕ್ಕೆ ಏರ್ ಇಂಡಿಯಾ ವಿಮಾನ ಹೊರಡುವುದರಲ್ಲಿತ್ತು, ಬೋರ್ಡಿಂಗ್ ಮುಕ್ತಾಯಗೊಂಡಿತ್ತು.

ಏರ್‌ಪೋರ್ಟ್‌ ಫ್ಲೈಓವರ್ ಮೇಲೆ ವಾಹನಗಳ ನಿಷೇಧ?

ಎಲ್ಲರೂ ತಮ್ಮ ತಮ್ಮ ಸೀಟಿನಲ್ಲಿ ಕುಳಿತಾಗಿತ್ತು. ಮೊದಲು ಕ್ಯಾಪ್ಟನ್ ತಂದಿದ್ದ ಆಹಾರವನ್ನು ಬಿಸಿ ಮಾಡುವಂತೆ ಹೇಳಿದ್ದರು, ಊಟವಾದ ನಂತರ ಬಾಕ್ಸ್‌ನ್ನು ತೊಳೆಯುವಂತೆ ಹೇಳಿದಾಗ , ಮೇಲ್ವಿಚಾರಕನಿಗೆ ಕೋಪಬಂದು ಅಲ್ಲಿಯೇ ಜಗಳ ಆರಂಭವಾಗಿತ್ತು.

ವಿಮಾನವನ್ನು ಎರಡು ಗಂಟೆ ತಡವಾಗಿ ಹೋಗುವಂತೆ ಮಾಡಿತ್ತು. ಅದೂ ಬೇರೆ ಕ್ಯಾಪ್ಟನ್ ಹಾಗೂ ಮೇಲ್ವಿಚಾರಕರನ್ನು ಕರೆಸಿ ವಿಮಾನ ಹಾರಾಟಕ್ಕೆ ಅನುವು ಮಾಡಿಕೊಡಲಾಗಿತ್ತು.

ಏರ್‌ಲೈನ್ ಮುಖ್ಯಸ್ಥರಾದ ಅಶ್ವನಿ ಲೊಹಾನಿಯವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಗುರುವಾರ ದೆಹಲಿಯಗೆ ಇವರಿಬ್ಬರನ್ನು ವಿಚಾರಣೆಗೆಂದು ತೆರಳಲು ತಿಳಿಸಿದ್ದಾರೆ. ಕರ್ತವ್ಯದ ಸಂದರ್ಭದಲ್ಲಿ ಜಗಳವಾಡಿದ್ದು ಅಷ್ಟೇ ಅಲ್ಲದೆ ನೂರಾರು ಪ್ರಯಾಣಿಕರಿಗೆ ತೊಂದರೆ ಮಾಡಿದ್ದು ಗಂಭೀರವಾದ ವಿಚಾರವಾಗಿದೆ.

ಬೆಳಗ್ಗೆ 11.15ಕ್ಕೆ ಬೆಂಗಳೂರಿನಿಂದ ಹೊರ ವಿಮಾನ ಕೊಲ್ಕತ್ತವನ್ನು ಎರಡು ತಾಸು ತಡವಾಗಿ ತಲುಪಿದೆ. ಅದೃಷ್ಟವಶಾತ್ ಒಂದೊಮ್ಮೆ ಹಾರಾಟದ ಹಂತದಲ್ಲಿದ್ದಾಗ ಈ ರೀತಿಯಾಗಿದ್ದರೆ ಪ್ರಯಾಣಿಕರ ಗತಿ ಏನಾಗುತ್ತಿತ್ತು ಎಂದು ಹಿರಿಯ ಪೈಲಟ್ ಒಬ್ಬರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rinse my lunch box it leads two 2 hour delay of flight, These were the words that triggered a major fight on board an Air India aircraft at Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more