ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಜಿ ಡಿವೈಎಸ್‌ಪಿ ಪುತ್ರನ ಆಟಾಟೋಪ: ಯುವಕನ ಮೇಲೆ ಮಾರಣಾಂತಿಕ ಹಲ್ಲೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 5: ನಿವೃತ್ತ ಡಿವೈಎಸ್ ಪಿ ಪುತ್ರನೊಬ್ಬ ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ನಲಪಾಡ್ ರೌಡಿಸಂ ಮತ್ತೊಮ್ಮೆ ಕಣ್ಣುಮುಂದೆ ಬಂದಂತಾಗಿದೆ.

ಮಾಜಿ ಡಿವೈಎಸ್‌ಪಿ ಪುತ್ರನೊಬ್ಬ ಹೋಟೆಲ್ ವೊಂದರಲ್ಲಿ ಕ್ಷುಲ್ಲಕ ಕಾರಣಕ್ಕೆ ಬಿಯರ್ ಬಾಟಲಿಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಮ್ಮಗೊಂಡನಹಳ್ಳಿ ನಿವಾಸಿ ಎನ್.ಯುವರಾಜ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ, ನಿವೃತ್ತ ಡಿವೈಎಸ್‌ಪಿ ಪುತ್ರ ಜಕ್ಕೂರು ನಿವಾಸಿ ಸುಮನ್, ವಿಕ್ರಮ್ ತಲೆ ಮರೆಸಿಕೊಂಡಿದ್ದಾರೆ. ಹೈಗ್ರೌಂಡ್ಸ್ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಮೊಹಮ್ಮದ್ ನಲಪಾಡ್ ಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್ ಮೊಹಮ್ಮದ್ ನಲಪಾಡ್ ಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್

ಆರೋಪಿ ಸುಮನ್ ಡಿವೈಎಸ್‌ಪಿ ಕೋನಪ್ಪರೆಡ್ಡಿ ಅವರ ಪುತ್ರ, ಜಕ್ಕೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದಾನೆ. ಸೆಪ್ಟೆಂಬರ್ 8ರಂದು ರಾತ್ರಿ ರೇಸ್ ಕೋರ್ಸ್ ರಸ್ತೆಯಲ್ಲಿರುವ ರಿನೈಸಾನ್ಸ್ ಪಂಚತಾರಾ ಹೋಟೆಲ್ ಗೆ ತನ್ನ ಸ್ನೇಹಿತರೊಂದಿಗೆ ಹೋಗಿದ್ದಾನೆ, ಅಂದು ಊಟ ಮುಗಿಸಿ ಕೈತೊಳೆದುಕೊಂಡು ಬರುತ್ತಿರುವಾಗ ಆತನಿಗೆ ಯುವರಾಜ್ ಕೈ ತಾಗಿದೆ ಅಷ್ಟಕ್ಕೇ ಗಲಾಟೆ ಆರಂಭಿಸಿದ ಸುಮನ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

Retd DySP son led team attack on innocent

ವಿದ್ವತ್ ಮೇಲೆ ಹಲ್ಲೆ : ಮೊಹಮ್ಮದ್ ನಲಪಾಡ್ ಹೇಳಿದ ಘಟನೆಯ ವಿವರ ವಿದ್ವತ್ ಮೇಲೆ ಹಲ್ಲೆ : ಮೊಹಮ್ಮದ್ ನಲಪಾಡ್ ಹೇಳಿದ ಘಟನೆಯ ವಿವರ

ರಕ್ತಸ್ರಾವವಾಗಿ ಯುವರಾಜ್ ಸ್ಥಳದಲ್ಲೇ ಕುಸಿದು ಬಿದ್ದಿದ್ದು ಕಾರ್ತಿಕ್ ಕೂಡಲೇ ಸ್ನೇಹಿತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ, ಕಾರ್ತಿಕ್ ಕಾರಿನ ಬಳಿ ಬಂದ ದುಷ್ಕರ್ಮಿಗಳು ಚಾಕು ತೋರಿಸಿ ನೀನು ಹೊರಗೆ ಬಂದರೆ ನಿನ್ನನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆಯನ್ನು ಹಾಕಿದ್ದರು ಎನ್ನಲಾಗಿದೆ.

English summary
Suman, son of former DySP T. Konareddy and his inmates have allegedly attacked an innocent youth recently in a star hotel at race course road. High grounds police have registered a case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X