ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ಎಸಿ ಬಸ್‌ಗಳ ದರ ಕಡಿಮೆ ಮಾಡಿದ್ರೂ ಪ್ರಯಾಣಿಕರು ಅಷ್ಟಕ್ಕಷ್ಟೇ

|
Google Oneindia Kannada News

ಬೆಂಗಳೂರು, ಜನವರಿ 25: ಬಿಎಂಟಿಸಿಯು ಎಸಿ ಬಸ್‌ಗಳ ದರ ಕಡಿಮೆ ಮಾಡಿದರೂ ಪ್ರಯಾಣಿಕರ ಸಂಖ್ಯೆ ಕಡಿಮೆಯೇ ಇದೆ.

ಕೊರೊನಾ ಲಾಕ್‌ಡೌನ್ ಬಳಿಕ ಬಸ್‌ಗಳ ಸಂಚಾರ ಆರಂಭವಾದ ಮೇಲೆ ಎಸಿ ಬಸ್‌ಗಳನ್ನು ಹತ್ತುವವರ ಸಂಖ್ಯೆ ಕಡಿಮೆಯಾಗಿತ್ತು. ಹಾಗಾಗಿ ಬಿಎಂಟಿಸಿಯು ಪ್ರಯಾಣಿಕರನ್ನು ತನ್ನತ್ತ ಸೆಳೆಯುವುದಕ್ಕಾಗಿ ಎಸಿ ಬಸ್‌ ಟಿಕೆಟ್ ದರವನ್ನು ಕಡಿಮೆ ಮಾಡಿತ್ತು. ಆದರೂ ಪ್ರಯಾಣಿಕರ ಸಂಖ್ಯೆ ಶೇ.20 ರಿಂದ 25ರಷ್ಟಿದೆ ಎಂದು ಬಿಎಂಟಿಸಿ ಹೇಳಿದೆ.

ಹೊಸ ಎಸಿ ಬಸ್‌ಗಳ ಖರೀದಿ ನಿಲ್ಲಿಸಿದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಹೊಸ ಎಸಿ ಬಸ್‌ಗಳ ಖರೀದಿ ನಿಲ್ಲಿಸಿದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ

ಕೊರೊನಾ ಲಾಕ್‌ಡೌನ್ ಮುಗಿದಾಗಿನಿಂದಲೂ ಜನರು ಐಷಾರಾಮಿ ಬಸ್‌ಗಳಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ. ಜನರು ಇನ್ನೂ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ.

Ridership Remains At 20-25 Percent Despite Slash In AC Bus Fares

ಇದು ಬಿಎಂಟಿಸಿ ಮೇಲೆ ನೇರವಾಗಿ ಪರಿಣಾಮ ಬೀರಿದೆ. ಜನಪ್ರಿಯ ಮಾರ್ಗಗಳಾದ ಔಟರ್‌ ರಿಂಗ್ ರಸ್ತೆ, ಕಾಡುಗೋಡಿ ಮತ್ತು ಎಲೆಕ್ಟ್ರಾನಿಕ್‌ಸಿಟಿಗಳಲ್ಲಿ ಕೆಲವು ಬಸ್‌ಗಳು ಮಾತ್ರ ಓಡುತ್ತಿವೆ.

ಬಿಎಂಟಿಸಿಯು ಎಸಿ ಬಸ್‌ಗಳಿಗೆ ಪ್ರತಿ ತಿಂಗಳು 50 ಲಕ್ಷ ರೂ. ಖರ್ಚು ಮಾಡುತ್ತಿದೆ. ಬಿಎಂಟಿಸಿಯು 860 ಬಸ್‌ಗಳ ಪೈಕಿ ಕೇವಲ 150 ಬಸ್‌ಗಳ ಕಾರ್ಯಾಚರಣೆ ನಡೆಸುತ್ತಿದೆ.

ಸಧ್ಯಕ್ಕೆ ಹೊಸ ಎಸಿ ಬಸ್‌ಗಳ ಖರೀದಿ ಇಲ್ಲ ಎಂದು ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ತಿಳಿಸಿದೆ. ಕೊರೊನಾ ಸೋಂಕಿನಿಂದಾಗಿ ಸುಮಾರು ಏಳೆಂಟು ತಿಂಗಳುಗಳ ಕಾಲ ಬಸ್‌ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಅಷ್ಟೇ ಅಲ್ಲದೆ ಪ್ರಯಾಣಿಕರು ಎಸಿ ಬಸ್‌ಗಳತ್ತ ಮುಖ ಮಾಡದ ಕಾರಣ, ನಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಸಧ್ಯಕ್ಕೆ ಹೊಸ ಎಸಿ ಬಸ್‌ಗಳ ಖರೀದಿ ಇಲ್ಲ ಎಂದು ನಿಗಮಗಳು ತಿಳಿಸಿವೆ.

ಬಿಎಂಟಿಸಿಯು ಎಸಿ ಬಸ್ ಟಿಕೆಟ್ ದರವನ್ನು ಶೇ.28ರಷ್ಟು ಕಡಿಮೆ ಮಾಡಿದೆ.ದೈನಂದಿನ ಪಾಸ್‌ ದರವನ್ನು 147 ರೂ. ಗಳಿಂದ 120 ರೂ.ಗಳಿಗೆ ಕಡಿಮೆ ಮಾಡಲಾಗಿದೆ. ಸಾಮಾನ್ಯ ಮತ್ತು ವಾಯುವಜ್ರ ಸೇವೆಗಳ ದರದಲ್ಲಿ ಯಾವುದೇ ಬದಲಾವಣೆ ಇಲ್ಲ.

Recommended Video

ರಾಜ್ಯದಲ್ಲಿ ಇರೋದು ಬಿಜೆಪಿ-ಕಾಂಗ್ರೆಸ್ ಮೈತ್ರಿ ಸರ್ಕಾರ-ಡಿಕೆಶಿ ವ್ಯಂಗ್ಯ | Oneindia Kannada

ವೋಲ್ವೊ ಬಸ್‌ಗಳ ಪ್ರಯಾಣ ದರವನ್ನು 5 ರೂ. ನಿಂದ 20 ರೂ.ವರೆಗೆ ಇಳಿಕೆ ಮಾಡಲಾಗಿದೆ. ಸಾಮಾನ್ಯ ಸೇವೆಗಳ ಮಾಸಿಕ (1050 ರೂ.) ಮತ್ತು ಹಿರಿಯ ನಾಗರಿಕರ ಸಾಮಾನ್ಯ ಮಾಸಿಕ (945 ರೂ.) ಪಾಸುದಾರರು ಚಾಲ್ತಿಯಲ್ಲಿರುವ ಪಾಸ್‌ ತೋರಿಸಿ ಭಾನುವಾರಗಳಂದು ವೋಲ್ವೊ ಬಸ್‌ಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

English summary
At the start of the New Year, the Bangalore Metropolitan Transport Corporation (BMTC) reduced the fares in air-conditioned buses in its fleet by 20% in what it termed as a “gift” to commuters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X