ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ರಿಂಗ್‌ರೋಡ್ ಯೋಜನೆಯಿಂದ ಆರ್ಥಿಕ ಚಟುವಟಿಕೆ ಹೆಚ್ಚಳ: ಗಡ್ಕರಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 28: ಬೆಂಗಳೂರು ರಿಂಗ್ ರೋಡ್ ಯೋಜನೆಯಿಂದ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುತ್ತವೆ ಎಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಕೈಗಾರಿಕಾ ಸಮೂಹಗಳ ಅಭಿವೃದ್ಧಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆ ಕೈಗಾರಿಕೆಗಳು ಕೈಜೋಡಿಸಿದರೆ ಬೆಳವಣಿಗೆ ಸಾಧ್ಯವಾಗುತ್ತದೆ. ಗ್ರೀನ್ ಎಕ್ಸ್ ಪ್ರೆಸ್ ಹೆದ್ದಾರಿಯುದ್ದಕ್ಕೂ ಹಲವು ಕೈಗಾರಿಕಾ ಸಮೂಹಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಗಡ್ಕರಿ ಹೇಳಿದ್ದಾರೆ.

ನಿನ್ನೆ ಅವರು ಬೆಂಗಳೂರು ಚೇಂಬರ್ಸ್ ಆಫ್ ಇಂಡಸ್ಟ್ರಿ ಆಂಡ್ ಕಾಮರ್ಸ್ ಸದಸ್ಯರನ್ನುದ್ದೇಶಿಸಿ ಮಾತನಾಡಿ, 17 ಸಾವಿರ ಕೋಟಿ ರೂಪಾಯಿಗಳ ವಿಸ್ತ್ರೃತ ಯೋಜನಾ ವರದಿಯನ್ನು ಸಿದ್ದಪಡಿಸಲಾಗಿದ್ದು ಭೂ ಸ್ವಾಧೀನ ವೆಚ್ಚದ ಶೇಕಡಾ 25ರಷ್ಟನ್ನು ನೀಡುವುದಾಗಿ ಮತ್ತು ಸ್ಟೀಲ್, ಸಿಮೆಂಟ್ ಮತ್ತು ಯೋಜನೆಗೆ ಬಳಕೆಯಾಗುವ ಇತರ ವಸ್ತುಗಳ ಮೇಲೆ ಜಿಎಸ್ಟಿ ವಿನಾಯ್ತಿ ನೀಡುವುದಾಗಿ ಭರವಸೆ ನೀಡಿದೆ ಎಂದು ಹೇಳಿದ್ದಾರೆ.

 ಯಾವುದೇ ಹೊಸ ಯೋಜನೆ ಕೈಗೆತ್ತಿಕೊಳ್ಳದಿರಲು ಬಿಬಿಎಂಪಿ ನಿರ್ಧಾರ ಯಾವುದೇ ಹೊಸ ಯೋಜನೆ ಕೈಗೆತ್ತಿಕೊಳ್ಳದಿರಲು ಬಿಬಿಎಂಪಿ ನಿರ್ಧಾರ

ಈ ಬಗ್ಗೆ ಹೇಳಿಕೆ ಹೊರಡಿಸಿರುವ ಬಿಸಿಸಿಐ, ಕೈಗಾರಿಕಾ ಸಮೂಹಗಳು, ಸ್ಮಾರ್ಟ್ ಹಳ್ಳಿಗಳು ಮತ್ತು ಅದರ ಸುತ್ತಲೂ ಸ್ಮಾರ್ಟ್ ಸಿಟಿಯನ್ನು ಹೊಂದುವ ಮೂಲಕ ಬೆಂಗಳೂರಿನ ಹೊರ ವರ್ತುಲ ರಸ್ತೆಯ ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವ ಗಡ್ಕರಿ ಮಾತನಾಡಿದ್ದಾರೆ ಎಂದು ಹೇಳಿದೆ.

Bengaluru Ring Road Project Will Boost Economic Activities Around Bengaluru Aays Nitin Gadkari

ಬೆಂಗಳೂರು ಮತ್ತು ಚೆನ್ನೈ ನಡುವೆ ಹೊಸ ಹೆದ್ದಾರಿ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, ಬೆಂಗಳೂರು-ಮೈಸೂರು ರಸ್ತೆ ಕಾಮಗಾರಿ ನಡೆಯುತ್ತಿದೆ.

ಮೈಸೂರು ಭಾಗದಲ್ಲಿ ಕೈಗಾರಿಕಾ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಇದು ಮುಖ್ಯವಾಗುತ್ತದೆ. ವೇಗವಾಗಿ ಕಾಮಗಾರಿ ನಡೆಯುತ್ತಿದ್ದು 2022ರ ಸೆಪ್ಟೆಂಬರ್ ಗೆ ಮುಗಿಯಲಿದೆ ಎಂದು ತಿಳಿಸಿದ್ದಾರೆ.

ದೇಶದ ಅಭಿವೃದ್ಧಿಯಲ್ಲಿ ಬೆಂಗಳೂರಿನ ಕೊಡುಗೆ ಸಾಕಷ್ಟಿದೆ ಎಂದು ಒತ್ತಿ ಹೇಳಿರುವ ಗಡ್ಕರಿ ಅವರು, ಬೆಂಗಳೂರು ದೇಶದ ಜ್ಞಾನ ನಗರಿಯಾಗಿದ್ದು, ಹಲವು ಐಟಿ-ಬಿಟಿ ಕಂಪೆನಿಗಳು ಸಾಕಷ್ಟು ಉತ್ತಮ ಕೆಲಸ ಮಾಡುತ್ತಿವೆ.

ನಮ್ಮಲ್ಲಿ ಸಾಕಷ್ಟು ಪ್ರತಿಭಾವಂತ ಮಾನವ ಸಂಪನ್ಮೂಲವಿದೆ. ಅದ್ಭುತವನ್ನು ಸಾಧಿಸುವಂತಹ ಸಂಪನ್ಮೂಲವಿದೆ. ನಿಮ್ಮಂತ ಜನರು ಆತ್ಮನಿರ್ಭರ ಭಾರತಕ್ಕೆ ಕೊಡುಗೆ ನೀಡಬೇಕು ಎಂದು ಸಚಿವರು ಹೇಳಿದ್ದಾರೆ.

Recommended Video

ಅಡುಗೆ ಮನೆಯಲ್ಲಿ ಆರೋಗ್ಯ..! ಸುಲಭದಲ್ಲಿ ಸಿಗುವ ಈ ಆಹಾರ ಆರೋಗ್ಯವೃದ್ಧಿಗೆ ಸಹಾಯಕ | Oneindia Kannada

ಭಾರತದ ಮೂಲಭೂತ ಸೌಕರ್ಯಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಲು 22 ಹಸಿರು ಎಕ್ಸ್ ಪ್ರೆಸ್ ವೇ ಯೋಜನೆಯೊಂದಿಗೆ ಹಲವು ಯೋಜನೆಗಳನ್ನು ಸರ್ಕಾರ ಕೈಗೆತ್ತಿಕೊಂಡಿದೆ ಎಂದು ಹೇಳಿದೆ.

English summary
Bengaluru Ring Road project will boost economic activities around Bengaluru says Union Minister Nitin Gadkari.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X