ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಗನಂತಿದ್ದ ಕೆಲಸಗಾರ ನಿಂದ ನಿವೃತ್ತ IAS ಅಧಿಕಾರಿಗೆ ಟೋಪಿ

|
Google Oneindia Kannada News

ಬೆಂಗಳೂರು, ಜೂ. 29: ನಿವೃತ್ತ ಐಎಎಸ್ ಅಧಿಕಾರಿಯೊಬ್ಬರಿಗೆ ಮನೆ ಕೆಲಸಗಾರನೇ ಮೋಸ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸ್ವಂತ ಮಗನಂತೆ ಬಿಂಬಿಸಿಕೊಂಡಿದ್ದ ಕೆಲಸಗಾರ ಐಎಎಸ್ ಅಧಿಕಾರಿಯ ಚೆಕ್‌ಗಳನ್ನು ಕದ್ದು ಹದಿನಾಲ್ಕು ಲಕ್ಷ ರೂ. ಲಪಟಾಯಿಸಿ ಪರಾರಿಯಾಗಿದ್ದಾನೆ.

ಹೌದು ಇದು ನಿವೃತ್ತ ಐಎಎಸ್ ಅಧಿಕಾರಿ ವಿಜಯ್ ಅವರ ಕಥೆ. ಕೋರಮಂಗಲದಲ್ಲಿ ನೆಲೆಸಿರುವ ನಿವೃತ್ತ ಐಎಎಸ್ ಅಧಿಕಾರಿ ವಿಜಯ್ ಅವರು ಸೆಕ್ಯುರಿಟಿ ಏಜೆನ್ಸಿ ಮೂಲಕ ಕಾಸಿಂ ಸಾಬ್ ಎಂಬ ಕೆಲಸಗಾರನ್ನು ಮನೆ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಸ್ವಂತ ಮಗನಂತೆ ಬಿಂಬಿಸಿಕೊಂಡಿದ್ದ ಕಾಸಿಂಸಾಬ್‌ಗೆ ಸಂಬಳ ಜತೆಗೆ ಹೆಚ್ಚುವರಿ ಹಣ ಕೂಡ ನೀಡುತ್ತಿದ್ದರು. ವಿಜಯ್ ಅವರಿಗೆ ಹಣ ಬೇಕೆಂದಾಗ ಕಾಸಿಂ ಸಾಬ್ ತಂದು ಕೊಡುತ್ತಿದ್ದ. ಕಾಸಿಂ ಸಾಬ್‌ನನ್ನು ವಿಜಯ್ ಕೂಡ ನಂಬಿದ್ದರು.

 Retired IAS officer cheated by worker in Bengaluru

Recommended Video

Kumaraswamy ಅವರು ಪ್ರಾದೇಶಿಕ ಪಕ್ಷದ ಮಹತ್ವವನ್ನು ತಿಳಿಸಿದರು | Oneindia Kannada

ಇತ್ತೀಚೆಗೆ ತನ್ನ ಅಣ್ಣನ ಮದುವೆಗೆಂದು ಊರಿಗೆ ಹೋಗಿರುವ ಕಾಸಿಂ ಸಾಬ್ ವಾಪಸು ಬಂದಿಲ್ಲ. ಒಂದು ವಾರ ಕಳೆದರೂ ವಾಪಸು ಬಂದಿಲ್ಲ. ಅನುಮಾನಗೊಂಡು ಸೆಕ್ಯುರಿಟಿ ಕಂಪನಿಯಲ್ಲಿ ವಿಚಾರಿಸಿದಾಗ ಆತ ಕೆಲಸ ಬಿಟ್ಟಿರುವ ವಿಷಯ ಗೊತ್ತಾಗಿದೆ. ಅನುಮಾನಗೊಂಡ ನಿವೃತ್ತ ಐಎಎಸ್ ಅಧಿಕಾರಿ ಬ್ಯಾಂಕ್‌ಗೆ ಹೋಗಿ ಪರಿಶೀಲನೆ ನಡೆಸಿದಾಗ ಬ್ಯಾಂಕ್ ನಲ್ಲಿದ್ದ ಹದಿನಾಲ್ಕು ಲಕ್ಷ ರೂ. ಹಣ ಲಪಟಾಯಿಸಿರುವುದು ಬೆಳಕಿಗ ಬಂದಿದ್ದು, ಕೋರಮಂಗಲ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

English summary
House keeper defrauded a retired IAS officer of Rs 14 Lakh from a bank account know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X