ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಂಕರ್ ಬಿದರಿ ಇ ಮೇಲ್ ಹ್ಯಾಕ್: ನಾಗಾಲ್ಯಾಂಡ್ ಮೂಲದ 3 ಬಂಧನ

|
Google Oneindia Kannada News

ಬೆಂಗಳೂರು, ಮಾರ್ಚ್‌ 10: ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಇಮೇಲ್ ಹ್ಯಾಕ್ ಮಾಡಿ ಅವರ ಅಪ್ತರಿಂದ ಹಣ ವಸೂಲಿ ಮಾಡಿದ್ದ ನಾಗಾಲ್ಯಾಂಡ್ ಮೂಲದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಸಾರ್ವಜನಿಕರನ್ನು ವಂಚಿಸುವ ದೊಡ್ಡ ಜಾಲ ಸೃಷ್ಟಿ ಮಾಡಿದ್ದ ಸಂಗತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ನಾಗಾಲ್ಯಾಂಡ್ ಮಲದ ಥಿಯಾ (31), ಸೆರೋಸಾ (27) ಇಸ್ಟರ್ ಕೊನ್ಯಾಕ್ ಅಲಿಯಾಸ್ ರುಚಿಕಾ ಬಂಧಿತ ಆರೋಪಿಗಳು. ಬೆಂಗಳೂರಿನ ಹೊರಮಾವು ಸಮೀಪ ಮನೆ ಮಾಡಿಕೊಂಡಿದ್ದರು. ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ಬಿದರಿ ಅವರ ಇಮೇಲ್ ಖಾತೆಯನ್ನು ಹ್ಯಾಕ್ ಮಾಡಿದ್ದ ಈ ಕಿರಾತಕರು ಬಿದರಿ ಆಪ್ತರಿಗೆ ಇ ಮೇಲ್ ಸಂದೇಶ ರವಾನಿಸಿದ್ದರು.

ನಿವೃತ್ತ ಡಿಜಿಪಿ ಇ ಮೇಲ್ ಐಡಿ ಹ್ಯಾಕ್ ಮಾಡಿ ವಂಚನೆ!ನಿವೃತ್ತ ಡಿಜಿಪಿ ಇ ಮೇಲ್ ಐಡಿ ಹ್ಯಾಕ್ ಮಾಡಿ ವಂಚನೆ!

ನನಗೆ ತುರ್ತಾಗಿ 25 ಸಾವಿರ ಹಣ ಬೇಕಿದೆ. ನನ್ನ ಈ ನಂಬರ್ ಗೆ ಕಳಿಸಿ, ಒಂದು ದಿನದಲ್ಲಿ ವಾಪಸು ಕಳಿಸುತ್ತೇನೆ ಎಂಬ ಸಂದೇಶಯುಳ್ಳ ಮಾಹಿತಿ ಕಳುಹಿಸಿದ್ದರು. ಇದನ್ನು ನಂಬಿ ಬದರಿ ಆಪ್ತರೊಬ್ಬರು ಹಣವನ್ನು ಹಾಕಿ ಪೋನ್ ಮಾಡಿ ತಿಳಿಸಿದ್ದಾರೆ. ಈ ವೇಳೆ ಯಾರೋ ಸೈಬರ್ ವಂಚಕರು ಬಿದರಿ ಹೆಸರಿನಲ್ಲಿ ಮೋಸ ಮಾಡಿದ್ದಾರೆ ಎಂಬುದು ಗೊತ್ತಾಗಿದೆ. ಈ ಕುರಿತು ಶಂಕರಿ ಬಿದರಿ ಆಪ್ತರು ಸೈಬರ್ ಪೊಲೀಸರಿಗೆ ದೂರು ನೀಡಿದ್ದರು.

Retired police officer Shankar Bidari email hack case: Nagaland based three cheaters arrested

ಪ್ರಕರಣದ ತನಿಖೆ ನಡೆಸಿದ ಸೈಬರ್ ಪೊಲೀಸರು, ನಾಗಾಲ್ಯಾಂಡ್ ಮೂಲದ ರುಚಿಕಾ ಅಲಿಯಾಸ್ ಇಸ್ಟರ್ ಕೊನ್ಯಾಕ್ ಳನ್ನು ಬಂಧಿಸಿದ್ದರು. ವಿಚಾರಣೆ ನಡೆಸಿದಾಗ ನಾಲ್ಕು ವರ್ಷದ ಹಿಂದೆ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡುತ್ತಿದ್ದಳು. ಅಂತರ್ಜಾಲದಲ್ಲಿ ಪೀಟರ್ ಮತ್ತು ಜೇಮ್ಸ್ ಎಂಬ ಸೈಬರ್ ವಂಚಕರು ಪರಿಚಿತರಾಗಿ, ಸಾರ್ವಜನಿಕರಿಗೆ ವಂಚಿಸುವ ಯೋಜನೆ ರೂಪಿಸಿದ್ದಾರೆ.ಇದಕ್ಕಾಗಿ ಅಗತ್ಯವಿರುವ ಬ್ಯಾಂಕ್ ಖಾತೆ ಬೇಕಿತ್ತು. ನಾಗಾಲ್ಯಾಂಡ್ ನಿರುದ್ಯೋಗಿ ಯುವಕರಿಗೆ ಹಣದ ಅಮಿಷೆ ಒಡ್ಡಿ ಅವರ ಆಧಾರ್ ಪಾನ್ ಕಾರ್ಡ್ ವಿವರ ಪಡೆದು ಬೋಗಸ್ ಬ್ಯಾಂಕ್ ಖಾತೆ ತೆರೆದಿದ್ದರು. ವಿವಿಧ ಬ್ಯಾಂಕ್ ಗಳಲ್ಲಿ 6 ಕ್ಕೂ ಹೆಚ್ಚು ಬ್ಯಾಂಕ್ ಖಾತೆ ತೆರೆದಿದ್ದರು.

Recommended Video

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ಗೃಹ ಇಲಾಖೆಯಿಂದ ತನಿಖೆಗೆ ಘೋಷಣೆ ಮಾಡಲಾಗುತ್ತೆ- ಸಿ ಎಂ ಬಿ ಎಸ್ ವೈ | Oneindia Kannada

ಸಾರ್ವಜನಿಕರ ಸಾಮಾಜಿಕ ಜಾಲ ತಾಣಗಳನ್ನು ಹ್ಯಾಕ್ ಮಾಡಿ, ಅವರ ಆಪ್ತ ವರ್ಗಕ್ಕೆ ಹಣ ಕಳಿಸುವಂತೆ ಸಂದೇಶ ರವಾನಿಸುತ್ತಿದ್ದರು. ಹ್ಯಾಕ್ ಮಾಡಲಿಕ್ಕೆ ಪ್ರಮುಖ ವ್ಯಕ್ತಿಗಳ ಸಾಮಾಜಿಕ ಜಾಲ ತಾಣದ ಖಾತೆಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಬಂದ ಹಣವನ್ನು ಈ ಖಾತೆಗಳಿಗೆ ಹಾಕಿಸಿಕೊಂಡು ವಂಚನೆ ಮಾಡುತ್ತಿದ್ದರು. ಈ ಕುರಿತು ಶಂಕರ್ ಬಿದರಿ ಅವರ ಆಪ್ತ ನೀಡಿದ ದೂರಿನ ಮೇರೆಗೆ ಮೂವರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿಗಳಾದ ಜೇಮ್ಸ್ ಮತ್ತು ಪೀಟರ್ ತಲೆ ಮರೆಸಿಕೊಂಡಿದ್ದಾರೆ. ಆಗ್ನೇಯ ವಿಭಾಗದ ಪೊಲೀಸ್ ಇನ್‌ಸ್ಪೆಕ್ಟರ್ ಎಲ್‌.ವೈ. ರಾಜೇಶ್ ಮತ್ತು ತಂಡ ಈ ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

English summary
Former DGP of Karnataka Shankar bidari e mail Hack case: South East cyber station officers have been arrested 3 accused persons in Bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X