ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಿಂಗ್ ರೋಡ್ ಯೋಜನೆ ಕಾಮಗಾರಿ ಅಂತೂ ಆರಂಭವಾಗೇಬಿಡ್ತು!

|
Google Oneindia Kannada News

ಬೆಂಗಳೂರು, ಜನವರಿ 12: ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ರಿಂಗ್ ರೋಡ್ ಕಾಮಗಾರಿಗೆ ಅಂತೂ ಕಾಲ ಕೂಡಿಬಂದಿದೆ.

ಇದು ಡಾಬಸ್‌ಪೇಟೆ ಹಾಗೂ ದೊಡ್ಡ ಬಳ್ಳಾಪುರವನ್ನು ಸಂಪರ್ಕಿಸುವ ರಸ್ತೆಯಾಗಿದ್ದು, ಸುಮಾರು 1350 ಕೋಟಿ ರೂ ಯೋಜನೆ ಇದಾಗಿದೆ.

ಸಾಕಷ್ಟು ತಡವಾಗಿ ಅಂತೂ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ ಕಾಮಗಾರಿ ಆರಂಭವಾಗಿದೆ.
ನಾಲ್ಕು ಪಥದ ರಸ್ತೆ ಇದಾಗಿದ್ದು, ರಿಂಗ್ ರಸ್ತೆಯು ಬೆಂಗಳೂರು ನಗರ ಹಾಗೂ ಅತಿ ಹೆಚ್ಚು ಟ್ರಾಫಿಕ್ ಇರುವ ರಸ್ತೆಯನ್ನು ಸಂಪರ್ಕಿಸಲಿದೆ.

Ring Road Project Finally Begins

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ರಿಂಗ್ ರಸ್ತೆ ಯೋಜನೆಯ ಇನ್‌ಚಾರ್ಜ್ ಆಗಿದ್ದಾರೆ. ತುಮಕೂರು ರಸ್ತೆಯ ದಾಬಸ್‌ಪೇಟೆಯಿಂದ ದೊಡ್ಡಬಳ್ಳಾಪುರದ ಹಿಂದೂಪುರ ರಸ್ತೆ ಹಾಗೂ ದೇವನಹಳ್ಳಿ(ಹೈದರಾಬಾದ್ ರಸ್ತೆ), ಹೊಸಕೋಟೆ(ಕೋಲಾರ)ರಸ್ತೆಯನ್ನು ಸಂಪರ್ಕಿಸಲಿದೆ.

ದಾಬಸ್‌ಪೇಟೆ-ದೊಡ್ಡಬಳ್ಳಾಪುರ ನಡುವಿನ ಮೊದಲ ಹಂತದಕಾಮಗಾರಿಗೆ ಚಾಲನೆ ದೊರೆತಿದೆ. 42 ಕಿ.ಮೀ ಉದ್ದದ ಮಾರ್ಗದ ಕಾಮಗಾರಿ ಆರಂಭವಾಗಿದೆ. ಇದು 1350 ಕೋಟಿ ರೂ ಯೋಜನೆಯಾಗಿದೆ.

ಇದರಲ್ಲಿ ದೊಡ್ಡಬಳ್ಳಾಪುರದಲ್ಲಿ ನಿರ್ಮಾಣವಾಗಲಿರುವ 2.5 ಕಿ.ಮೀ ಉದ್ದದ ಫ್ಲೈಓವರ್ ಕೂಡ ಸೇರಿದೆ. 2022ರ ಮಾರ್ಚ್‌ನಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.

ರಸ್ತೆಯನ್ನು ಅಗಲೀಕರಣ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಮರಗಳನ್ನು ಈಗಾಗಲೇ ಕಡಿಯಲಾಗಿದೆ. ಒಮ್ಮೆ ಈ ಕಾಮಗಾರಿ ಪೂರ್ಣಗೊಂಡರೆ ಹೈದರಾಬಾದ್ ರಸ್ತೆ, ಓಲ್ಡ್ ಮದ್ರಾಸ್ ರಸ್ತೆ, ಸೇರಿದಂತೆ ಬೇರೆ ಕಡೆಯ ಟ್ರಾಫಿಕ್ ಈ ರಸ್ತೆಯಲ್ಲಿ ಶುರುವಾಗಲಿದೆ.

Recommended Video

ಮೈಸೂರು: ಡಿಸಿ ರೋಹಿಣಿ ಮತ್ತು ಸಾರಾ ಮಹೇಶ್ ಮಧ್ಯೆ ಶೀತಲ ಸಮರ | Oneindia Kannada

ಬೆಂಗಳೂರು ಏರ್‌ಪೋರ್ಟ್‌ಗೆ ಹೊಸಕೋಟೆ, ಚಿಂತಾಮಣಿ, ಕೋಲಾರ, ಮಾಲೂರಿನಿಂದ ಬರುವವರಿಗೆ ದೇವನಹಳ್ಳಿ ರಸ್ತೆಯಿಂದ ಅನುಕೂಲವಾಗಲಿದೆ.

English summary
After Much Delay, work under phase one of the Satellite tow ring road has finally begun.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X