• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಈ ಹೊತ್ತಿಗೆ ಕಥಾಸ್ಪರ್ಧೆ: 'ಗಾಂಧಿ ಪ್ರಸಂಗ', 'ನೆಲಸಂಪಿಗೆ' ಪ್ರಥಮ

|

ಬೆಂಗಳೂರು, ಜನವರಿ 25: ಕಳೆದ ಐದು ವರ್ಷಗಳಿಂದ ಕನ್ನಡ ಸಾಹಿತ್ಯದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುವ ಈ ಹೊತ್ತಿಗೆ ನಡೆಸಿದ ಕಥಾ ಸ್ಪರ್ಧೆಯಲ್ಲಿ ಬಸವಣ್ಣೆಪ್ಪ ಕಂಬಾರ ಮತ್ತು ಕೆ. ಗೋವಿಂದ ಭಟ್ ಪ್ರಥಮ ಸ್ಥಾನ ಪಡೆದಿದ್ದಾರೆ.

ಈ ಹೊತ್ತಿಗೆಯು ತನ್ನ ಐದನೇ ವಾರ್ಷಿಕೋತ್ಸವ(2018)ದ ಅಂಗವಾಗಿ, ಕಳೆದ ನವೆಂಬರಿನಲ್ಲಿ ಎರಡು ಕಥಾ ಸ್ಪರ್ಧೆಗಳನ್ನು (1.ಎಲ್ಲರಿಗಾಗಿ 2.ಕಾಲೇಜು ವಿದ್ಯಾರ್ಥಿಗಳಿಗಾಗಿ) ಏರ್ಪಡಿಸಿತ್ತು.

'ಶಿರಸಿ ಭವನ'ದ ತೇಜಸ್ವಿನಿ ಹೆಗಡೆ- ಸ್ವಸ್ತಿ ಕಾದಂಬರಿ ಸ್ಪರ್ಧೆ ವಿಜೇತೆ

ಈ ಸ್ಪರ್ಧೆಯಲ್ಲಿ ರಾಜ್ಯದ ಎಲ್ಲೆಡೆಯಿಂದ, ಹೊರ ರಾಜ್ಯಗಳಿಂದ ಹಾಗು ವಿದೇಶದಲ್ಲಿರುವ ಕನ್ನಡಿಗರೂ ಭಾಗವಹಿಸಿದ್ದರು. ನಾಡಿನ ಖ್ಯಾತ ಸಾಹಿತಿಗಳಾದ ಡಾ. ಎಂ. ಎಸ್ ಆಶಾದೇವಿ - ಕಾಲೇಜು ವಿದ್ಯಾರ್ಥಿಗಳ ವಿಭಾಗ, ಹಾಗು ಡಾ. ಕೆ ಸತ್ಯನಾರಾಯಣ, ಶ್ರೀಮತಿ. ಲಲಿತಾ ಸಿದ್ಧಬಸವಯ್ಯ, ಶ್ರೀ. ವಿಕಾಸ್ ನೇಗಿಲೋಣಿಯವರು - ಎಲ್ಲರಿಗಾಗಿ ವಿಭಾಗದ ಈ ಸ್ಪರ್ಧೆಗಳ ತೀರ್ಪುಗಾರರಾಗಿದ್ದರು.

ಫೆಬ್ರವರಿ 11, 2018 ರಂದು ಬೆಂಗಳೂರಿನ ಕಪ್ಪಣ್ಣ ಅಂಗಳ ಸಭಾಂಗಣದಲ್ಲಿ, ಬೆಳಿಗ್ಗೆ 10 ರಿಂದ ಸಂಜೆ 5.30ರವರೆಗೆ ನಡೆಯಲಿರುವ ಈ ಹೊತ್ತಿಗೆಯ 'ಹೊನಲು' ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಎರಡೂ ವಿಭಾಗದ ಫಲಿತಾಂಶ ಈ ಕೆಳಗಿನಂತಿದೆ.

ಎಲ್ಲರಿಗಾಗಿ ವಿಭಾಗದಲ್ಲಿ

ಅನುಕ್ರಮವಾಗಿ ಬೆಳಗಾವಿಯ ಶ್ರೀ. ಬಸವಣ್ಣೆಪ್ಪ ಕಂಬಾರ ಅವರ ಕಥೆ 'ಗಾಂಧಿ ಪ್ರಸಂಗ' ಪ್ರಥಮ (ರೂ. 5000 ನಗದು ಹಾಗು ಪ್ರಶಸ್ತಿ ಫಲಕ),

ಬೆಂಗಳೂರಿನ ಶ್ರೀ. ಮಧುಸೂದನ ವೈ. ಎನ್ ಅವರ ಕಥೆ 'ಬೋಣಿ' ದ್ವಿತೀಯ (ರೂ. 3000 ನಗದು ಹಾಗು ಪ್ರಶಸ್ತಿ ಫಲಕ),

ತೆಲಗರಹಳ್ಳಿಯ ಡಾ. ಮಹೇಂದ್ರ ಎಸ್. ತೆಲಗರಹಳ್ಳಿ ಅವರ ಕಥೆ 'ಸುಬ್ಬಿಯ ಗರ್ಭಪಾತ' ತೃತೀಯ (ರೂ. 3000 ನಗದು ಹಾಗು ಪ್ರಶಸ್ತಿ ಫಲಕ) ಬಹುಮಾನಗಳನ್ನು ಪಡೆದುಕೊಂಡಿದ್ದು, ಶಿವಮೊಗ್ಗದ ಶ್ರೀ. ಶಿ. ಜು ಪಾಶಾ ಅವರ 'ಅಚರ್ಚಿತ' ಮತ್ತು ಬೆಂಗಳೂರಿನ ಶ್ರೀಮತಿ. ಛಾಯಾ ಭಟ್ ಅವರ 'ಹುಲ್ಲಾಗು ಬೆಟ್ಟದಡಿ' ಕಥೆಗಳು ಮೆಚ್ಚುಗೆ ಪಡೆದ ಕಥೆಗಳಾಗಿವೆ.

ಅನುಕ್ರಮವಾಗಿ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಮೊದಲ ವರ್ಷದ ಎಂ.ಎ ವ್ಯಾಸಂಗ ಮಾಡುತ್ತಿರುವ ಕೆ. ಗೋವಿಂದ ಭಟ್ ಅವರ ಕಥೆ 'ನೆಲ ಸಂಪಿಗೆ' ಪ್ರಥಮ (ರೂ. 5000 ನಗದು ಹಾಗು ಪ್ರಶಸ್ತಿ ಫಲಕ),

ಮುಂಬಯಿ ವಿಶ್ವವಿದ್ಯಾಲಯದಲ್ಲಿ ಮೊದಲ ವರ್ಷದ ಎಂ.ಎ ವ್ಯಾಸಂಗ ಮಾಡುತ್ತಿರುವ ಇನ್ನೋರ್ವ ವಿದ್ಯಾರ್ಥಿನಿ ಅನಿತಾ ಪಿ ಪೂಜಾರಿ ತಾಕೊಡೆ ಅವರ ಕಥೆ 'ಭೈರಪ್ಪ ಗುಡ್ಡ ಮತ್ತು ಕವುಜುಗ ಹಕ್ಕಿ' ದ್ವಿತೀಯ (ರೂ. 3000 ನಗದು ಹಾಗು ಪ್ರಶಸ್ತಿ ಫಲಕ),

ಮಂಗಳೂರು ವಿಶ್ವವಿದ್ಯಾಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನಾ ವಿಧ್ಯಾರ್ಥಿಯಾದ ಮುಸ್ತಫಾ ಕೆ. ಎಚ್ ಅವರ ಕಥೆ 'ಕಂಚಿನ ಪುತ್ಥಳಿ' ತೃತೀಯ (ರೂ. 2000 ನಗದು ಹಾಗು ಪ್ರಶಸ್ತಿ ಫಲಕ)

ಶಿವಮೊಗ್ಗದ ಪಿ.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್‍ಮೆಂಟ್ ನಲ್ಲಿ ತೃತೀಯ ವರ್ಷದ ಬಿ.ಇ ಓದುತ್ತಿರುವ, ಪ್ರಸನ್ನ ವೆಂಕಟರಮಣ ಭಟ್ ಅವರ ಕಥೆ 'ಲಾಸ್ಟ್ ಕನ್ನಡಿಗ', ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ದ್ವಿತೀಯ ವರ್ಷದ ಎಂ.ಎಸ್ಸಿ ಓದುತ್ತಿರುವ, ಭಾಗ್ಯ ಬಿರಾದರ ಅವರ ಕಥೆ 'ಉಸಿರಲ್ಲಿ ಹಸಿರಾದ ಹೆಸರು' ಮತ್ತು ಉಡುಪಿಯ ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಎಸ್ಸಿ ಓದುತ್ತಿರುವ, ಕೃತಿಕಾ ಎ. ಜಿ ಅವರ 'ಸುಳಿಯೊಳಗಿನ ಬಂಧ' ಕಥೆಗಳು ಮೆಚ್ಚುಗೆ ಪಡೆದ ಕಥೆಗಳಾಗಿವೆ ಎಂದು ಈ ಹೊತ್ತಿಗೆಯ ಮ್ಯಾನೇಜಿಂಗ್ ಟ್ರಸ್ಟಿ ಜಯಲಕ್ಷ್ಮೀ ಪಾಟೀಲ್ ತಿಳಿಸಿದ್ದಾರೆ.

English summary
E Hottige an organisation which ecourges young writers to come forward, had arrenged Kannada story writing competition for young writers and also for college students on November 2017. Here is the results! The winners will recieve prizes on Feb 11th in Kappanna Hall in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X